ಮುಂಬೈ: ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡೀಸ್ ಸ್ವಿಮ್ ಸೂಟ್ ಧರಿಸಿ ಫೋಟೋಗೆ ಸಖತ್ ಸೆಕ್ಸಿಯಾಗಿ ಪೋಸ್ ನೀಡಿದ್ದಾರೆ.
ಜಾಕ್ವೆಲಿನ್ ಫರ್ನಾಂಡೀಸ್ ಅವರಿಗೆ ಮೊದಲಿನಿಂದಲೂ ದುಬೈ ಎಂದರೆ ಅಚ್ಚುಮೆಚ್ಚು. ಸದ್ಯ ದುಬೈನಲ್ಲಿ ಟೈಂ ಸ್ಪೆಂಡ್ ಮಾಡುತ್ತಿರುವ ಜಾಕ್ವೆಲಿನ್ ಸ್ವಿಮ್ಮಿಂಗ್ ಪೂಲ್ ಬಳಿ ಒಂದಷ್ಟು ಫೋಟೋಗಳನ್ನು ಕ್ಲಿಕ್ಕಿಸಿಕೊಂಡಿದ್ದಾರೆ. ಇನ್ನೂ ಈ ಫೋಟೋಗಳನ್ನು ಜಾಕ್ವೆಲಿನ್ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದು, ಪೂಲ್ ಬೇಬಿ ಎಂದು ಶೀರ್ಷಿಕೆಯಲ್ಲಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಮನೆಯಲ್ಲಿದ್ರೆ ಮಕ್ಕಳ ಸಂಖ್ಯೆ ಹೆಚ್ಚಾಗುತ್ತೆ ಅನ್ನೋ ಭಯವಿದೆ: ಸೈಫ್ ಆಲಿ ಖಾನ್
ಸ್ವಿಮ್ಮಿಂಗ್ ಪೂಲ್ ಪಕ್ಕದ ಕುಳಿತುಕೊಳ್ಳುವುದರಿಂದ ಹಿಡಿದು ಸ್ವಿಮ್ಮಿಂಗ್ ಪೂಲ್ ಒಳಗೆ ಇಳಿದು ಸಖತ್ ಹಾಟ್ ಆ್ಯಂಡ್ ಬೋಲ್ಡ್ ಆಗಿ ಕ್ಯಾಮೆರಾಗೆ ಪೋಸ್ ನೀಡಿದ್ದಾರೆ. ಫೋಟೋದಲ್ಲಿ ಜಾಕ್ವೆಲಿನ್ ಬ್ಲೂ ಕಲರ್ ಸ್ವಿಮ್ ಸೂಟ್ ಮತ್ತು ಸನ್ ಗ್ಲಾಸ್ ತೊಟ್ಟು ಬಿಸಿಲಿನಲ್ಲಿ ಕೂಲ್ ಆಗಿ ಕಾಣಿಸಿಕೊಂಡಿದ್ದಾರೆ. ಸದ್ಯ ಜಾಕ್ವೆಲಿನ್ ಹಾಟ್ ಅವತಾರಕ್ಕೆ ತುಂಡೈಕ್ಳು ಫುಲ್ ಫಿದಾ ಆಗಿದ್ದಾರೆ. ಇದನ್ನೂ ಓದಿ: ಡೆಸರ್ಟ್ ಸಫಾರಿ ಬಳಿಕ ಬಿಕಿನಿಯಲ್ಲಿ ಜಾನ್ವಿ, ಖುಷಿ ಕಪೂರ್ ಮೋಜು, ಮಸ್ತಿ
ಇತ್ತೀಚೆಗಷ್ಟೇ ಬಾಲಿವುಡ್ ಜಾನ್ ಅಬ್ರಹಾಂ ಮತ್ತು ಜಾಕ್ವೆಲಿನ್ ಅಭಿನಯದ ಅಟ್ಯಾಕ್ ಸಿನಿಮಾ 2022ರ ಜನವರಿ 26ರಂದು ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ಘೋಷಿಸಿದೆ. ಅಕ್ಷಯ್ ಕುಮಾರ್ ಮತ್ತು ನುಶ್ರತ್ ಭರುಚ್ಚ ಅವರೊಂದಿಗೆ ರಾಮ್ ಸೇತು ಚಿತ್ರದಲ್ಲಿ ಕೂಡ ಜಾಕ್ವೆಲಿನ್ ಕಾಣಿಸಿಕೊಳ್ಳಲಿದ್ದು, ಈ ಸಿನಿಮಾ ಕೂಡ 2022ರ ದೀಪಾವಳಿಯಂದು ಬಿಡುಗಡೆಯಾಗಲಿದೆ. ಅಲ್ಲದೇ ಬಚ್ಚನ್ ಪಾಂಡೆ ಎಂಬ ಅಕ್ಷಯ್ ಕುಮಾರ್ ಅಭಿನಯದ ಮತ್ತೊಂದು ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
View this post on Instagram
ಸ್ಯಾಂಡಲ್ವುಡ್ ನಟ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ ಬಹು ನಿರೀಕ್ಷಿತ ವಿಕ್ರಾಂತ್ ರೋಣ ಸಿನಿಮಾದ ಹಾಡೊಂದರಲ್ಲಿ ಸುದೀಪ್ ಜೊತೆ ಜಾಕ್ವೆಲಿನ್ ಫರ್ನಾಂಡೀಸ್ ಸೊಂಟ ಬಳುಕಿಸಿದ್ದಾರೆ.