ಕಲಬುರಗಿ: ಇಂಧನ ಸಚಿವ ಡಿಕೆ ಶಿವಕುಮಾರ್ ನಿವಾಸದ ಮೇಲೆ ಆದಾಯ ತೆರಿಗೆ ಇಲಾಖೆಯವರು ದಾಳಿ ನಡೆಸಿದ ಬಳಿಕ ಬೇನಾಮಿ ಆಸ್ತಿ ಪತ್ತೆಯಾಗಿದೆ ಎನ್ನುವ ಮಾಹಿತಿ ಸಿಕ್ಕಿದ್ದರೂ ಈ ಆಸ್ತಿಗಳ ಮೌಲ್ಯ ಎಷ್ಟು ಎನ್ನುವುದನ್ನು ಆದಾಯ ತೆರಿಗೆ ಇಲಾಖೆ ಇದೂವರೆಗೂ ಬಹಿರಂಗಪಡಿಸಿಲ್ಲ. ಆದರೆ ಈಗ ವಿಧಾನಸಭೆಯ ಪ್ರತಿಪಕ್ಷದ ನಾಯಕ ಜಗದೀಶ್ ಶೆಟ್ಟರ್ ಪತ್ತೆಯಾದ ಬೇನಾಮಿ ಆಸ್ತಿಯ ಮೌಲ್ಯದ ವಿವರವನ್ನು ನೀಡಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಐಟಿ ಇಲಾಖೆ ಕರ್ನಾಟಕದಲ್ಲಿ ಹುಟ್ಟಿಲ್ಲ. ಸ್ವಾತಂತ್ರ್ಯ ದಿನದಿಂದ ಅದು ಹುಟ್ಟಿದೆ. ನಮಗೆ ಬಂದ ಮಾಹಿತಿ ಪ್ರಕಾರ ಡಿಕೆಶಿ ಮನೆಯಲ್ಲಿ ಬೇನಾಮಿ ಆಸ್ತಿ ಇದ್ದು, ಇದರ ಮೌಲ್ಯ 300 ಕೋಟಿ ರೂ. ಎಂದು ಶೆಟ್ಟರ್ ತಿಳಿಸಿದರು.
Advertisement
ಕಾಂಗ್ರೆಸ್ ಪಕ್ಷದವರು ಎಷ್ಟು ಜನ ದಲಿತ ಮಹಿಳೆಯರನ್ನು ಮದುವೆಯಾಗಿದ್ದಾರೆ ಎಂದು ಪ್ರಶ್ನಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಅಸ್ಪøಶ್ಯತೆಯ ಬಗ್ಗೆ ಸವಾಲ್ ಹಾಕಿದ ಶೆಟ್ಟರ್, ಮಾತನಾಡಿದ್ರೆ ಅಹಿಂದ ಸರ್ಕಾರ ಎನ್ನುವ ಸಿಎಂ ಇದರ ಬಗ್ಗೆ ಉತ್ತರ ಕೊಡಬೇಕಾಗಿದೆ. ಇನ್ನು ರಾಜ್ಯಕ್ಕೆ ಅಮಿತ್ ಶಾ ಭೇಟಿ ಸಂದರ್ಭದಲ್ಲಿ ಪಕ್ಷ ಸಂಘಟನೆ ಕುರಿತು ಬೇಸರ ವ್ಯಕ್ತಪಡಿಸಿಲ್ಲ. ಕೇವಲ ಪಕ್ಷದ ಸಂಘಟನೆ ಬಗ್ಗೆ ಮಾತ್ರ ಚರ್ಚಿಸಿದ್ದಾರೆ ಎಂದು ಹೇಳಿದರು.
