ಕುತ್ತಿಗೆ ಮೇಲೆ ಮೂಡಿರುವ ಲವ್ ಬೈಟ್ ಫೋಟೋ ಬಗ್ಗೆ ಜಾಕ್ವೆಲಿನ್ ಹೇಳಿದ್ದೇನು?

Public TV
2 Min Read
jacqueline fernandez

ಮುಂಬೈ: ನಟಿ ಜಾಕ್ವೆಲಿನ್ ಫೆರ್ನಾಂಡಿಸ್ ವಿವಾದಾತ್ಮಕ ವಿಚಾರಗಳಿಂದ ಬಾಲಿವುಡ್ ಅಂಗಳದಲ್ಲಿ ಸದಾ ಸುದ್ದಿಯಲ್ಲಿದ್ದಾರೆ. ಸುಕೇಶ್ ಚಂದ್ರಶೇಖರ್ ಜೊತೆಗಿನ ಜಾಕ್ವೆಲಿನ್ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ಈ ಹಿಂದೆ ವೈರಲ್ ಆಗಿದ್ದವು. ಈಗ ಸುಕೇಶ್ ಜೊತೆಗಿನ ಮತ್ತೊಂದು ಫೋಟೋ ವೈರಲ್ ಆಗಿದೆ. ಈ ಕುರಿತಾಗಿ ಜಾಕ್ವೆಲಿನ್ ಮಾತನಾಡಿದ್ದಾರೆ.

ಈ ಫೋಟೋದಲ್ಲಿ ಜಾಕ್ವೆಲಿನ್ ಕುತ್ತಿಗೆ ಮೇಲೆ ಲವ್ ಬೈಟ್ ಇದೆ. ಸುಕೇಶ್ ಕೂಡ ಆಕೆಗೆ ಮುತ್ತು ನೀಡುತ್ತಿರುವಾಗಲೇ ಫೋಟೋವನ್ನು ಕ್ಲಿಕ್ ಮಾಡಲಾಗಿದೆ. ಈ ಕುರಿತಾಗಿ ಜಾಕ್ವೆಲಿನ್ ಸೋಶಿಯಲ್ ಮೀಡಿಯಾದಲ್ಲಿ ಸ್ಪಷ್ಟನೆ ನೀಡಿದ್ದಾರೆ.

jacqueline fernandez sukesh chandrashekhar

ಈ ದೇಶ ಮತ್ತು ಇಲ್ಲಿನ ಜನರು ಯಾವಾಗಲೂ ನನಗೆ ಅಪಾರ ಪ್ರೀತಿ ಮತ್ತು ಗೌರವವನ್ನು ತೋರಿದ್ದಾರೆ. ಇದರಲ್ಲಿ ಮಾಧ್ಯಮದ ಸ್ನೇಹಿತರೂ ಸೇರಿದ್ದಾರೆ. ಅವರಲ್ಲಿ ನಾನು ಬಹಳಷ್ಟು ಕಲಿತಿದ್ದೇನೆ. ಪ್ರಸ್ತುತ ಕಷ್ಟದ ದಿನಗಳನ್ನು ನೋಡುತ್ತಿದ್ದೇನೆ. ನನ್ನ ಸ್ನೇಹಿತರು ಮತ್ತು ಅಭಿಮಾನಿಗಳಿಗೂ ಇದು ಅರ್ಥವಾಗುತ್ತದೆ ಎಂದು ಕೊಂಡಿದ್ದೇನೆ. ನನ್ನ ವೈಯಕ್ತಿಕ ಫೋಟೋಗಳನ್ನು ಪ್ರಸಾರ ಮಾಡದಂತೆ ನಾನು ಕೋರುತ್ತಿದ್ದೇನೆ. ನ್ಯಾಯ ಮತ್ತು ಒಳ್ಳೆಯ ಪ್ರಜ್ಞೆ ಮೇಲುಗೈ ಸಾಧಿಸುತ್ತದೆ ಎಂದು ಆಶಿಸುತ್ತೇವೆ. ಧನ್ಯವಾದಗಳು ಎಂದು ಜಾಕ್ವೆಲಿನ್ ಇನ್‍ಸ್ಟಾಗ್ರಾಮ್‍ನಲ್ಲಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಜಾಕ್ವೆಲಿನ್ ಕುತ್ತಿಗೆ ಮೇಲೆ ಲವ್ ಬೈಟ್ – ಫೋಟೋ ವೈರಲ್

