BollywoodCinemaKarnatakaLatestLeading NewsMain PostSandalwood

ಮೊಮ್ಮಗಳು ಮದುವೆ ಆಗದೇ ಮಗು ಮಾಡಿಕೊಂಡರೂ ಓಕೆ: ಜಯಾ ಬಚ್ಚನ್ ಅಚ್ಚರಿ ಹೇಳಿಕೆ

ಬಾಲಿವುಡ್ ಖ್ಯಾತ ನಟ ಅಮಿತಾಭ್ ಬಚ್ಚನ್ (Amitabh Bachchan) ಪತ್ನಿ ಜಯಾ ಬಚ್ಚನ್ ಅಚ್ಚರಿಯ ಹೇಳಿಕೆಯೊಂದನ್ನು ನೀಡಿದ್ದಾರೆ. ಅವರು ಆಡಿದ ಆ ಮಾತು ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಮೊಮ್ಮಗಳು ನವ್ಯಾ ನವೇಲಿ ನಂದಾ ಅವರ ಪಾಡ್ ಕಾಸ್ಟ್ ನಲ್ಲಿ ಮಾತನಾಡಿರುವ ಜಯಾ, ತಮ್ಮ ಜೀವನದ ಅನೇಕ ಅಂಶಗಳನ್ನು ಹಂಚಿಕೊಂಡಿದ್ದಾರೆ. ಜೊತೆಗೆ ಸಂಬಂಧವು ದೀರ್ಘಕಾಲ ಉಳಿಯಲು ಗುಟ್ಟುವೊಂದನ್ನು ನೀಡಿದ್ದಾರೆ.

ತಮ್ಮ ಪುತ್ರಿ ಶ್ವೇತಾ ಬಚ್ಚನ್ ನಂದಾ (Shweta Bachchan Nanda) ಅವರ ಪುತ್ರಿ ನವ್ಯಾ ನವೇಲಿ ನಂದಾ (Navya Naveli Nanda) ಕುರಿತು ಮಾತನಾಡಿರುವ ಜಯ ಬಚ್ಚನ್, ‘ಮೊಮ್ಮಗಳು ಮದುವೆಗೆ ಮುನ್ನವೇ ಮಗು ಮಾಡಿಕೊಂಡರೆ ಯಾವುದೇ ಸಮಸ್ಯೆ ಇಲ್ಲ. ಸಂಬಂಧ ದೀರ್ಘ ಕಾಲ ಉಳಿಯಬೇಕೆಂದರೆ ಮಾನಸಿಕ ಆರೋಗ್ಯದ ಜೊತೆಗೆ ದೈಹಿಕ ಆರೋಗ್ಯವೂ ಮುಖ್ಯ. ನಮ್ಮ ಕಾಲದಲ್ಲಿ ಈ ರೀತಿ ಇರಲಿಲ್ಲವೆಂದು ಜಯ ಹೇಳಿದ್ದಾರೆ. ಅಲ್ಲದೇ, ಅವರ ಈ ಮಾತು ವಿವಾದಕ್ಕೂ ಕಾರಣವಾಗಬಹುದು ಎಂದೂ ತಿಳಿಸಿದ್ದಾರೆ. ಇದನ್ನೂ ಓದಿ:ಹಿಂದಿಯಲ್ಲಿ 50 ಕೋಟಿ ಗಳಿಸಿದ ‘ಕಾಂತಾರ’ ಸಿನಿಮಾ

ಮೊಮ್ಮಗಳು ಮದುವೆಗೂ ಮುನ್ನ ಮಕ್ಕಳನ್ನು ಮಾಡಿಕೊಂಡರೂ ಅಡ್ಡಿಯಿಲ್ಲ ಎಂದು ಸ್ವತಃ ಜಯ ಬಚ್ಚನ್ (Jaya Bachchan) ಹೇಳಿರುವ ಮಾತು, ವಿವಾದಕ್ಕೂ ಕಾರಣವಾಗಿದೆ. ಹಿರಿಯ ನಟಿಯಾಗಿ, ಸಂಸದೆಯಾಗಿ ಈ ರೀತಿ ಮಾತನಾಡಬಾರದಿತ್ತು ಎಂದು ಹಲವರು ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ. ಅಮಿತಾಭ್ ಬಚ್ಚನ್ ರೀತಿಯಲ್ಲಿ ಮಾತನಾಡುವುದನ್ನು ಕಲಿಯಿರಿ ಎಂದು ಹಲವರು ಸಲಹೆ ನೀಡಿದ್ದಾರೆ.

Live Tv

Leave a Reply

Your email address will not be published. Required fields are marked *

Back to top button