ಮಡಿಕೇರಿ: ಆತೂರಿನಲ್ಲಿರುವ ಅಜ್ಜಿ ಮನೆಯಿಂದ ಶಾಲೆಗೆ ಬರೋದಕ್ಕೆ ಕಷ್ಟವಾಗುತ್ತಿದೆ. ನಾನು ಮನೆಗೆ ಹೋಗಿದ್ದರೆ, ಚೆನ್ನಾಗಿ ಇರುತ್ತಿತ್ತು ಎಂದು ವಿದ್ಯಾರ್ಥಿ ನವೀನ್ ಹೇಳಿದ್ದಾರೆ.
ನಮ್ಮ ಮನೆ ಹಟ್ಟಿಹೊಳೆಯಲ್ಲಿದೆ. ನಮ್ಮ ಮನೆ ಹತ್ತಿರ ಗುಡ್ಡ ಕುಸಿಯುತ್ತಿತ್ತು. ಆ ವೇಳೆ ರಕ್ಷಣಾ ಸಿಬ್ಬಂದಿ ಸ್ಥಳಕ್ಕೆ ಬಂದು ನೀವು ಇಲ್ಲಿ ಇರಬೇಡಿ, ಇಲ್ಲಿಂದ ಹೋಗಿ ಎಂದು ಹೇಳಿದರು. ಅವರ ಮಾತು ಕೇಳಿ ನನ್ನ ತಂದೆ ಕೂಡ ಹೆದರಿ ಇಲ್ಲಿಂದ ಹೋಗೋಣ ಎಂದು ಹೇಳಿದರು. ಇದನ್ನೂ ಓದಿ: ಕೊಡಗಿನಲ್ಲಿ 12 ದಿನಗಳ ಬಳಿಕ ಶಾಲೆಗಳು ಆರಂಭ- ಮಕ್ಕಳ ಸಂಖ್ಯೆ ಕಂಡು ಕಣ್ಣೀರಿಟ್ಟ ಶಿಕ್ಷಕರು
Advertisement
Advertisement
ಹಟ್ಟಿಹೊಳೆ ಬಿಟ್ಟು ನಾನು ಹಾಗೂ ನನ್ನ ಕುಟುಂಬದವರು ಈಗ ಆತೂರು ಎಸ್ಟೇಟ್‍ನಲ್ಲಿರುವ ನಮ್ಮ ಅಜ್ಜಿ ಮನೆಯಲ್ಲಿ ವಾಸಿಸುತ್ತಿದ್ದೇವೆ. ಆ ದಿನ ಜೋರಾಗಿ ಮಳೆ ಬಂದಾಗ ಯಾವುದೇ ಅನಾಹುತ ಸಂಭವಿಸಿಲ್ಲ. ಆದರೆ 50ಕ್ಕೂ ಹೆಚ್ಚು ಹಸು ಹೆದರಿಕೊಂಡು ಓಡಿ ಹೋಗಿದೆ ಎಂದು ತುಂಬಾ ಜನ ಅಳುತ್ತಾ ಹೇಳುತ್ತಿದ್ದಾರೆ. ಸದ್ಯ ಈಗ ಹಟ್ಟಿಹೊಳೆಯಲ್ಲಿರುವ ಮನೆಗೆ ಕೆಲವರು ಹೋಗಬಹುದು ಎಂದು ಹೇಳಿದರೆ ಇನ್ನೂ ಕೆಲವರು ಹಟ್ಟಿಹೊಳೆಗೆ ಹೋಗಲು ಸಾಧ್ಯವಿಲ್ಲ. ನಿಮ್ಮ ಅಜ್ಜಿ ಮನೆಯಲ್ಲೇ ಸ್ವಲ್ಪ ದಿನ ವಾಸವಿರು. ಅಲ್ಲಿ ಮತ್ತೆ ಏನಾದರೂ ಆದರೆ ಎಂದು ಪ್ರಶ್ನಿಸುತ್ತಿದ್ದಾರೆ ಎಂದರು. ಇದನ್ನೂ ಓದಿ: ಕೊಡಗಿನ 61 ಶಾಲೆಗಳಿಗೆ ಹೋಗುವಂತಿಲ್ಲ, 76 ರಿಪೇರಿಯಾಗಬೇಕಿದೆ: ಎನ್.ಮಹೇಶ್
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv