ಉಡುಪಿ: ಸ್ಮಾರ್ಟ್ ಸಿಟಿ ಒಂದು ಡೋಂಗಿ ಕಾನ್ಸೆಪ್ಟ್. ಸ್ಮಾರ್ಟ್ ಸಿಟಿ ಯೋಜನೆಯಿಂದ ಯಾವುದೇ ಅಭಿವೃದ್ಧಿಯಾಗಿಲ್ಲ ಎಂದು ಕಾಂಗ್ರೆಸ್ ಮುಖಂಡ, ಪರಿಷತ್ ಸದಸ್ಯ ಐವಾನ್ ಆರೋಪಿಸಿದ್ದಾರೆ.
ಕಾರ್ಕಳದಲ್ಲಿ ಮಾತನಾಡಿದ ಅವರು, ಸ್ಮಾರ್ಟ್ ಸಿಟಿ ಒಂದು ಕಂಪನಿ. ಜನರಿಗಾಗಿ ಇರುವ ಕಂಪನಿ ಅಲ್ಲ. ಕೇಂದ್ರ ಸರ್ಕಾರದ ನೀತಿ ಪ್ರಕಾರ ಹಣ ಮಂಜೂರು ಮಾಡಲಾಗಿದೆ ಎಂದರು. ಇದನ್ನು ಓದಿ: ಸಚಿವ ಖಾದರ್‌ಗೆ ಸ್ಮಾರ್ಟ್ ಸಿಟಿಗಿಂತ ಕಸಾಯಿಖಾನೆಯೇ ಮುಖ್ಯ: ಸುನೀಲ್ ಕುಮಾರ್
Advertisement
Advertisement
ಸ್ಮಾರ್ಟ್ ಸಿಟಿ ಘೋಷಣೆ ಮಾಡಿದ್ದು ಕೇಂದ್ರ ಸರ್ಕಾರ. ಸ್ಮಾರ್ಟ್ ಸಿಟಿಯ ಬೋರ್ಡ್ ಡೈರೆಕ್ಟರ್ ಗಳು ಕೇಂದ್ರದವರು. ಸಂಸದ ನಳಿನ್ ಕುಮಾರ್ ಇದಕ್ಕೆ ಉತ್ತರ ಕೊಡಬೇಕು. ಮಂಗಳೂರು ಶಾಸಕ ವೇದವ್ಯಾಸ ಕಾಮತ್ ಏನು ಮಾಡುತ್ತಿದ್ದರು ಎಂದು ಪ್ರಶ್ನಿಸಿದರು. ಇದನ್ನು ಓದಿ: ಸ್ಮಾರ್ಟ್ ಸಿಟಿಯ 15 ಕೋಟಿ ರೂ. ಕಸಾಯಿಖಾನೆಗೆ ನೀಡಿದ್ರು ಸಚಿವ ಖಾದರ್!
Advertisement
ರಾಜ್ಯ ಸಕಾರದಿಂದ ಸ್ಮಾರ್ಟ್ ಸಿಟಿ ಯೋಜನೆಯಿಂದ ಯಾವುದೇ ಅಭಿವೃದ್ಧಿಯಾಗಿಲ್ಲ. ಕೇಂದ್ರ ಸರ್ಕಾರ ಜನರಿಗೆ ಮೋಸ ಮಾಡಲೆಂದು ಈ ಯೋಜನೆಯನ್ನು ಜಾರಿಗೆ ತಂದಿದೆ ಎಂದು ಆರೋಪಿಸಿದರು.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv