ಅವಾರ್ಡ್ ಕಾರ್ಯಕ್ರಮಕ್ಕೆ ವಿಭಿನ್ನ ಕಾಸ್ಟ್ಯೂಮ್ ನಲ್ಲಿ ಬಂದ ಜಾಕ್ವೆಲಿನ್

Public TV
2 Min Read
Jacqueline Fernandez 8

ಸುದೀಪ್ ನಟನೆಯ ವಿಕ್ರಾಂತ್ ರೋಣ ಸಿನಿಮಾದ ‘ರಾ ರಾ ರಕ್ಕಮ್ಮ’ ಹಾಡಿಗೆ ಮೈಚಳಿ ಬಿಟ್ಟು ಕುಣಿದಿರುವ ಜಾಕ್ವೆಲಿನ್ ಫರ್ನಾಂಡಿಸ್ (Jacqueline Fernandez) ಇತ್ತೀಚೆಗಷ್ಟೇ ನಡೆದ ಫಿಲ್ಮ್ ಫೇರ್ ಪ್ರಶಸ್ತಿ ಸಮಾರಂಭದಲ್ಲಿ ವಿಭಿನ್ನ ರೀತಿಯ ಕಾಸ್ಟ್ಯೂಮ್ ನಲ್ಲಿ ಕಾಣಿಸಿಕೊಂಡು ಅಚ್ಚರಿ ಮೂಡಿಸಿದ್ದಾರೆ.

Jacqueline Fernandez 7

ಈ ಪ್ರಶಸ್ತಿ ಸಮಾರಂಭಕ್ಕಾಗಿಯೇ ಕಾಸ್ಟ್ಯೂಮ್ ಸಿದ್ಧಪಡಿಸಿಕೊಂಡಿದ್ದ ಜಾಕ್ವೆಲಿನ್ ಬುಡಕಟ್ಟು ರಾಣಿಯ ವೇಷದಲ್ಲಿ ಕಾಣಿಸಿಕೊಂಡು ಕುತೂಹಲಕ್ಕೆ ಕಾರಣವಾದರು. ಅದೇ ಡ್ರೆಸ್ ನಲ್ಲೇ ಹತ್ತಾರು ಫೋಟೋಗಳು ಪೋಸ್ (Photoshoot)  ಕೂಡ ನೀಡಿದ್ದಾರೆ.

Jacqueline Fernandez 4

ಕರ್ನಾಟಕ ಮೂಲದ ಸುಖೇಶ್ ಚಂದ್ರಶೇಖರ್ (Sukhesh Chandrasekhar) ಸ್ನೇಹದಿಂದಾಗಿ ನಾನು ನೆಮ್ಮದಿ ಕಳೆದುಕೊಂಡೆ ಎಂದಿದ್ದರು ಜಾಕ್ವೆಲಿನ್ ಫರ್ನಾಂಡಿಸ್ (Jacqueline Fernandez). ಬಹುಕೋಟಿ ವಂಚನೆಯ ಆರೋಪಿ ಆಗಿರುವ ಸುಖೇಶ್ ಚಂದ್ರಶೇಖರ್ ಕಡೆಯಿಂದ ದುಬಾರಿ ಬೆಲೆಯ ಗಿಫ್ಟ್ ಪಡೆದುಕೊಂಡಿದ್ದಾರೆ ಎನ್ನುವ ಕಾರಣಕ್ಕಾಗಿ ಜಾಕ್ವೆಲಿನ್ ಇಡಿ ವಿಚಾರಣೆಯನ್ನು ಎದುರಿಸಿದ್ದರು.

Jacqueline Fernandez 5

ಕೋರ್ಟ್ ಮುಂದೆ ಹಾಜರಾಗಿದ್ದ ಜಾಕ್ವೆಲಿನ್ ಕಣ್ಣೀರಿಟ್ಟು ಆತನ ಸ್ನೇಹದಿಂದಾಗಿ ನೆಮ್ಮದಿ ಕಳೆದುಕೊಂಡೆ ಹಾಗೂ ಅವನು ನನ್ನ ಭಾವನೆಗಳೊಂದಿಗೆ ಆಟವಾಡಿ, ಜೀವನವನ್ನೇ ನರಕ ಮಾಡಿದ್ದಾನೆ ಎಂದು ಹೇಳಿಕೊಂಡಿದ್ದರು. ಜೀವನವನ್ನು ಮಾತ್ರವಲ್ಲ, ವೃತ್ತಿ ಜೀವನವನ್ನೇ ಅವನು ಹದಗೆಡಿಸಿಬಿಟ್ಟಿದ್ದಾನೆ ಎಂದೂ ದೂರಿದ್ದರು. ಸುಖೇಶ್ ತಮಗೆ ಪರಿಚಯವಾಗಿದ್ದು ಪಿಂಕಿ ಇರಾನಿ ಎನ್ನುವ ಮಹಿಳೆಯಿಂದ ಎಂದು ಅವರು ಹೇಳಿಕೆ ಕೊಟ್ಟಿದ್ದರು.

