ನವದೆಹಲಿ: 200 ರೂ. ಮುಖಬೆಲೆಯ ನೋಟುಗಳು ಚಲಾವಣೆಗೆ ಬರಲಿವೆ ಎಂಬ ಬಗ್ಗೆ ಹಿಂದೆಯೇ ಸುದ್ದಿಯಾಗಿತ್ತು. ಇದೀಗ ಈ ಸುದ್ದಿ ಅಧಿಕೃತವಾಗಿದೆ. ಸ್ವತಃ ಹಣಕಾಸು ಸಚಿವಾಲಯವೇ 200 ರೂ. ನೋಟುಗಳನ್ನ ಬಿಡುಗಡೆ ಮಾಡಲಿರುವ ಬಗ್ಗೆ ಬುಧವಾರದಂದು ಘೋಷಣೆ ಮಾಡಿದೆ.
ಆರ್‍ಬಿಐನ ಸೆಂಟ್ರಲ್ ಬೋರ್ಡ್ ಆಫ್ ಡೈರೆಕ್ಟರ್ಸ್‍ನ ಶಿಫಾರಸ್ಸಿನ ಮೇಲೆ ಹಾಗೂ 1934ರ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಕಾಯ್ದೆಯ ಸೆಕ್ಷನ್ 24ರ ಅಡಿ ಈ ನೋಟಿಫಿಕೇಷನ್ ವಿತರಿಸಲಾಗಿದೆ.
Advertisement
200 ರೂ. ಮುಖಬೆಲೆಯ ಹೊಸ ನೋಟುಗಳ ಜೊತೆಗೆ ಹೊಸ 50 ರೂ. ನೋಟುಗಳ ಬಗ್ಗೆಯೂ ಸರ್ಕಾರ ಖಚಿತಪಡಿಸಿದೆ. ಈಗಾಗಲೇ ಇರುವ 50 ರೂ. ನೋಟುಗಳು ಕೂಡ ಚಲಾವಣೆಯಲ್ಲಿರಲಿವೆ. ಹೊಸ 200 ರೂ. ನೋಟುಗಳನ್ನ ಮೈಸೂರಿನ ಸರ್ಕಾರಿ ಮುದ್ರಣಾಲಯದಲ್ಲಿ ಮುದ್ರಿಸಲಾಗುತ್ತಿದೆ.
Advertisement
200 ರೂ. ನೋಟುಗಳ ಮುದ್ರಣ ಆರಂಭವಾಗಿದ್ದು, ಶೀಘ್ರದಲ್ಲೇ ಚಲಾವಣೆಗೆ ಬರಲಿವೆ ಎಂದು ಈ ಹಿಂದೆ ಹಣಕಾಸು ರಾಜ್ಯ ಸಚಿವ ಸಂತೋಷ್ ಕುಮಾರ್ ಹೇಳಿದ್ದರು.
Advertisement
ಕಡಿಮೆ ಮುಖಬೆಲೆಯ ನೋಟುಗಳ ಚಲಾವಣೆ ಹೆಚ್ಚಿಸಲು ಈ ಹೊಸ ನೋಟುಗಳನ್ನ ಪರಿಚಯಿಸಲಾಗುತ್ತಿದೆ. ನೋಟ್‍ಬ್ಯಾನ್ ನಂತರ ಎರಡು ಸಾವಿರ ರೂ. ನೋಟು ಬಿಡುಗಡೆ ಮಾಡಿದ ಹಿನ್ನೆಲೆಯಲ್ಲಿ ಹಾಗೂ 100 ಹಾಗೂ 500 ರೂ. ನೋಟುಗಳ ಪ್ರಮಾಣ ಕಡಿಮೆ ಇದ್ದಿದ್ದರಿಂದ ಜನರು ಚಿಲ್ಲರೆಗಾಗಿ ಸಾಕಷ್ಟು ಸಮಸ್ಯೆಗಳನ್ನ ಎದುರಿಸುತ್ತಿದ್ದರು.
Advertisement
ಇದನ್ನೂ ಓದಿ: ಶೀಘ್ರವೇ ಬಿಡುಗಡೆಯಾಗಲಿದೆ ಹಂಪಿಯ ರಥದ ಚಿತ್ರ ಇರೋ 50 ರೂ. ನೋಟುಗಳು!