ನವದೆಹಲಿ: ರಾಜ್ಯಗಳ ಲೋಕಲ್ ಕಂಟೈನ್ಮೆಂಟ್‍ಗೆ ಅಧಿಕಾರ ನೀಡಲಾಗಿದ್ದು, ಲೋಕಲ್ ಕಂಟೈನ್ಮೆಂಟ್‍ನಿಂದಲೇ ಕೊರೊನಾ ತಡೆಗಟ್ಟಬೇಕಾಗಿದೆ. ಸ್ಥಳೀಯ ಮಟ್ಟದಲ್ಲಿ ಸೋಂಕು ನಿಯಂತ್ರಣ ಮಾಡಿದರೆ ಸೋಂಕಿನ ವಿರುದ್ಧ ಗೆದ್ದಂತೆ ಎಂದು ಪ್ರಧಾನಿ ನರೇಂದ್ರ ಮೋದಿ ಅಭಿಪ್ರಾಯಪಟ್ಟಿದ್ದಾರೆ.
Advertisement
ಎಲ್ಲಾ ರಾಜ್ಯಗಳ ಸಿಎಂಗಳ ಜೊತೆ ವರ್ಚುಯಲ್ ಮೂಲಕ ಸಭೆ ನಡೆಸಿ ಬಳಿಕ ಮಾತನಾಡಿದ ಮೋದಿ, ಕೊರೊನಾ 3ನೇ ಅಲೆ ಆರಂಭದಲ್ಲೇ ಎಚ್ಚರಿಕೆ ವಹಿಸಿದರೆ ಆಸ್ಪತ್ರೆ ಸೇರುವುದು ತಪ್ಪುತ್ತದೆ. ನಾವು ದೇಶದಲ್ಲಿ ನಿಯಂತ್ರಣಕ್ಕೆ ಕಟ್ಟುನಿಟ್ಟಿಣ ಕ್ರಮ ಕೈಗೊಂಡಿದ್ದೇವೆ. ಭಾರತದಲ್ಲಿ ಕೊರೊನಾ ನಿಯಂತ್ರಣದಲ್ಲಿದೆ. ದೇಶದಲ್ಲಿ ಓಮಿಕ್ರಾನ್ ಕ್ಷಿಪ್ರಗತಿಯಲ್ಲಿ ಹರಡುತ್ತಿದೆ. ಇಡೀ ಜಗತ್ತನ್ನೇ ಕೊರೊನಾ ಮಹಾಮಾರಿ ಕಾಡುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು. ಇದನ್ನೂ ಓದಿ: ರಾಜ್ಯದಲ್ಲಿ ಕೋವಿಡ್ ನಿರ್ವಹಣೆಗೆ ತೆಗೆದುಕೊಂಡ ಕ್ರಮಗಳ ಬಗ್ಗೆ ಮೋದಿಗೆ ವಿವರಿಸಿದ ಬೊಮ್ಮಾಯಿ. ಇದನ್ನೂ ಓದಿ: ರಾಜ್ಯದಲ್ಲಿ ಕೋವಿಡ್ ನಿರ್ವಹಣೆಗೆ ತೆಗೆದುಕೊಂಡ ಕ್ರಮಗಳ ಬಗ್ಗೆ ಮೋದಿಗೆ ವಿವರಿಸಿದ ಬೊಮ್ಮಾಯಿ
Advertisement
Speaking at meeting with the Chief Ministers. https://t.co/VDA7WeB7UA
— Narendra Modi (@narendramodi) January 13, 2022
Advertisement
3ನೇ ಅಲೆ ಇನ್ನಷ್ಟು ವೇಗವಾಗಿ ಹರಡಲಿದೆ. ಲಸಿಕೆಯಿಂದಷ್ಟೇ ಸೋಂಕು ನಿಯಂತ್ರಣಕ್ಕೆ ಸಾಧ್ಯ. ಈಗಾಗಲೇ ಅಮೆರಿಕಾದಲ್ಲಿ ಪ್ರತಿದಿನ 14 ಲಕ್ಷ ಕೇಸ್ ಬರುತ್ತಿದೆ. ನಾವು ಎಚ್ಚರವಹಿಸಬೇಕಾಗಿದೆ. ದೇಶಾದ್ಯಂತ ಲಸಿಕೆ ಇನ್ನಷ್ಟು ಹೆಚ್ಚಿಸಬೇಕಾಗಿದೆ. ಯಾರೂ ಆತಂಕಕ್ಕೆ ಒಳಗಾಗುವುದು ಬೇಡ. ಲಸಿಕೆಯಿಂದಷ್ಟೇ ಸೋಂಕು ನಿಯಂತ್ರಣ ಸಾಧ್ಯ. ದೇಶದಲ್ಲಿ ಶೇ.92 ರಷ್ಟು ಮಂದಿಗೆ ಲಸಿಕೆ ನೀಡಲಾಗಿದೆ. ಸೋಂಕಿನ ಬಗ್ಗೆ ಆರಂಭದಲ್ಲೇ ಎಚ್ಚರಿಕೆ ವಹಿಸಬೇಕು. ಲಸಿಕೆಯ ಬಗ್ಗೆ ವದಂತಿಗೆ ಯಾರೂ ಕೂಡ ಗಮನ ಹರಿಸಬೇಡಿ ಎಂದು ಮನವಿ ಮಾಡಿಕೊಂಡರು. ಇದನ್ನೂ ಓದಿ: ನಾನು ಮಾಜಿ ಪ್ರಧಾನಿ ಈಗ ಮೇಕೆದಾಟು ಬಗ್ಗೆ ಪ್ರತಿಕ್ರಿಯೆ ನೀಡಲ್ಲ: ಎಚ್‍ಡಿಡಿ
Advertisement