ಹುಬ್ಬಳ್ಳಿ: ಬಿಜೆಪಿ ಮತ್ತೊಮ್ಮೆ ಹುಬ್ಬಳ್ಳಿ, ಧಾರವಾಡ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ಅಧಿಕಾರ ಹಿಡಿಯುವುದು ಖಚಿತ. 60ಕ್ಕೂ ಹೆಚ್ಚು ಸ್ಥಾನ ಗೆಲುವ ವಿಶ್ವಾಸವಿದೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಹೇಳಿದರು.
ನಗರದಲ್ಲಿಂದು ಪಾಲಿಕೆ ಚುನಾವಣಾ ಪ್ರಚಾರ ಕಚೇರಿ ಉದ್ಘಾಟಿಸಿ ಮಾತನಾಡಿದ ಅವರು, ಬಿಜೆಪಿ ಚುನಾವಣಾ ವಿಚಾರದಲ್ಲಿ ಮಂಚೂಣಿಯಲ್ಲಿ ಕ್ರೀಯಾಶೀಲವಾಗಿ ಕೆಲಸ ಕಾರ್ಯ ಮಾಡುತ್ತಿದೆ. ಹೀಗಾಗಲೇ ಹಲವಾರು ವಾರ್ಡ್‍ಗಳಲ್ಲಿ ಪ್ರಚಾರ ಕಾರ್ಯಗಳು ನಡೆಯುತ್ತಿವೆ. 82 ಸೀಟು ಹಂಚಿಕೆ ಸವಾಲಾಗಿತ್ತು. ಎರಡು ಬಾರಿ ಆಡಳಿತ ನಡೆಸಿದ್ದೇವೆ. ಘೋಷಣೆ ಅತೀ ಬೇಗ ಆಗಿದೆ. ಅಭ್ಯರ್ಥಿಗಳಲ್ಲಿ ಪೈಪೋಟಿ ನಡುವೆ ಟಿಕೆಟ್ ಹಂಚಲಾಗಿದೆ. ಆದರೂ ಕೆಲವರಲ್ಲಿ ಅಸಮಾಧಾನವಿದೆ. ಒಳ್ಳೆ ಬೆಂಬಲ ಜನರಿಂದ ಸಿಗುತ್ತಿದೆ. ಸಾಕಷ್ಟು ಕೆಲಸ ಕಾರ್ಯಗಳು ನಡೆಯುತ್ತಿದ್ದು, ಮಾದರಿ ನಗರ ಮಾಡಲು ಬಿಜೆಪಿ ಪಣತೊಟ್ಟಿದೆ ಎಂದರು.
Advertisement
Advertisement
ಬಿಜೆಪಿ ಪದವೀಧರ, ಎಂಕಾಂ, ಎಂಬಿಬಿಎಸ್ ಸೇರಿದಂತೆ ವಿದ್ಯಾವಂತರಿಗೆ ಟಿಕೆಟ್ ನೀಡಿದ್ದು, ಮೂರನೇ ಬಾರಿಗೂ ಬಿಜೆಪಿ ಅಧಿಕಾರಕ್ಕೆ ಬರಲಿದೆ. 60ಕ್ಕೂ ಹೆಚ್ಚು ಸ್ಥಾನ ಗೆಲುವ ವಿಶ್ವಾಸವಿದೆ. ಎಎಪಿ ತಮ್ಮ ಅಭ್ಯರ್ಥಿಗಳಿಗೆ ಧಮ್ಕಿ ಹಾಕಿದ್ದಾರೆ ಎಂಬ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಅವರು ಸುಳ್ಳು ಅಪಾದನೆ ಮಾಡಿದ್ದಾರೆ. ದೂರು ನೀಡುವ ಕೆಲಸ ಮಾಡುತ್ತಿದ್ದಾರೆ. ಬಿಜೆಪಿ ಯಾವುದೇ ಗುಂಡಾ ರಾಜಕೀಯ ಮಾಡಿಲ್ಲ ಎಂದರು. ಇದನ್ನೂ ಓದಿ: ಅಧಿಕಾರಕ್ಕಾಗಿ ಹೊಡೆದಾಡುವುದನ್ನು ಬಿಟ್ಟು ಆಡಳಿತದತ್ತ ಗಮನ ಹರಿಸಿ: ಯತೀಂದ್ರ ಸಿದ್ದರಾಮಯ್ಯ
Advertisement
Advertisement
ಬಿಜೆಪಿ ನಗರ ಅಧ್ಯಕ್ಷ ಅರವಿಂದ ಬೆಲ್ಲದ ಅವರು ಪಾಲಿಕೆ ಚುನಾವಣಾ ಪ್ರಚಾರದಲ್ಲಿ ಯಾಕೆ ಭಾಗಿಯಾಗುತ್ತಿಲ್ಲ ಎಂಬ ಆರೋಪಕ್ಕೆ ಪ್ರತಿಕ್ರಿಯರ ನೀಡಲು ನಿರಾಕರಿಸಿದ ಶೆಟ್ಟರ್ ಅವರು, ಪ್ರಶ್ನೆ ಪಾಸ್ ಮಾಡಿ, ಮುಂದೆ ಏನಾದರೂ ಬೇರೆ ಪ್ರಶ್ನೆ ಇದ್ದರೆ ಕೇಳಿ ಎಂದು ಹೇಳುವ ಮೂಲಕ ಬೆಲ್ಲದ ಅನುಮಪಸ್ಥಿಗೆ ಪರೋಕ್ಷವಾಗಿ ತಿರುಗೇಟು ನೀಡಿದರು.
ಈ ವೇಳೆ ಮಾತನಾಡಿದ ಕೈಮಗ್ಗ ಮತ್ತು ಜವಳಿ ಹಾಗೂ ಸಕ್ಕರೆ ಖಾತೆ ಸಚಿವ ಶಂಕರ್ ಪಾಟೀಲ್ ಮುನೇನಕೊಪ್ಪ ಅವರು, ಪಾಲಿಕೆಯಲ್ಲಿ ಹೆಚ್ಚಿನ ಸ್ಥಾನ ಗೆಲುವ ವಿಶ್ವಾಸವಿದೆ. ಅವಳಿ ನಗರದ ಅಭಿವೃದ್ಧಿಗೆ ಪ್ರಹ್ಲಾದ್ ಜೋಶಿ ಹಾಗೂ ಜಗದೀಶ್ ಶೆಟ್ಟರ್ ಅವರು ಸಾಕಷ್ಟು ಕೆಲಸ ಕಾರ್ಯಗಳನ್ನು ಮಾಡಿದ್ದಾರೆ. ಕೊರೊನಾದಿಂದ ಕಾಮಗಾರಿ ವಿಳಂಭವಾಗಿದೆ. ಮುಂದಿನ ದಿನಗಳಲ್ಲಿ ಅವಳಿನಗರದ ಹೆಚ್ಚಿನ ಅಭಿವೃದ್ಧಿ ಮಾಡುವ ಗುರಿಯನ್ನು ಬಿಜೆಪಿ ಹೊಂದಿದ್ದು, ಮತ್ತೊಮ್ಮೆ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.