ಬೀದಿಬದಿಯಲ್ಲಿ ಸಿಗುವ ಗೋಬಿ ಮಂಚೂರಿ ಸಾಮಾನ್ಯವಾಗಿ ಎಲ್ಲರೂ ತಿನ್ನುತ್ತಾರೆ. ಆದರೆ ಹಲಸಿನಕಾಯಿ ಮಂಚೂರಿಯನ್ನು ಯಾವತ್ತಾದರೂ ಟೇಸ್ಟ್ ಮಾಡಿದ್ದೀರಾ..? ಇವತ್ತಿನ ನಮ್ಮ ರೆಸಿಪಿಯಲ್ಲಿ ಬಾಯಿ ಚಪ್ಪರಿಸಿಕೊಂಡು ತಿನ್ನುವಂತಹ ಹಲಸಿನಕಾಯಿ ಮಂಚೂರಿ ಹೇಗೆ ತಯಾರಿಸುವುದು ಎಂಬುದನ್ನು ತಿಳಿಸಿಕೊಡುತ್ತಿದ್ದೇವೆ. ನೀವು ಇದನ್ನು ತಿಂದಿಲ್ಲ ಅಂದ್ರೆ ಇವತ್ತೇ ಟ್ರೈ ಮಾಡಿ ನೋಡಿ. ಹಾಗಿದ್ರೆ ಇದನ್ನು ಯಾವ ರೀತಿ ಮಾಡುವುದು ಎಂಬುದನ್ನು ತಿಳಿದುಕೊಳ್ಳಿ. ಇದನ್ನೂ ಓದಿ: ಗಂಟಲು ಕೆರೆತಕ್ಕೆ ಸವಿಯಿರಿ ಬೆಚ್ಚಗಿನ ಪುದೀನಾ ಟೀ
Advertisement
ಬೇಕಾಗುವ ಸಾಮಗ್ರಿಗಳು:
ಹಲಸಿನಕಾಯಿ – 2 ಕಪ್
ಮೈದಾ – ಅರ್ಧ ಕಪ್
ಜೋಳದ ಹಿಟ್ಟು – ಕಾಲು ಕಪ್
ಅಚ್ಚಖಾರದ ಪುಡಿ – 4 ಚಮಚ
ಅರಶಿಣ ಪುಡಿ – 2 ಚಮಚ
ಶುಂಠಿ ಬೆಳ್ಳುಳ್ಳಿ ಪೇಸ್ಟ್ – 2 ಚಮಚ
ಈರುಳ್ಳಿ – 2
ಕ್ಯಾಪ್ಸಿಕಂ – 1
ಸೋಯಾ ಸಾಸ್ – 2 ಚಮಚ
ಟೊಮೆಟೋ ಸಾಸ್ – 3 ಚಮಚ
ರೆಡ್ ಚಿಲ್ಲಿ ಸಾಸ್ – 2 ಚಮಚ
ವಿನೇಗರ್ – ಸ್ವಲ್ಪ
ಎಣ್ಣೆ – ಅಗತ್ಯಕ್ಕೆ ತಕ್ಕಷ್ಟು
ಉಪ್ಪು – ರುಚಿಗೆ ತಕ್ಕಷ್ಟು
ಹೆಚ್ಚಿದ ಕೊತ್ತಂಬರಿ ಸೊಪ್ಪು – 1 ಚಮಚ
Advertisement
Advertisement
ಮಾಡುವ ವಿಧಾನ:
* ಮೊದಲಿಗೆ ಒಂದು ಪಾತ್ರೆಗೆ ನೀರನ್ನು ಹಾಕಿ ಅದಕ್ಕೆ ಹಲಸಿನಕಾಯಿ ಹೋಳುಗಳು, ಅರಶಿಣ, ಮೆಣಸಿನ ಪುಡಿ ಮತ್ತು ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಿಕೊಂಡು 5 ನಿಮಿಷಗಳ ಕಾಲ ಬೇಯಿಸಿಕೊಳ್ಳಿ.
* ಈಗ ಇನ್ನೊಂದು ಪಾತ್ರೆಯಲ್ಲಿ ಮೈದಾ, ಜೋಳದ ಹಿಟ್ಟು, ಅಚ್ಚಖಾರದ ಪುಡಿ ಮತ್ತು ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಿಕೊಂಡು ಅದಕ್ಕೆ ಬೇಯಿಸಿದ ಹಲಸಿನಕಾಯಿ ಹೋಳುಗಳನ್ನು ಹಾಕಿಕೊಂಡು ಚನ್ನಾಗಿ ಮಿಕ್ಸ್ ಮಾಡಿಕೊಳ್ಳಿ.
* ನಂತರ ಒಂದು ಬಾಣಲೆಗೆ ಎಣ್ಣೆಯನ್ನು ಹಾಕಿಕೊಂಡು ಕಾದನಂತರ ಅದಕ್ಕೆ ಹಲಸಿನಕಾಯಿ ಮಿಶ್ರಣವನ್ನು ಹಾಕಿ ಫ್ರೈ ಮಾಡಿಕೊಳ್ಳಿ.
* ಬಳಿಕ ಇನ್ನೊಂದು ಬಾಣಲೆಗೆ 2 ಚಮಚ ಎಣ್ಣೆ ಹಾಕಿ ಕಾದ ಬಳಿಕ ಅದಕ್ಕೆ ಅದಕ್ಕೆ ಹೆಚ್ಚಿದ ಈರುಳ್ಳಿ, ಕ್ಯಾಪ್ಸಿಕಂ, ಶುಂಠಿ ಬೆಳ್ಳುಳ್ಳಿ ಪೇಸ್ಟ್, ಸ್ವಲ್ಪ ಉಪ್ಪನ್ನು ಹಾಕಿಕೊಂಡು ಚನ್ನಾಗಿ ಫ್ರೈ ಮಾಡಿಕೊಳ್ಳಿ.
* ಈಗ ಅದಕ್ಕೆ ಟೊಮೆಟೋ ಸಾಸ್, ಸೋಯಾ ಸಾಸ್, ರೆಡ್ ಚಿಲ್ಲಿ ಸಾಸ್ ಮತ್ತು ವಿನೇಗರ್ ಹಾಕಿ ಚನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಬಳಿಕ ಈ ಮಿಶ್ರಣಕ್ಕೆ ಕಾಯಿಸಿಟ್ಟಿದ್ದ ಹಲಸಿನಕಾಯಿಯನ್ನು ಹಾಕಿಕೊಂಡು ಚನ್ನಾಗಿ ಮಿಕ್ಸ್ ಮಾಡಿಕೊಳ್ಳಿ.
* ಕೊನೆಗೆ ಇದರ ಮೇಲೆ ಹೆಚ್ಚಿದ ಕೊತ್ತಂಬರಿಯನ್ನು ಹಾಕಿಕೊಂಡು ಬಿಸಿಬಿಸಿಯಾಗಿ ತಿನ್ನಲು ಕೊಡಿ. ಇದನ್ನೂ ಓದಿ: ಮನೆಯಲ್ಲೇ ಮಾಡಿ ನೋಡಿ ನ್ಯಾಚುರಲ್ ಆಪಲ್ ಜೆಲ್ಲಿ
Advertisement