Jacqueline Fernandez 1

ಸುಕೇಶ್ ಮತ್ತು ಜಾಕ್ವೆಲಿನ್ ಡೇಟಿಂಗ್ ವಿಚಾರ ಹಲವು ತಿಂಗಳಿಂದ ನಡೆಯುತ್ತಿದ್ದರೂ, ಅದು ಬೆಳಕಿಗೆ ಬಂದಿದ್ದು ಸುಕೇಶ್ ಬಂಧನವಾದ ನಂತರ. ವಂಚನೆಯ ಹಣವನ್ನು ಈತ ಯಾರಿಗೆಲ್ಲ ಖರ್ಚು ಮಾಡಿದ್ದಾನೆ ಎಂದು ತನಿಖೆಗೆ ಇಳಿದಾಗ ಅದರಲ್ಲಿ ಜಾಕ್ವೆಲಿನ್ ಹೆಸರು ಪತ್ತೆಯಾಗಿತ್ತು. ಹಲವು ದುಬಾರಿ ವಸ್ತುಗಳನ್ನು ಈಕೆಗೆ ಸುಕೇಶ್ ನೀಡಿದ್ದಾನೆ ಎಂದು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಚಾರ್ಜ್ ಶೀಟ್ ನಲ್ಲಿ ಉಲ್ಲೇಖಿಸಿದ್ದರು.

Jacqueline Fernandez 3

ತಾನು ಸುಕೇಶ್‌ನನ್ನು ಭೇಟಿಯಾಗಿದ್ದು ಕಡಿಮೆ. ಆತ ನನಗೇನೂ ಕೊಡಿಸಿಲ್ಲ ಎಂದು ಜಾಕ್ವೆಲಿನ್ ಹೇಳಿಕೊಂಡಿದ್ದರೂ, ತಾನು ಆತನನ್ನು ಪ್ರೀತಿಸುತ್ತಿಲ್ಲ ಎಂದು ಪದೇ ಪದೇ ಹೇಳಿಕೆ ಕೊಡುತ್ತಿದ್ದರೂ, ಸುಕೇಶ್ ಮಾತ್ರ ಅದನ್ನು ಒಪ್ಪುತ್ತಿಲ್ಲ. ಈಗಲೂ ಜಾಕ್ವೆಲಿನ್‌ಳನ್ನು ಪ್ರೀತಿಸುತ್ತಿದ್ದೇನೆ ಎಂದು ಜೈಲಿನಿಂದಲೇ ಸಂದೇಶ ಕಳುಹಿಸುತ್ತಿದ್ದಾನೆ. ಅಲ್ಲದೇ ಪ್ರೇಮಿಗಳ ದಿನದಂದು ಅವನು ವಿಶ್ ಮಾಡಿದ್ದ.

Jacqueline Fernandez 6

ಈಗಲೂ ಜಾಕ್ವೆಲಿನ್ ರನ್ನು ಸುಕೇಶ್ ಪ್ರೀತಿಸುತ್ತಿದ್ದಾನೆ ಎಂದು ಹೇಳಲಾಗುತ್ತಿದೆ. ಜೈಲಿನಿಂದಲೇ ಅವನು ಅನೇಕ ಪತ್ರಗಳನ್ನು ಬರೆದಿದ್ದಾನೆ. ‘ಜಾಕ್ವೆಲಿನ್ ಜೊತೆ ನನ್ನ ಸ್ನೇಹ ಮುರಿಯಬೇಕು ಎಂದು ಹಲವಾರು ಬಾರಿ ನೋರಾ ಪ್ರಯತ್ನಿಸಿದಳು. ಜಾಕ್ವೆಲಿನ್ ಜೊತೆ ನಾನು ಇರುವುದು ಆಕೆಗೆ ಇಷ್ಟವಿರಲಿಲ್ಲ. ಜಾಕ್ವೆಲಿನ್ ಜೊತೆ ಹೋಗಲು ನೋರಾ ಬಿಡುತ್ತಿರಲಿಲ್ಲ. ನಾನು ಕಾಲ್ ರಿಸೀವ್ ಮಾಡದೇ ಇದ್ದರೆ ಪದೇ ಪದೇ ಕಾಲ್ ಮಾಡುತ್ತಿದ್ದಳು. ಜಾಕ್ವೆಲಿನ್ ಜೊತೆಗಿನ ಸ್ನೇಹವನ್ನು ಮುರಿದುಕೋ ಎಂದು ಹೇಳುತ್ತಿದ್ದಳು’ ಎಂದು ಪತ್ರದಲ್ಲಿ ಸುಕೇಶ್ ಬರೆದಿದ್ದ.

Share This Article