ಬೀಜಿಂಗ್: ಆಲಿಬಾಬಾ (Alibaba) ಸಂಸ್ಥಾಪಕ ಜಾಕ್ ಮಾ (Jack Ma) ಅವರು ಮತ್ತೆ ಚೀನಾಗೆ ಮರಳಿದ್ದಾರೆ ಎಂದು ಸೌತ್ ಚೀನಾ ಮಾನಿಂಗ್ ಪೋಸ್ಟ್ ಸೋಮವಾರ ವರದಿ ಮಾಡಿದೆ.
ಚೀನಾದ (China) ಪ್ರಸಿದ್ಧ ಉದ್ಯಮಿಗಳಲ್ಲಿ ಒಬ್ಬರಾದ ಜಾಕ್ ಮಾ ಅವರು 2021 ರಲ್ಲಿ ಚೀನಾದಿಂದ ಕಣ್ಮರೆಯಾಗಿದ್ದರು. ಅಲ್ಲದೇ ನಂತರದ ದಿನಗಳಲ್ಲಿ ಅವರು ಆಸ್ಟ್ರೇಲಿಯಾ, ಜಪಾನ್ ಮತ್ತು ಥೈಲಾಂಡ್ ದೇಶಗಳಲ್ಲಿ ಕಾಣಿಸಿಕೊಂಡಿದ್ದ ಬಗ್ಗೆ ವರದಿ ಪ್ರಕಟವಾಗಿದ್ದವು. ಇದನ್ನೂ ಓದಿ: ಕೂದಲೆಳೆ ಅಂತರದಲ್ಲಿ ತಪ್ಪಿದ ಭಾರೀ ದುರಂತ – ಏರ್ ಇಂಡಿಯಾ, ನೇಪಾಳ ಏರ್‌ಲೈನ್ಸ್ ಡಿಕ್ಕಿ ಜಸ್ಟ್ ಮಿಸ್
Advertisement
Advertisement
ಜಾಕ್ ಮಾ ಹಾಂಗ್‌ಝೌನಲ್ಲಿ ತಾವು ನಿರ್ಮಿಸಿದ ಹಣಕಾಸು ತಂತ್ರಜ್ಙಾನ ಶಾಲೆಗೆ ಮರಳಿದ್ದಾರೆ ಎಂದು ಯುಂಗು ಎಜುಕೇಷನ್ (Yungu Education) ಶಾಲೆಯು ತಮ್ಮ ವಿಚಾಟ್ (We Chat) ಖಾತೆಯಲ್ಲಿ ಹೇಳಿದೆ. ಅಲ್ಲದೇ ಅವರೊಂದಿಗಿನ ಫೋಟೋ ಮತ್ತು ವಿಡಿಯೋಗಳನ್ನು ಕೂಡಾ ಹಂಚಿಕೊಂಡಿದೆ.ಈ ವರದಿ ಪ್ರಕಟವಾದ ನಂತರ ಹಾಂಗ್‌ಕಾಂಗ್‌ನಲ್ಲಿ ಆಲಿಬಾಬಾ ಷೇರುಗಳು ಶೆ.4ರಷ್ಟು ಹೆಚ್ಚಿದೆ. ಇದನ್ನೂ ಓದಿ: 2 ವರ್ಷ ಕೋವಿಡ್ ಸ್ಟ್ರಿಕ್ಟ್ ರೂಲ್ಸ್ ಬಳಿಕ ಮೊದಲ ಬಾರಿ ಚೀನಾದ ಹಾಂಕಾಂಗ್‌ನಲ್ಲಿ ಪ್ರತಿಭಟನೆ
Advertisement
Advertisement
2021ರ ಅಕ್ಟೋಬರ್ 24 ರಂದು ಶಾಂಘೈನಲ್ಲಿ ಜಾಕ್ ಮಾ ಮಾತನಾಡಿದ್ದರು. ಈ ವೇಳೆ ಇಂದಿನ ಹಣಕಾಸು ವ್ಯವಸ್ಥೆಯು ಕೈಗಾರಿಕಾ ಯುಗದ ಪರಂಪರೆಯಾಗಿದೆ. ಮುಂದಿನ ಪೀಳಿಗೆ ಮತ್ತು ಯುವಜನರಿಗಾಗಿ ನಾವು ಹೊಸದನ್ನು ಸ್ಥಾಪಿಸಬೇಕು. ನಾವು ಪ್ರಸ್ತುತ ವ್ಯವಸ್ಥೆಯನ್ನು ಸುಧಾರಿಸಬೇಕು ಎಂದು ಭಾಷಣ ಮಾಡಿದ್ದು ಚೀನಾ ಸರ್ಕಾರದ ಆಕ್ರೋಶಕ್ಕೆ ಕಾರಣವಾಗಿತ್ತು. ಇದಾದ ಬಳಿಕ ಜಾಕ್ ಮಾ ಎಲ್ಲೂ ಕಾಣಿಸಿಕೊಂಡಿರಲಿಲ್ಲ. ಇದನ್ನೂ ಓದಿ: ಬ್ರಿಟನ್‍ನ 36 ಉಪಗ್ರಹಗಳನ್ನು ಯಶಸ್ವಿಯಾಗಿ ಉಡಾವಣೆ ಮಾಡಿದ ಇಸ್ರೋ
ಜಾಕ್‌ಮಾ ಆಂಟ್ ಹೆಸರಿನಲ್ಲಿ ಕಂಪನಿ ಆರಂಭಿಸಿದ್ದರು. 2020 ನವೆಂಬರ್‌ನಲ್ಲಿ ಈ ಆರಂಭಿಕ ಸಾರ್ವಜನಿಕ ಷೇರು ಬಿಡುಗಡೆ ಮಾಡಿ 37 ಶತಕೋಟಿ ಡಾಲರ್ ಹಣ ಸಂಗ್ರಹಿಸಲು ಮುಂದಾಗಿತ್ತು. ಮೂಲಕ ವಿಶ್ವದಲ್ಲೇ ಅತಿ ಹೆಚ್ಚು ಐಪಿಒ ಸಂಗ್ರಹಿಸಿದ ಕಂಪನಿಯಾಗಿ ಹೊರ ಹೊಮ್ಮುವ ಸಾಧ್ಯತೆ ಇತ್ತು. ಮಾಧ್ಯಮಗಳಲ್ಲಿ ಈ ವಿಚಾರ ಪ್ರಕಟವಾಗುತ್ತಿದ್ದಂತೆ ಹಲವು ಮಂದಿ ಅನುಮಾನ ವ್ಯಕ್ತಪಡಿದ್ದರು. ಇದಾದ ಬಳಿಕ ಚೀನಾ ಸರ್ಕಾರ ಐಪಿಒವನ್ನು ಅಮಾನತಿನಲ್ಲಿಟ್ಟು, ಆಲಿಬಾಬಾ ಕಂಪನಿಯ ಮಾರುಕಟ್ಟೆ ಏಕಸ್ವಾಮ್ಯದ ಬಗ್ಗೆ ತನಿಖೆ ಆರಂಭಿಸಿತ್ತು. ಇದನ್ನೂ ಓದಿ: ನೀರಿನಲ್ಲೂ ಶತ್ರುಸೈನ್ಯ ನಾಶಮಾಡುವ ನ್ಯೂಕ್ಲಿಯರ್ ಡ್ರೋನ್ ಪರೀಕ್ಷೆ ಯಶಸ್ವಿ – ಸಾಮರ್ಥ್ಯ ಎಷ್ಟಿದೆ ಗೊತ್ತಾ?