ಈ ಫೋಟೋ ನೋಡಿದ ನೆಟ್ಟಿಗರು ಇವರಿಬ್ಬರ ಮಧ್ಯೆ ಸಂಬಂಧವಿರುವುದು ಪಕ್ಕಾ ಎಂದು ಕಾಮೆಂಟ್ ಮಾಡುತ್ತಿದ್ದಾರೆ. 200 ಕೋಟಿ ಸುಲಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ, ಸುಕೇಶ್ ಚಂದ್ರಶೇಖರ್‌ನನ್ನು  ಬಂಧಿಸಿದೆ. ಸುಕೇಶ್ ಜೊತೆ ಜಾಕ್ವೆಲಿನ್ ಫೆರ್ನಾಂಡಿಸ್ ಹಣಕಾಸಿನ ವಹಿವಾಟು ನಡೆಸಿರುವ ಪುರಾವೆಗಳನ್ನು ತನಿಖಾ ಸಂಸ್ಥೆ ಬಹಿರಂಗಪಡಿಸಿತ್ತು. ಇದಕ್ಕೆ ಸಂಬಂಧಿಸಿದಂತೆ ಇಡಿ, ವಿಚಾರಣೆಗೆ ಹಾಜರಾಗುವಂತೆ ಜಾಕ್ವೆಲಿನ್‍ಗೆ ಸಮನ್ಸ್ ಜಾರಿ ಮಾಡಿತ್ತು. ಇದನ್ನೂ ಓದಿ: ಅಭಿಮಾನಿ ಕೈಯಲ್ಲಿದ್ದ ಟ್ಯಾಟೂಗೆ ರಾಮ್ ಚರಣ್ ಬೌಲ್ಡ್

Jacqueline Fernandez 3

ಸುಕೇಶ್ ಬಂಧನವಾಗುವ ತನಕವೂ ಜಾಕ್ವೆಲಿನ್ ಮತ್ತು ಸುಕೇಶ್ ಸಂಪರ್ಕದಲ್ಲಿ ಇದ್ದರು. ಜಾಕ್ವೆಲಿನ್‍ಗೆ ಉಡುಗೊರೆಯಾಗಿ ಅರೇಬಿಯನ್ ಕುದುರೆ, ವಜ್ರದ ಕಿವಿಯೋಲೆಗಳು, ಐಷಾರಾಮಿ ಕಾರುಗಳು, ಒಂದು ಜೋಡಿ ಲೂಯಿ ವಿಟಾನ್ ಶೂಅನ್ನು ಸುಕೇಶ್ ನೀಡಿದ್ದ.

jacqueline fernandez 1

ಈ ಕುರಿತು ಪ್ರತಿಕ್ರಿಯಿಸಿದ ಸುಕೇಶ್, ನಾನು ಜಾಕ್ವೆಲಿನ್ ನೊಂದಿಗೆ ಡೇಟಿಂಗ್ ಮಾಡುತ್ತಿದ್ದೇನೆ. ಅದಕ್ಕಾಗಿಯೇ ನಾನು ಅವರಿಗೆ ಉಡುಗೊರೆಗಳನ್ನು ನೀಡಿದ್ದೇನೆ. ಅದು ನನ್ನ ವೈಯಕ್ತಿಕ ವಿಚಾರ. ಈ ಪ್ರಕರಣಕ್ಕೂ ಆಕೆಗೂ ಯಾವುದೇ ಸಂಬಂಧವಿಲ್ಲ ಎಂದು ಈ ಹಿಂದೆ ಹೇಳಿದ್ದನು. ಆದರೆ ಈ ವಿಚಾರವಾಗಿ ಇಲ್ಲಿಯವರೆಗೂ ಯಾವುದೇ ಪ್ರತಿಕ್ರಿಯೆ ನೀಡದೆ ಇದ್ದ ಜಾಕ್ವಲಿನ್ ಖಾಸಗಿ ಫೋಟೋವೊಂದು ವೈರಲ್ ಆಗಿರುವ ಕುರಿತಾಗಿ ಬೇಸರ ವ್ಯಕ್ತಪಡಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *