ತುಮಕೂರು: ಕಾಂಗ್ರೆಸ್ (Congress) ಪಾರ್ಟಿಯ ಅರ್ಥ ಕಮಿಷನ್, ಕರಪ್ಷನ್, ಕ್ರಿಮಿನಲೈಸೇಷನ್ ಮತ್ತು ಪರಿವಾರವಾದ. ಆದರೆ ಬಿಜೆಪಿಯ (BJP) ಅರ್ಥ ವಿಕಾಸ್ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ (J.P.Nadda) ಕಾಂಗ್ರೆಸ್ ವಿರುದ್ಧ ಹರಿಹಾಯ್ದರು.
ತಿಪಟೂರಿನಲ್ಲಿ (Tiptur) ನಡೆದ ರೋಡ್ ಶೋನಲ್ಲಿ (Road Show) ಭಾಗವಹಿಸಿ ಮಾತನಾಡಿದ ಅವರು, ರೋಡ್ ಶೋಗೆ ಅಭೂತಪೂರ್ವ ಬೆಂಬಲ ದೊರೆತಿದೆ. ಇದನ್ನು ನೋಡುತ್ತಿದ್ದರೆ ಮುಂದಿನ ದಿನಗಳಲ್ಲಿ ನೀವೆಲ್ಲರು ಎಲ್ಲೆಲ್ಲೂ ಕಮಲ ಅರಳಿಸುತ್ತೀರಿ ಎಂದು ಅನಿಸುತ್ತಿದೆ. ಕಮಲ ಅರಳಿಸಬೇಕು ಎನ್ನುವುದು ಬಿಜೆಪಿಯ ಅವಶ್ಯಕತೆಯಲ್ಲ. ಕರ್ನಾಟಕದ (Karnataka) ಮಣ್ಣಿಗಾಗಿ ಮತ್ತು ಅಭಿವೃದ್ಧಿಗಾಗಿ ಕಮಲ ಅರಳಬೇಕಾದ ಅನಿವಾರ್ಯತೆಯಿದೆ ಎಂದರು. ಇದನ್ನೂ ಓದಿ: ಸುವರ್ಣ ಮಂಡ್ಯ ಪುಸ್ತಕದಲ್ಲಿ ಉರಿಗೌಡ, ನಂಜೇಗೌಡರ ಬಗ್ಗೆ ಉಲ್ಲೇಖ – ರಾಜಕೀಯ ವಾದಕ್ಕೆ ಪುಷ್ಟಿ
Advertisement
Advertisement
ನಾನು ನಿಮ್ಮಲ್ಲಿ ಮನವಿ ಮಾಡುತ್ತೇನೆ. ಮುಂದಿನ ಚುನಾವಣೆ (Election) ಕೇವಲ ಭಾರತೀಯ ಜನತಾ ಪಾರ್ಟಿಗೆ ಮಾತ್ರವಲ್ಲ. ಅದು ಕರ್ನಾಟಕದ ಪ್ರತಿಯೊಬ್ಬ ಜನತೆಯ ಭವಿಷ್ಯದ ಚುನಾವಣೆಯಾಗಿದೆ. ಅದನ್ನು ನಾವು ತಿಳಿದುಕೊಳ್ಳಬೇಕಿದೆ. ಕರ್ನಾಟಕದಲ್ಲಿ ಹೈವೇ, ಎಕ್ಸ್ಪ್ರೆಸ್‌ವೇ, ದೊಡ್ಡ ದೊಡ್ಡ ಚತುಷ್ಪಥ ರಸ್ತೆಗಳು ಆಗುತ್ತಿದೆಯೋ ಇಲ್ವೋ ಗೊತ್ತಿಲ್ಲ. ರೈಲ್ವೆಗಳ ಸಂಖ್ಯೆ ಹೆಚ್ಚಳವಾಗಿದೆಯೋ ಇಲ್ಲವೋ ಗೊತ್ತಿಲ್ಲ. ಹನ್ನೊಂದು ಏರ್‌ಪೋರ್ಟ್ ಜೊತೆಗೆ ಇಂಟರ್ನೆಟ್ ಹಳ್ಳಿ ಹಳ್ಳಿಗಳನ್ನು ತಲುಪಿದೆಯೋ ಇಲ್ವೋ ಗೊತ್ತಿಲ್ಲ. ಮೋದಿಯವರ (Narendra Modi) ಈ ಯೋಜನೆಯನ್ನು ಅನುಷ್ಠಾನಕ್ಕೆ ತರುವ ಕೆಲಸವನ್ನು ಯಡಿಯೂರಪ್ಪನವರು (B.S.Yediyurappa) ಮಾಡಿದರು. ಈಗ ಬೊಮ್ಮಾಯಿ (Basavaraj Bommai) ಅದನ್ನು ಮುಂದುವರೆಸುವ ಕೆಲಸವನ್ನು ಮಾಡುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಇದನ್ನೂ ಓದಿ: ಸಿದ್ದರಾಮಯ್ಯ ಪಾಕಿಸ್ತಾನ, ಅಫ್ಘಾನಿಸ್ತಾನದಲ್ಲಿ ಸ್ಪರ್ಧಿಸಿದ್ರೆ ಒಳ್ಳೆಯದು – ಅಶೋಕ್ ವ್ಯಂಗ್ಯ
