ಮಂಗಳೂರು: ನನಗೆ ಅನನ್ಯಾ ಭಟ್ ಅಂತ ಮಗಳಿರೋದು ಸತ್ಯ ಎಂದು ಸುಜಾತ ಭಟ್ ಕ್ಷಣಕ್ಕೊಂದು ದ್ವಂದ್ವ ಹೇಳಿಕೆ ನೀಡುತ್ತಿದ್ದಾರೆ.
`ಪಬ್ಲಿಕ್ ಟಿವಿ’ ಜೊತೆ ಮಾತನಾಡಿರುವ ಅವರು, ನಾನು ಕೊಟ್ಟ ದೂರಿಗೆ ಬದ್ಧಳಾಗಿದ್ದೇನೆ. ಅನನ್ಯ ಭಟ್ ನನ್ನ ಮಗಳು, ಅವಳು ಸತ್ತು ಹೋಗಿದ್ದಾಳೆ. ಚಾನೆಲ್‌ನವರೊಬ್ಬರು ನನಗೆ ಒತ್ತಾಯ ಮಾಡಿ, ನನ್ನಿಂದ ಆ ಹೇಳಿಕೆ ಪಡೆದುಕೊಂಡಿದ್ದಾರೆ. ನಾನು ಕೆಲವೊಮ್ಮೆ ಟೆನ್ಷನ್‌ನಲ್ಲಿರುತ್ತೇನೆ. ಅದನ್ನೆಲ್ಲ ಇಲ್ಲಿಗೆ ಬಿಟ್ಟುಬೀಡಿ, ನನಗೆ ಮಗಳಿರೋದು ಸತ್ಯ ಎಂದು ಹೇಳಿದ್ದಾರೆ.
ಚಾನೆಲ್‌ನವರು ನಿಮಗೆ ನಾವು ಸಹಾಯ ಮಾಡುತ್ತೇವೆ. ನಾವು ಹೇಳಿಕೊಟ್ಟ ಹಾಗೆ ಹೇಳಿ. ನಾವು ರೆಕಾರ್ಡ್ ಮಾಡಿಕೊಳ್ಳುತ್ತೇವೆ ಎಂದು ಹೇಳಿ ಒತ್ತಾಯ ಪೂರ್ವಕವಾಗಿ ಹೇಳಿಕೆ ಪಡೆದುಕೊಂಡಿದ್ದಾರೆ. ನನಗೆ ಮಗಳಿದ್ದಾಳೆ. ನನಗೆ ನ್ಯಾಯ ಬೇಕು ಎಂದು ತಿಳಿಸಿದ್ದಾರೆ.
ಇದಕ್ಕೂ ಮುನ್ನ ತಾವು ಕೊಟ್ಟ ದೂರಿಗೆ ಉಲ್ಟಾ ಹೊಡೆದಿದ್ದ ಸುಜಾತ ಭಟ್ `ನಾನು ಸುಳ್ಳು ಹೇಳಿದ್ದೇನೆ’, ನನಗೆ ಹೀಗೆ ಸುಳ್ಳು ಹೇಳು ಎಂದು ಕೆಲವರು ಹೇಳಿ ಕೊಟ್ಟರು ಎಂದು ಸಂದರ್ಶನವೊಂದರಲ್ಲಿ ಹೇಳಿದ್ದರು.
ಸಂದರ್ಶನದಲ್ಲಿ ಅನನ್ಯಾ ಭಟ್ ಅಂತ ನನಗೆ ಮಗಳೇ ಇರಲಿಲ್ಲ. ಇಷ್ಟು ದಿನ ನಾನು ಸುಳ್ಳು ಹೇಳಿದ್ದೇನೆ. ಕೆಲವರು ನನಗೆ ಹೀಗೆ ಸುಳ್ಳು ಹೇಳು ಅಂತ ಹೇಳಿದ್ದರು ಅದಕ್ಕೆ ನಾನು ಹೇಳಿದ್ದೇನೆ. ಗಿರೀಶ್ ಮಟ್ಟಣ್ಣವರ್, ಜಯಂತ್ ಟಿ ಇನ್ನಿತರರು ಹೇಳಿದ್ದರು. ಆಸ್ತಿ ಸಮಸ್ಯೆಯಿಂದ ಹೀಗೆ ಹೇಳು ಅಂತ ಅವರೆಲ್ಲಾ ಹೇಳಿದ್ದರು. ಅದಕ್ಕೆ ನಾನು ಹೇಳಿಬಿಟ್ಟೆ ಎಂದು ಒಪ್ಪಿಕೊಂಡಿದ್ದರು.
ನಾನು ದುಡ್ಡಿಗೊಸ್ಕರ ಡಿಮ್ಯಾಂಡ್ ಮಾಡಿಲ್ಲ. ನಾನು ಯಾರು ಕೂಡ ದುಡ್ಡು ಕೊಡ್ತೀನಿ ಅಂತ ಹೇಳಲಿಲ್ಲ. ನಮ್ಮ ಆಸ್ತಿ ಜೈನರಿಗೆ ಕೊಟ್ಟಿದ್ದರು. ಆದ್ರೆ, ನನ್ನ ಸಹಿ ಇಲ್ಲದೇ ಆಸ್ತಿಯನ್ನು ಹೇಗೆ ಕೊಟ್ರಿ ಅಂತ ಕೇಳಿದೆ. ನನ್ನ ತಾತನ ಆಸ್ತಿ ಅದು ಮೊಮ್ಮಕ್ಕಳಿಗೆ ಸಿಗಬೇಕಿತ್ತು ಅಷ್ಟೇ ಅದಕ್ಕೆ ಹೀಗೆ ಮಾಡಿದ್ದೇನೆ ಎಂದಿದ್ದರು.