Advertisement
ಲಿಂಗಾಯತ-ವೀರಶೈವ ಧರ್ಮ ವಿವಾದದ ಕುರಿತು ಹೇಳಿಕೆ ನೀಡಿದ ಅವರು, ನಾಲ್ಕು ವರ್ಷದಲ್ಲಿ ಏನು ಮಾಡದ ಸಿಎಂ ಈಗ ಸಮಾಜವನ್ನು ಒಡೆಯುವ ಕೆಲಸ ಮಾಡುತ್ತಿದ್ದಾರೆ. ಇದಕ್ಕೆ ಅವರ ಸಚಿವರ ಮುಖಾಂತರ ಒಡೆಯುತ್ತಿದ್ದಾರೆ. ಸಿಎಂ ಅವರಿಗೇ ಪ್ರತ್ಯೇಕ ಧರ್ಮ ಕೊಡುವ ಹಕ್ಕು ಇಲ್ಲ. ಇದಕ್ಕೆ ಸಮಾಜದ ಜನ ಬಲಿಯಾಗಬಾರದು. ಮಠಾಧೀಶರು ಕುಳಿತು ಸಮಸ್ಯೆ ಬಗೆಹರಿಸಲಾಗುವುದು ಎಂದು ಅವರು ಹೇಳಿದರು.
Advertisement
ರಾಜ್ಯಕ್ಕೆ ಅಮಿತ್ ಶಾ ಭೇಟಿ ನೀಡಿ ಪಕ್ಷದ ಸಂಘಟನೆ ಬಗ್ಗೆ ಮಾತನಾಡಿದ್ದಾರೆ. ಪಕ್ಷ ದುರ್ಬಲವಾಗಿದೆ ಅಂತಾ ಅವರು ಅಸಮಾಧಾನ ವ್ಯಕ್ತಪಡಿಸಿಲ್ಲ. ಆದ್ರೆ ಮಾಧ್ಯಮಗಳಲ್ಲಿ ಮಾತ್ರ ಹಾಗೆಯೇ ಬಂದಿದೆ. ಆದ್ರೆ ಅಲ್ಲಿ ಅಂತಹ ಯಾವುದೇ ಚರ್ಚೆ ನಡೆದಿಲ್ಲ ಎಂದು ಸಮರ್ಥಿಸಿಕೊಂಡರು.
Advertisement
ಡಿವೈಎಸ್‍ಪಿ ಗಣಪತಿ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಸಿಐಡಿ ಜಾರ್ಜ್ ಜೊತೆ ಸೇರಿ ಪ್ರಕರಣ ಮುಚ್ಚಿ ಹಾಕುವ ಯತ್ನ ಮಾಡಿದೆ. ಕೂಡಲೇ ಸಚಿವ ಜಾರ್ಜ್ ರಾಜೀನಾಮೆ ನೀಡಬೇಕು. ನಾಲ್ಕು ವರ್ಷದಲ್ಲಿ ಸಿಎಂ ಏನು ಮಾಡಿಲ್ಲ ಅದನ್ನು ಮುಚ್ಚಿ ಹಾಕಲು ಪ್ರತ್ಯೇಕ ಧ್ವಜ ಸೇರಿದಂತೆ ಇತರೆ ಇಲ್ಲದ ವಿವಾದ ಸೃಷ್ಟಿಸಿದ್ದಾರೆ. ಎಸಿಬಿ ಸಂಪೂರ್ಣ ಸಿಎಂ ಅವರ ಕೈಯಲ್ಲಿದೆ. ಎಸಿಬಿ ಮುಖಾಂತರ ಬಿಜೆಪಿ ನಾಯಕರನ್ನು ಗುರಿ ಮಾಡಿದೆ. ಎಸಿಬಿಯಲ್ಲಿಯೇ ಸಿಎಂ ಮೇಲೆ 25 ಪ್ರಕರಣ ದಾಖಲಾಗಿವೆ. ಆದ್ರು ಹಲವು ಪ್ರಕರಣದಲ್ಲಿ ಎಫ್‍ಐಆರ್ ಹಾಕಿಲ್ಲ. ರಾಜ್ಯದ ಜನರಿಗೆ ಈ ಬಗ್ಗೆ ಸಿಎಂ ಉತ್ತರ ಕೊಡಬೇಕಾಗಿದೆ ಅಂತ ಶೆಟ್ಟರ್ ತಿಳಿಸಿದ್ರು.