Advertisement
Advertisement
ಇತ್ತೀಚಿಗೆ 3 ಈಶಾನ್ಯ ರಾಜ್ಯಗಳಲ್ಲಿ ಚುನಾವಣೆ ನಡೆಯಿತು. ನಾಗಾಲ್ಯಾಂಡ್, ತ್ರಿಪುರ ಮತ್ತು ಮೇಘಾಲಯ ಮೂರು ಕಡೆಗಳಲ್ಲಿ ಬಿಜೆಪಿ ಸರ್ಕಾರ ರಚನೆಯಾಗಿದೆ. ಆದರೆ ಕಾಂಗ್ರೆಸ್ ಪಕ್ಷಕ್ಕೆ ತ್ರಿಪುರದಲ್ಲಿ ಮೂರು ಸೀಟ್, ಮೇಘಾಲಯದಲ್ಲಿ 5 ಸೀಟ್ ಮತ್ತು ನಾಗಾಲ್ಯಾಂಡ್‌ನಲ್ಲಿ ಶೂನ್ಯ ಸೀಟ್ ದೊರಕಿದೆ. ರಾಹುಲ್ ಗಾಂಧಿ (Rahul Gandhi) ಏನು ಹೇಳುತ್ತಾರೆ? ಅವರು ಭಾರತದಲ್ಲಿ ಹೇಳುವುದಿಲ್ಲ, ಬದಲಿಗೆ ಇಂಗ್ಲೆಂಡ್‌ನಲ್ಲಿ (England) ಹೇಳುತ್ತಾರೆ. ಅವರು ಇಂಗ್ಲೆಂಡ್‌ಗೆ ಹೋಗಿ ಪ್ರಜಾಪ್ರಭುತ್ವಕ್ಕೆ (Democracy) ಆಪತ್ತಿದೆ ಎಂದು ಹೇಳುತ್ತಾರೆ. ನೀವೇ ಹೇಳಿ ಪ್ರಜಾತಂತ್ರಕ್ಕೆ ಆಪತ್ತಿದೆಯಾ? ರಾಹುಲ್ ಗಾಂಧಿ ಭಾರತದ ಸಾರ್ವಭೌಮತ್ವವನ್ನು ಇಂಗ್ಲೆಂಡ್‌ನಲ್ಲಿ ಚಾಲೆಂಜ್ ಮಾಡಿದ್ದಾರೆ. ಅಮೆರಿಕ (America) ಮತ್ತು ಯೂರೋಪ್ (Europe) ದೇಶಗಳನ್ನು ಭಾರತದ ವಿರುದ್ಧ ಎತ್ತಿಕಟ್ಟುವ ಕೆಲಸವನ್ನು ರಾಹುಲ್ ಗಾಂಧಿ ಮಾಡಿದ್ದಾರೆ. ಹೀಗಾಗಿ ಚುನಾವಣೆಯಲ್ಲಿ ಅವರನ್ನು ಮನೆಗೆ ಕಳುಹಿಸುವ ಮೂಲಕ ಅವರಿಗೆ ತಕ್ಕ ಪಾಠ ಕಲಿಸಬೇಕಿದೆ ಎಂದು ಕಿಡಿ ಕಾರಿದರು. ಇದನ್ನೂ ಓದಿ: ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ ಅಸಲಿಮುಖ ಮತ್ತೊಮ್ಮೆ ಕಳಚಿ ಬಿದ್ದಿದೆ: ಅನಿತಾ ಕುಮಾರಸ್ವಾಮಿ ಕಿಡಿ
ಕಾಂಗ್ರೆಸ್ ಪಕ್ಷದವರು ಮೋದಿ ಮರ್ ಜಾ.. ಮರ್ ಜಾ ಎನ್ನುತ್ತಿದ್ದಾರೆ. ಆದರೆ ಜನರು ಮಾತ್ರ ಮೋದಿ ಮತ್ ಜಾ.. ಮತ್ ಜಾ ಎನ್ನುತ್ತಿದ್ದಾರೆ. ಕರ್ನಾಟಕ ಸದ್ಯ ಇನೋವೇಷನ್‌ನಲ್ಲಿ ಹಾಗೂ ಸ್ಟಾರ್ಟಪ್‌ನಲ್ಲಿ ನಂಬರ್ ಒನ್ ಇದೆ. ಇನ್ಮುಂದೆಯೂ ನಂಬರ್ ಒನ್ ಸ್ಥಾನದಲ್ಲಿ ಇರಬೇಕು ಎಂದರೆ ಕರ್ನಾಟಕದಲ್ಲಿ ಮತ್ತೆ ಕಮಲ ಅರಳಬೇಕು ಎಂದರು. ಇದನ್ನೂ ಓದಿ: ಮಿಸ್ಡ್‌ಕಾಲ್ ಕೊಟ್ಟು ಬಿಜೆಪಿ ಸದಸ್ಯತ್ವ ಪಡೆದಿದ್ದ ಸೈಲೆಂಟ್ ಸುನಿ – ಸದಸ್ಯತ್ವ ರದ್ದುಗೊಳಿಸಿದ ಪಕ್ಷ