ನನ್ನ ಸೋಲಿಸೋಕೆ ಇದು ಗುಜರಾತ್ ಅಲ್ಲ, ಇದು ಕರ್ನಾಟಕ: ಜಗದೀಶ್ ಶೆಟ್ಟರ್ ಗುಡುಗು

Public TV
3 Min Read
JAGADEESH SHETTAR 2

ಕೊಪ್ಪಳ: ನನ್ನ ಸೋಲಿಸೋಕೆ ಇದು ಗುಜರಾತ್ ಅಲ್ಲ, ಇದು ಕರ್ನಾಟಕ ಎಂದು ಅಮಿತ್ ಶಾ ಹೇಳಿಕೆಗೆ ಮಾಜಿ ಸಿಎಂ ಜಗದೀಶ್ ಶೆಟ್ಟರ್ (Jagadeesh Shettar) ತೀರುಗೇಟು ನೀಡಿದ್ದಾರೆ.

ಕೊಪ್ಪಳ(Koppala) ದ ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ಮಾತನಾಡುತ್ತಾ ಶೆಟ್ಟರ್, ಸವದಿ 50 ಸಾವಿರ ಮತಗಳ ಅಂತರದಿಂದ ಸೋಲ್ತಾರೆ ಎನ್ನೋ ಅಮಿತ್ ಶಾ (Amitshah) ಹೇಳಿಕೆಗೆ ತೀರುಗೇಟು ನೀಡಿದರು. ಹುಬ್ಬಳ್ಳಿಯ ಜನರ ಹೃದಯದಲ್ಲಿದ್ದೇನೆ. ಹುಬ್ಬಳ್ಳಿ (Hubballi) ಜನ ಏನು ಅಂತ ನಂಗೆ ಗೊತ್ತಿದೆ. ನಾನೇನು ಎನ್ನೋದು ನನ್ನ ಜನತೆಗೆ ಗೊತ್ತಿದೆ. ನಾನು ಗೆದ್ದು ಬರುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

jagadish shettar 1

ನನ್ನನ್ನ ಕಾಂಗ್ರೆಸ್ ಸೇರ್ಪಡೆಯಾಗುವಂತೆ ಮಾಡಿದ್ದೇ ಬಿಜೆಪಿ. ರಾಜ್ಯದ ಕೆಲವೇ ಕೆಲವು ಜನರ ಕಪಿಮುಷ್ಠಿಯಲ್ಲಿ ಬಿಜೆಪಿ ಇದೆ. ನಂಗೆ ಎಲ್ಲಾ ಕೊಟ್ಟಿದ್ದೀವಿ ಅಂತಾರೆ. ನಮ್ಮ ಕುಟುಂಬ ಬಿಜೆಪಿಗೆ ಏನು ಮಾಡಿದೆ ಅನ್ನೋದು ಎಲ್ಲರಿಗೂ ಗೊತ್ತಿದೆ. ಉತ್ತರ ಕರ್ನಾಟಕದಲ್ಲಿ ಬಿಜೆಪಿ (BJP) ಕಟ್ಟೋಕೆ ಶೆಟ್ಟರ್ ಶ್ರಮವಿದೆ. ನಂಗೆ ಒಬ್ಬ ಎಂಎಲ್‍ಎ ರೀತಿ ಪತ್ರ ಬರೀರಿ ಅಂತಾರೆ. ನಾನು ರಾಜಕೀಯಕ್ಕೆ ಬಂದಾಗ ಧರ್ಮೇಂದ್ರ ಇನ್ನು ರಾಜಕೀಯಕ್ಕೆ ಬಂದಿರಲಿಲ್ಲ. ಅಂತವರು ನಂಗೆ ಎಲೆಕ್ಷನ್ ನಿಲ್ಲಬೇಡ ಅಂತಾರೆ ಎಂದು ಮತ್ತೊಮ್ಮೆ ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು.

rahul gandhi 5

ರಾಹುಲ್ ಗಾಂಧಿ (Rahul Gandhi) ನಂಗೆ ಒಂದ್ ಮಾತು ಹೇಳಿದ್ರು. ಶೆಟ್ರೆ ನೀವು ಭ್ರಷ್ಟಾಚಾರಿ ಅಲ್ಲ ಅದಿಕ್ಕೆ ನಿಮಗೆ ಟಿಕೆಟ್ ಕೊಟ್ಟಿಲ್ಲ ಅಂದ್ರು. ನನ್ನ ಸ್ವಾಭಿಮಾನಕ್ಕೆ ಧಕ್ಕೆ ಬಂತು. ಅಷ್ಟೇ ಏಕೆ ಆರು ಬಾರಿ ಗೆಲ್ಲಿಸಿದ ನನ್ನ ಕ್ಷೇತ್ರದ ಜನರ ಸ್ವಾಭಿಮಾನಕ್ಕೆ ಧಕ್ಕೆಯಾಯ್ತು. ಅದಕ್ಕೆ ನಾನು ಸಿಡಿದೆದ್ದೆ, ಸ್ವಾಭಿಮಾನಕ್ಕೆ ಧಕ್ಕೆಯಾದ್ರೆ ಇದ್ದರೂ ಸತ್ತಂಗೆ. ಅದು ಗುಲಾಮಗಿರಿಯ ಸಂಕೇತ ಎಂದು ಸಿಡಿಮಿಡಿಗೊಂಡರು. ಇದನ್ನೂ ಓದಿ: ಕಾಂಗ್ರೆಸ್‌ ಅಧಿಕಾರಕ್ಕೆ ಬಂದ್ರೆ, ಬಿಜೆಪಿ ಸರ್ಕಾರ ಲೂಟಿ ಮಾಡಿರುವ ಹಣವನ್ನ ಜನರಿಗೆ ವಾಪಸ್‌ ಕೊಡ್ತೀವಿ – ರಾಗಾ

