ಮುಂಬೈ: ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡೀಸ್, ಸುಕೇಶ್ ಚಂದ್ರಶೇಖರ್ ಜೊತೆಗಿರುವ ಫೋಟೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಫೋಟೋದಲ್ಲಿ ಸುಕೇಶ್ ಚಂದ್ರಶೇಖರ್ ಜಾಕ್ವೆಲಿನ್ ಅವರ ಕೆನ್ನೆಗೆ ಚುಂಬಿಸುತ್ತಿರುವುದನ್ನು ಕಾಣಬಹುದಾಗಿದೆ. ಸುಕೇಶ್ ಚಂದ್ರಶೇಖರ್ ಏಪ್ರಿಲ್-ಜೂನ್‍ನಲ್ಲಿ ಮಧ್ಯಂತರ ಜಾಮೀನಿನ ಆಧಾರದ ಮೇಲೆ ತಿಹಾರ್ ಜೈಲಿನಿಂದ ಹೊರ ಬಂದ ನಂತರ ಈ ಫೋಟೋವನ್ನು ಕ್ಲಿಕ್ಕಿಸಿಕೊಳ್ಳಲಾಗಿದ್ದು, ಸುಕೇಶ್ ಚೆನ್ನೈನಲ್ಲಿ ಜಾಕ್ವೆಲಿನ್ ಅವರನ್ನು ಸುಮಾರು ನಾಲ್ಕು ಬಾರಿ ಭೇಟಿಯಾಗಿದ್ದ ಎಂದು ಜಾರಿ ನಿರ್ದೇಶನಾಲಯ(ಇಡಿ) ಮೂಲಗಳು ತಿಳಿಸಿದೆ. ಇದನ್ನೂ ಓದಿ: ಮದುವೆಗೆ 1 ಲಕ್ಷ ರೂ. ವೆಚ್ಚದ ಮೆಹಂದಿ ಬಳಸ್ತಿದ್ದಾರಂತೆ ಕತ್ರಿನಾ!
Advertisement
Advertisement
ಹಲವು ದಿನಗಳಿಂದ ಭಾರೀ ಸದ್ದು ಮಾಡುತ್ತಿರುವ ಸುಕೇಶ್ ಚಂದ್ರಶೇಖರ್, ಉದ್ಯಮಿಗಳು, ರಾಜಕಾರಣಿಗಳು ಮತ್ತು ಸೆಲೆಬ್ರಿಟಿಗಳಿಗೆ ಬೆದರಿಕೆ ಹಾಕಿ ನೂರಾರು ಕೋಟಿ ಹಣ ಸುಲಿಗೆ ಮಾಡುತ್ತಿದ್ದ. ಅಲ್ಲದೇ ಉದ್ಯಮಿಯೊಬ್ಬರ ಪತ್ನಿಯಿಂದ 200 ಕೋಟಿ ಸುಲಿಗೆ ಹಣ ಸುಲಿಗೆ ಮಾಡಿರುವ ಆರೋಪ ಕೂಡ ಈತನ ಮೇಲಿದೆ. ಇದನ್ನೂ ಓದಿ: ಯಶ್, ಪ್ರಶಾಂತ್ ನೀಲ್ ಬಳಿ ಕ್ಷಮೆ ಕೇಳಿದ ಅಮೀರ್ ಖಾನ್
Advertisement
ಮೊದಲಿಗೆ ಜಾಕ್ವೆಲಿನ್ ಫರ್ನಾಂಡೀಸ್ ಸುಕೇಶ್ ಜೊತೆ ಡೇಟಿಂಗ್ ಮಾಡುವುದನ್ನು ನಿರಾಕರಿಸಿದ್ದರು. ಆಗ ಆರೋಪಿ ಜೈಲಿನೊಳಗಿದ್ದುಕೊಂಡೇ ಜಾಕ್ವೆಲಿನ್‍ಗೆ ಕರೆ ಮಾಡಿ ಐಷಾರಾಮಿ ಉಡುಗೊರೆಗಳನ್ನು ಕಳುಹಿಸುತ್ತಿದ್ದ ಎಂದು ಹೇಳಲಾಗುತ್ತಿದೆ. ಇಷ್ಟೇ ಅಲ್ಲದೆ, ಸುಕೇಶ್ ಜಾಕ್ವೆಲಿನ್‍ನಿಂದ ತನ್ನ ನೈಜ ಗುರುತನ್ನು ಮರೆಮಾಚಿದ್ದು, ಜಾಕ್ವೆಲಿನ್ ಜೊತೆ ಮಾತನಾಡುವಾಗ ದೊಡ್ಡ ವ್ಯಕ್ತಿತ್ವ ಹೊಂದಿರುವವನಂತೆ ಗುರುತಿಸಿಕೊಂಡಿದ್ದ ಎನ್ನಲಾಗುತ್ತಿದೆ.
Advertisement
Was Jacqueline Fernandez dating conman Sukesh Chandrasekhar? New photo reignites controversy https://t.co/nmGCmN79lY pic.twitter.com/AtW7aI9TvY
— Online Dating (@HiiiFren) November 26, 2021
ಈ ಪ್ರಕರಣ ಕುರಿತಂತೆ ಕೊನೆಯದಾಗಿ ಅಕ್ಟೋಬರ್ 20ರಂದು ಜಾಕ್ವೆಲಿನ್ ಇಡಿ ಮುಂದೆ ವಿಚಾರಣೆಗೆ ಹಾಜರಾಗಿದ್ದರು. ಇದೀಗ ಮತ್ತೆ ವಿಚಾರಣೆಗೆ ಹಾಜರಾಗುವಂತೆ ಜಾಕ್ವೆಲಿನ್‍ಗೆ ಇಡಿ ಸಮನ್ಸ್ ನೀಡಿದೆ.