ನವದೆಹಲಿ: ಚಾಯ್‍ವಾಲಾ ಆಗಿದ್ದ ನರೇಂದ್ರ ಮೋದಿಯವರು ದೇಶದ ಪ್ರಧಾನ ಮಂತ್ರಿಯಾಗಿದ್ದಾರೆಂದರೇ, ಅದಕ್ಕೆ ಮಾಜಿ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರೂರವರೇ ಕಾರಣ ಎಂದು ಕಾಂಗ್ರೆಸ್ ಮುಖಂಡ, ತಿರುವನಂತಪುರಂ ಲೋಕಸಭಾ ಕ್ಷೇತ್ರದ ಸಂಸದ ಶಶಿ ತರೂರ್ ಹೇಳಿದ್ದಾರೆ.
ನವೆಂಬರ್ 14ರ ಪಂಡಿತ್ ಜವಾಹರಲಾಲ್ ನೆಹರೂರವರ ಹುಟ್ಟುಹಬ್ಬವನ್ನು ದೇಶಾದ್ಯಂತ ಮಕ್ಕಳ ದಿನಾಚರಣೆಯನ್ನಾಗಿ ಆಚರಿಸುತ್ತೇವೆ. ಇದೇ ವೇಳೆ ದೆಹಲಿಯಲ್ಲಿ ಚಾಚಾರ `ನೆಹರೂ, ದಿ ಇನ್ವೆಂಷನ್ ಆಫ್ ಇಂಡಿಯಾ’ ಪುಸ್ತಕ ಮರುಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಯಾವುದೇ ಭಾರತೀಯನು ಸಹ, ದೇಶದ ಅತ್ಯುನ್ನತ ಮಟ್ಟಕ್ಕೆ ಏರಲು ಅವಕಾಶ ಮಾಡಿಕೊಟ್ಟಿದ್ದವರೇ ಪಂಡಿತ್ ಜವಹರಲಾಲ್ ನೆಹರು. ಇವರು ಸ್ಥಾಪಿಸಿದ ಸಂಸ್ಥೆಗಳು ಹಾಗೂ ವ್ಯವಸ್ಥೆಗಳಿಂದ ಇಂದು ಚಾಯ್‍ವಾಲಾರೊಬ್ಬರು ದೇಶದ ಪ್ರಧಾನಿಯಾಗಿದ್ದಾರೆ ಎಂದು ಹೇಳಿದರು.
Advertisement
If today we have a 'chaiwala' as Prime Minister, it's because Nehru ji made it possible to create the institutional structures through which any Indian can aspire to rise to the highest office in the land: Shashi Tharoor, Congress in Delhi (13.11.2018) pic.twitter.com/tgA1bCFv0t
— ANI (@ANI) November 13, 2018
Advertisement
ಇಂದು ಕೇಂದ್ರ ಸರ್ಕಾರ ಮಂಗಳಯಾನದ ಕುರಿತು ಹೆಮ್ಮೆಪಟ್ಟುಕೊಳ್ಳುತ್ತಿದೆ. ಆದರೆ ಅದಕ್ಕೆ ಕಾರಣವಾದ ಇಸ್ರೋ ಸಂಸ್ಥೆಯನ್ನು ಹುಟ್ಟು ಹಾಕಿದ್ದವರು ಯಾರು? ದೇಶದ ಬಡವರೂ ಸಹ ಆಕಾಶದೆತ್ತರಿಗಿನ ಗುರಿಗಳನ್ನು ಏರುವ ಕನಸನ್ನು ಕಲಿಸಿಕೊಟ್ಟವರು ಯಾರು? ಅಸಂಖ್ಯಾ ಯುವಕರನ್ನು ಸಿಲಿಕಾನ್ ವ್ಯಾಲಿಗೆ ಕಳುಹಿಸಲು, ಐಐಟಿಗಳನ್ನು ಸ್ಥಾಪನೆ ಮಾಡಿದವರು ಯಾರು? ಅಲ್ಲಿರುವ ಶೇ.40ರಷ್ಟು ಸ್ಟಾರ್ಟ್ಅಪ್ ಕಂಪನಿಗಳು ಇಂದು ಭಾರತೀಯರ ಕೈಯಲ್ಲಿವೆ ಎಂದರೇ ಅದಕ್ಕೆ ಕಾರಣ ಯಾರು ಎಂದು ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದ್ದಾರೆ.
Advertisement
If today the govt can boast about Managlyaan, ask who created ISRO. Who decided that even poor India could dare to aim for the skies? Who created the IITs that sent so many bright young men to Silicon Valley that 40% of the start-ups there are helmed by Indians?: S Tharoor(13.11) pic.twitter.com/Iicetto6Bt
— ANI (@ANI) November 13, 2018
Advertisement
ನಮಗೆಲ್ಲ ವೇದಿಕೆ ನಿರ್ಮಾಣ ಮಾಡಿಕೊಟ್ಟ ಭಾರತದ ಶ್ರೇಷ್ಟ ವ್ಯಕ್ತಿ ಪಂಡಿತ್ ಜವಾಹರಲಾಲ್ ನೆಹರೂರವರ ಬಗ್ಗೆ ಇಂದು ಸಾಮಾಜಿಕ ಜಾಲತಾಣಗಳಲ್ಲಿ ಕಡೆಗಣಿಸುವ ಯತ್ನ ನಡೆಯುತ್ತಿದೆ. ತಾವು ಪ್ರಧಾನಿಯಾಗಲು ಕಾರಣರಾಗಿದ್ದ ಚಾಚಾರನ್ನು ನರೇಂದ್ರ ಮೋದಿ ನಿರ್ಲಕ್ಷಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews