ಮಸ್ಕ್‌ನಿಂದ ಟ್ವಿಟ್ಟರ್ ಖರೀದಿ ಯೋಜನೆ – ಮಂಡಳಿಯಿಂದ ಹೊರನಡೆದ ಮಾಜಿ ಸಿಇಒ

Public TV
1 Min Read
Jack Dorsey

ವಾಷಿಂಗ್ಟನ್: ಟೆಸ್ಲಾ ಸಿಇಒ ಎಲೋನ್ ಮಸ್ಕ್ ಟ್ವಿಟ್ಟರ್ ಅನ್ನು ಕೊಳ್ಳುವ ಯೋಜನೆ ಬೆನ್ನಲ್ಲೇ ಟ್ವಿಟ್ಟರ್ ಮಾಜಿ ಸಿಇಒ ಜಾಕ್ ಡೋರ್ಸೆ ಮಂಡಳಿಯಿಂದ ಹೊರನಡೆದಿದ್ದಾರೆ.

ಜಾಕ್ ಡೋರ್ಸೆ ಟ್ವಿಟ್ಟರ್ ಸಿಇಒ ಆಗಿ ಮತ್ತೆ ಬರಲಿದ್ದಾರೆ ಎಂಬ ವದಂತಿಗಳು ಹರಿದಾಡುತ್ತಿದ್ದ ಬೆನ್ನಲ್ಲೇ ಡೋರ್ಸೆ ಮಂಡಳಿಯಿಂದ ಕೆಳಗಿಳಿದು, ಮತ್ತೆ ಟ್ವಿಟ್ಟರ್ ಸಿಇಒ ಆಗಿ ಹಿಂದಿರುಗುವುದಿಲ್ಲ ಎಂದು ಬಹಿರಂಗಪಡಿಸಿದ್ದಾರೆ. ಈ ಮೂಲಕ ಊಹಾಪೋಹಗಳಿಗೆ ಅಂತ್ಯ ಹಾಡಿದ್ದಾರೆ. ಇದನ್ನೂ ಓದಿ: ಕೆಲವು ಐಫೋನ್‌ಗಳಲ್ಲಿ ಸ್ಥಗಿತವಾಗಲಿದೆ ವಾಟ್ಸಪ್

Elon Musk twitter 1

ಎಲೋನ್ ಮಸ್ಕ್ ಟ್ವಿಟ್ಟರ್ ಅನ್ನು ಸ್ವಾಧೀನಪಡಿಸಿಕೊಳ್ಳುವ ಹಾದಿಯಲ್ಲಿದ್ದಾರೆ. ಆದರೆ 44 ಬಿಲಿಯನ್ ಡಾಲರ್‌(ಸುಮಾರು 3 ಲಕ್ಷ ಕೋಟಿ ರೂ.) ಒಪ್ಪಂದವನ್ನು ಅನೇಕ ಕಾರಣಗಳಿಂದಾಗಿ ತಡೆ ಹಿಡಿಯಲಾಗಿದೆ.

ಡಾರ್ಸೆ ಟ್ವಿಟ್ಟರ್ ಸಿಇಒ ಹುದ್ದೆಯಿಂದ ಕೆಳಗಿಳಿದಂದಿನಿಂದ ಮಂಡಳಿಯನ್ನು ತೊರೆಯುವ ಬಗ್ಗೆ ತಿಳಿಸಿದ್ದರು. 2022ರ ಷೇರುದಾರರ ಸಭೆಯಲ್ಲಿ ತಮ್ಮ ಅವಧಿ ಮುಗಿಯುವವರೆಗೆ ಮಂಡಳಿಯ ಭಾಗವಾಗಿಯೇ ಇರುತ್ತೇನೆ ಎಂದು ಹೇಳಿಕೆ ನೀಡಿದ್ದರು. ಇದನ್ನೂ ಓದಿ: ಮಹಿಳಾ ಕ್ರಿಕೆಟ್ ಚಾಂಪಿಯನ್‍ಷಿಪ್‍ಗೆ ಮಾನ್ಯತೆ ಪಡೆದ ಐರ್ಲೆಂಡ್, ಬಾಂಗ್ಲಾದೇಶ

Twitter

2021ರ ನವೆಂಬರ್‌ನಲ್ಲಿ ಡಾರ್ಸೆ ಟ್ವಿಟ್ಟರ್ ಸಿಇಒ ಹುದ್ದೆಗೆ ರಾಜೀನಾಮೆ ನೀಡಿದ್ದರು. ತಮ್ಮ ರಾಜೀನಾಮೆಗೆ ನಿಖರವಾದ ಕಾರಣವನ್ನು ಉಲ್ಲೇಖಿಸಿರಲಿಲ್ಲ. ಡೋರ್ಸೆ ಪ್ರಸ್ತುತ ಹಣಕಾಸು ಪಾವತಿ ಪ್ಲಾಟ್‌ಫಾರ್ಮ್ ಆಗಿರುವ ಬ್ಲಾಕ್ ಅನ್ನು ಮುನ್ನಡೆಸುತ್ತಿದ್ದಾರೆ. ಈ ಹಿಂದೆ ಇದಕ್ಕೆ ಸ್ಕ್ವೇರ್ ಎಂಬ ಹೆಸರಿತ್ತು.

Share This Article