Connect with us

Bollywood

ಹಿಂದಿ ಕಿರಿಕ್ ಪಾರ್ಟಿಯಲ್ಲಿ ಜಾಕ್ವೆಲಿನ್ ಫರ್ನಾಂಡಿಸ್ ಸಾನ್ವಿ!

Published

on

ಬೆಂಗಳೂರು: ರಕ್ಷಿತ್ ಶೆಟ್ಟಿ ಮತ್ತು ರಶ್ಮಿಕಾ ಮಂದಣ್ಣ ನಟಿಸಿದ್ದ ಕಿರಿಕ್ ಪಾರ್ಟಿ ಚಿತ್ರ ಕನ್ನಡದಲ್ಲಿ ಸಾರ್ವಕಾಲಿಕ ದಾಖಲೆಯನ್ನೇ ಸೃಷ್ಟಿಸಿದೆ. ಕನ್ನಡದಲ್ಲಿ ಕಥೆಗಳಿಲ್ಲ ಎಂಬ ವಾದ ಅದೆಷ್ಟು ಸುಳ್ಳೆಂಬುದನ್ನು ಪ್ರಾಕ್ಟಿಕಲ್ಲಾಗಿಯೇ ಈ ಚಿತ್ರ ಸುಳ್ಳು ಮಾಡಿತ್ತು. ಬೇರೆ ಭಾಷೆಯವರೂ ಕನ್ನಡ ಚಿತ್ರರಂಗದತ್ತ ಕಣ್ಣರಳಿಸಿ ನೋಡುವಂತೆಯೂ ಮಾಡಿದೆ. ಇಂಥಾ ಚಿತ್ರ ಬಾಲಿವುಡ್ ಗೆ ರೀಮೇಕ್ ಆಗುತ್ತಿರೋದು ನಿಜಕ್ಕೂ ಕನ್ನಡಿಗರೆಲ್ಲರೂ ಹೆಮ್ಮೆ ಪಡುವಂಥಾ ಸಂಗತಿ.

ಕಿರಿಕ್ ಪಾರ್ಟಿ ಚಿತ್ರ ಬಾಲಿವುಡ್ ಗೆ ರೀಮೇಕ್ ಆಗುತ್ತಿದೆ ಎಂಬ ಸುದ್ದಿ ಹೊರ ಬಿದ್ದಾಕ್ಷಣವೇ ಅದರ ತಾರಾಗಣದ ಬಗ್ಗೆ ಕುತೂಹಲ ಎದ್ದಿತ್ತು. ಅದರಲ್ಲೂ ವಿಶೇಷವಾಗಿ ರಕ್ಷಿತ್ ಶೆಟ್ಟಿ ಮತ್ತು ರಶ್ಮಿಕಾ ಪಾತ್ರವನ್ನು ಹಿಂದಿಯಲ್ಲಿ ಯಾರು ನಿರ್ವಹಿಸುತ್ತಾರೆಂಬ ಬಗ್ಗೆ ಎಲ್ಲರೂ ಕುತೂಹಲಗೊಂಡಿದ್ದರು. ರಕ್ಷಿತ್ ಪಾತ್ರವನ್ನು ಕಾರ್ತಿಕ್ ಆರ್ಯನ್ ಮಾಡಲಿದ್ದಾರೆಂಬ ಸುದ್ದಿ ಜಾಹೀರಾದರೂ ರಶ್ಮಿಕಾ ಪಾತ್ರ ಮಾತ್ರ ಹಾಗೆಯೇ ಉಳಿದುಕೊಂಡಿತ್ತು.

ಈ ಪಾತ್ರ ನಿರ್ವಹಿಸಲು ಬಹು ಕಾಲದಿಂದಲೂ ಸರ್ಕಸ್ಸು ನಡೆಸಲಾರಂಭಿಸಿದ್ದ ಚಿತ್ರ ತಂಡ ಕಡೆಗೂ ಜಾಕ್ವೆಲಿನ್ ಫರ್ನಾಂಡಿಸ್ ಅವರನ್ನು ಈ ಪಾತ್ರಕ್ಕೆ ಆಯ್ಕೆ ಮಾಡಿಕೊಂಡಿದೆ. ಸಲ್ಮಾನ್ ಖಾನ್ ಜೊತೆಗಿನ ಅಫೇರ್ ರೂಮರುಗಳನ್ನು ಹೊರತಾಗಿಸಿಯೂ ನಟಿಯಾಗಿ ಗಮನ ಸೆಳೆದಿರುವಾಕೆ ಜಾಕ್ವೆಲಿನ್. ಇವರೇ ಈ ಪಾತ್ರಕ್ಕೆ ಸೂಕ್ತ ಅಂತ ನಿರ್ಧರಿಸಿದ ಚಿತ್ರ ತಂಡ ಅವರನ್ನು ಆಯ್ಕೆ ಮಾಡಿದೆ. ಇಡೀ ಕಿರಿಕ್ ಪಾರ್ಟಿ ಚಿತ್ರವನ್ನು ವೀಕ್ಷಿಸಿರುವ ಜಾಕ್ವೆಲಿನ್ ಸಾನ್ವಿ ಪಾತ್ರದ ಮೇಲೆ ಮೋಹಗೊಂಡಿದ್ದಾರೆ. ಖುಷಿಯಿಂದಲೇ ಒಪ್ಪಿಕೊಂಡಿದ್ದಾರೆ.

ಕಿರಿಕ್ ಪಾರ್ಟಿ ಚಿತ್ರದ ಸಾನ್ವಿ ಪಾತ್ರ ಕರ್ನಾಟಕದಲ್ಲಿ ಮಾಡಿದ್ದ ಮೋಡಿ ಸಣ್ಣದೇನಲ್ಲ. ಅಂಥಾದ್ದೇ ಇತಿಹಾಸವನ್ನು ಜಾಕ್ವೆಲಿನ್ ಕೂಡಾ ಸೃಷ್ಟಿಸುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Click to comment

Leave a Reply

Your email address will not be published. Required fields are marked *