ನವದೆಹಲಿ: ಈ ಚುನಾವಣೆ ಪ್ರಜಾಪ್ರಭುತ್ವದ ಉಳಿವಿನ ಬಗ್ಗೆ ನಿರ್ಧರಿಸುತ್ತೆ ಎಂದು ವಿರೋಧ ಪಕ್ಷದ ಅಭ್ಯರ್ಥಿ ಯಶವಂತ್ ಸಿನ್ಹಾ ಹೇಳಿದರು.
ಭಾರತದ 15ನೇ ರಾಷ್ಟ್ರಪತಿಯಾಗಲು ಚುನಾವಣೆ ರೇಸ್‍ನಲ್ಲಿ ದ್ರೌಪದಿ ಮುರ್ಮು ಮತ್ತು ಯಶವಂತ್ ಸಿನ್ಹಾ ಅವರು ಇದ್ದಾರೆ. ಇಂದು ರಾಷ್ಟ್ರಪತಿ ಚುನಾವಣೆ ನಡೆಯುತ್ತಿದ್ದು, ಜುಲೈ 21 ರಂದು ಮತ ಎಣಿಕೆ ನಡೆಯಲಿದೆ. ಜುಲೈ 25 ರಂದು ನೂತನ ರಾಷ್ಟ್ರಪತಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
Advertisement
Advertisement
ಚುನಾವಣೆ ವೇಳೆ ಯಶವಂತ್ ಸಿನ್ಹಾ ಅವರು ಮಾಧ್ಯಮಗಳೊಂದಿಗೆ ಮಾತನಾಡಿದ್ದು, ಈ ಚುನಾವಣೆಯು ಅತ್ಯಂತ ಮಹತ್ವದ್ದಾಗಿದೆ. ದೇಶದ ಪ್ರಜಾಪ್ರಭುತ್ವಕ್ಕೆ ಈ ಚುನಾವಣೆ ಮಾರ್ಗವಾಗಿದೆ. ಪ್ರಜಾಪ್ರಭುತ್ವವನ್ನು ಉಳಿಸಲು ಮತ್ತು ಸಂವಿಧಾನವನ್ನು ರಕ್ಷಿಸಲು ಎಲ್ಲ ರಾಜಕೀಯ ಪಕ್ಷಗಳು ನನ್ನ ಪರವಾಗಿ ಮತ ಚಲಾಯಿಸುತ್ತವೆ ಎಂದು ನಾನು ಭಾವಿಸುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇದನ್ನೂ ಓದಿ: ವರದಾ, ತುಂಗಭದ್ರಾ ನದಿಯಲ್ಲಿ ಹೆಚ್ಚಿದ ನೀರು – ಮೆಕ್ಕೆಜೋಳ ಸೇರಿ ವಿವಿಧ ಬೆಳೆ ಜಲಾವೃತ
Advertisement
Advertisement
ನಾನು ಕೇವಲ ರಾಜಕೀಯ ಯುದ್ಧದಲ್ಲಿ ಹೋರಾಡುತ್ತಿಲ್ಲ. ಆದರೆ ಸರ್ಕಾರಿ ಸಂಸ್ಥೆಗಳ ವಿರುದ್ಧವೂ ಹೋರಾಟ ಮಾಡುತ್ತಿದ್ದೇನೆ. ಅವರು ತುಂಬಾ ಶಕ್ತಿಶಾಲಿಯಾಗಿದ್ದಾರೆ, ಹಣದಿಂದ ಎಲ್ಲರನ್ನು ಆಟವಾಡಿಸುತ್ತಿದ್ದಾರೆ ಎಂದು ಕಿಡಿಕಾರಿದರು.
ನಮ್ಮ ಸಂವಿಧಾನದ ಪೂರ್ವ ಸ್ತಂಭವಾದ ಜಾತ್ಯತೀತತೆಯನ್ನು ರಕ್ಷಿಸಲು ನಾನು ನಿಂತಿದ್ದೇನೆ. ನನ್ನ ಪ್ರತಿಸ್ಪರ್ಧಿ ಅಭ್ಯರ್ಥಿಯು ಈ ಸ್ತಂಭವನ್ನು ನಾಶಪಡಿಸುವ ಮತ್ತು ಬಹುಮತದ ಪ್ರಾಬಲ್ಯವನ್ನು ಸಾಧಿಸಲು ನಿಂತಿದ್ದಾರೆ ಎಂದು ಟೀಕಿಸಿದರು.