JAGADEESH SHETTAR

ಮತ್ತೆ ಬಿಜೆಪಿಯಿಂದ ಗೆದ್ರೆ ನಂಬರ್ 1 ಸ್ಥಾನಕ್ಕೆ ಬರ್ತೀನಿ ಅನ್ನೋ ಆತಂಕ ಕೆಲವರಲ್ಲಿ ಶುರುವಾಯಿತು. ಹೀಗಾಗೇ ನನ್ನನ್ನ ಹೊರಗಡೆ ಕಳಿಸೋಕೆ ಸಂಚು ರೂಪಿಸಲಾಯಿತು. ಬಿಎಸ್ ವೈ ಮನೆಗೆ ಹೊಂಟ್ರು, ಶೆಟ್ಟರ್ ನ ಆಚೆ ಹಾಕಿದ್ರೆ ಇಡೀ ಪಾರ್ಟಿ ತಮ್ಮ ಕೈಯಲ್ಲೂ ಬರುತ್ತೆ ಎಂಬ ಹಿಡನ್ ಅಜೆಂಡಾವಿತ್ತು. ನಂಗೆ ಯಾವ ಅಧಿಕಾರದ ಆಮಿಷವಿಲ್ಲ. ನನ್ನನ್ನ ಕಾಂಗ್ರೆಸ್ ಗೌರವಯುತವಾಗಿ ನಡೆಸಿ ಕೊಂಡರೆ ಸಾಕು ಎಂದಿದ್ದೀನಿ. ಕಾಂಗ್ರೆಸ್ ಅದನ್ನ ಮಾಡುತ್ತಿದೆ ಎಂದರು.

Congress 1

ಈ ಬಾರಿ ರಾಜ್ಯದಲ್ಲಿ ಕಾಂಗ್ರೆಸ್ 140ಕ್ಕೂ ಸೀಟ್‍ನಿಂದ ಗೆಲ್ಲುತ್ತೆ. ಜನ ನಂಗೆ ಅನೇಕ ಜನ ಹೇಳ್ತಿದ್ದಾರೆ. ಶೆಟ್ಟರ್ ನೀವು ಗುಲಾಮಗಿರಿಗೆ ಸೆಡ್ಡು ಹೊಡೆದು ಬಂದಿದ್ದೀರಿ ನಿಮಗೆ ಶಹಬ್ಬಾಶ್ ಅಂತಿದ್ದಾರೆ. ಅಷ್ಟೇ ಸಾಕು ನನ್ನ 30 ವರ್ಷದ ರಾಜಕೀಯ ಜೀವನಕ್ಕೆ. ಶೆಟ್ಟರ್ ಸೋಲಿಸೋಕೆ ಘಟಾನುಘಟಿಗಳು ನನ್ನ ಸೋಲಿಸೋಕೆ ಚಾಲೆಂಜ್ ಮಾಡಿದ್ದಾರೆ. ಅದನ್ನ ಮೆಟ್ಟಿನಿಂತು ಗೆದ್ದು ಬರುತ್ತೇನೆ ಎಂದು ಅಮಿತ್ ಶಾ ಚಾಲೆಂಜ್ ಗೆ ಟಾಂಗ್ ನೀಡಿದರು.

JAGADEESH SHETTAR 1

ಕುಟುಂಬ ರಾಜಕೀಯಿಲ್ಲ ಅಂತಾರೆ. ನಿಮ್ಮ ಸೊಸೆಗೆ ಟಿಕೆಟ್ ಕೊಡ್ತೀನಿ, ನಿಮ್ಮ ಪತ್ನಿಗೆ ಟಿಕೆಟ್ ಕೊಡ್ತೀನಿ ಎನ್ನೋದು ಯಾಕೆ..?. ಲಿಂಗಾಯತರಿಗೆ ಅವಮಾನ ಮಾಡಿದ್ದಾರೆ. ಬಿಜೆಪಿಯವರಿಗೆ ಯಾವುದೇ ನೈತಿಕತೆ ಇಲ್ಲ. ಚಿತ್ತಾಪುರದಲ್ಲಿ 80 ಕ್ರಿಮಿನಲ್ ಕೇಸ್ ಇರೋ ರೌಡಿ ಶೀಟರ್ ಗೆ ಟಿಕೆಟ್ ನೀಡಿದ್ದಾರೆ. ಬಿಜೆಪಿ ಪ್ರಣಾಳಿಕೆಗೆ ಹೆಚ್ಚು ಮಹತ್ವ ಕೊಡಬೇಕಾಗಿಲ್ಲ. ಈಗಾಗಲೇ ಕಾಂಗ್ರೆಸ್ ಐದು ಗ್ಯಾರೆಂಟಿ ನೀಡಿದೆ. ಅದು ಜನಮಾನಸದಲ್ಲಿ ನಾಟಿದೆ. ಅದಕ್ಕಿಂತ ಹೊಸ ಯೋಜನೆ ಬಿಜೆಪಿಯಲಿಲ್ಲ. ನಂಗೆ ಮಾಜಿ ಸಿಎಂ ಎನ್ನೋ ಹಣೆ ಪಟ್ಟಿ ಬಂದಿದೆ. ಮತ್ತೆ ನಾನು ಅಧಿಕಾರದ ಆಸೆಯಿಲ್ಲ ಎಂದರು.

Share This Article