ಬೆಂಗಳೂರು: ದೇಶಕ್ಕಾಗಿ ಅವರು ಒಳ್ಳೆಯ ನಿರ್ಧಾರ ತೆಗೆದುಕೊಂಡಿರುವುದಕ್ಕೆ ತುಂಬಾ ಹೆಮ್ಮೆ ಆಗುತ್ತಿದೆ ಎಂದು ಎನ್‍ಕೌಂಟರ್ ಸ್ಪೆಷಾಲಿಸ್ಟ್, ಹೈದರಾಬಾದ್ ಪೊಲೀಸ್ ಆಯುಕ್ತ ವಿಶ್ವನಾಥ್ ಅವರ ಸಹೋದರ ವೀರಣ್ಣ ಸಜ್ಜನರ್ ಪ್ರತಿಕ್ರಿಯಿಸಿದ್ದಾರೆ.
ಈ ಬಗ್ಗೆ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ವಿಶ್ವನಾಥ್ ಸಹೋದರ ವೀರಣ್ಣ ಸಜ್ಜನರ್ ಅವರು, ನನ್ನ ಸಹೋದರ ಇಂತಹದ್ದೊಂದು ಒಳ್ಳೆಯ ನಿರ್ಧಾರ ತೆಗೆದುಕೊಂಡಿದ್ದು ತುಂಬಾ ಖುಷಿಯಾಗುತ್ತಿದೆ. ಈ ಹಿಂದೆ ವಾರಂಗಲ್‍ನಲ್ಲಿ ಆ್ಯಸಿಡ್ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ಎನ್‍ಕೌಂಟರ್ ಮಾಡಿ ಈ ರೀತಿ ಮತ್ತೆ ನಡೆಯುವುದಿಲ್ಲ ಎಂದು ಜನರಿಗೆ ಭರವಸೆ ನೀಡಿದ್ದರು. ಎನ್‍ಕೌಂಟರ್ ನಡೆದಾಗಿನಿಂದ ಆ್ಯಸಿಡ್ ದಾಳಿ ಎಲ್ಲಿಯೂ ನಡೆಯಲಿಲ್ಲ. ಇದೀಗ ಅತ್ಯಾಚಾರಿಗಳ ಎನ್‍ಕೌಂಟರ್ ಮೂಲಕ ಇಡೀ ದೇಶಕ್ಕೆ ಭಯ ಹುಟ್ಟಿಸಿದ್ದಾರೆ. ದೇಶಕ್ಕಾಗಿ ಅವರು ಒಳ್ಳೆಯ ನಿರ್ಧಾರ ತೆಗೆದುಕೊಂಡಿರುವುದಕ್ಕೆ ತುಂಬಾ ಹೆಮ್ಮೆ ಆಗುತ್ತಿದೆ ಎಂದು ಹೇಳಿದರು. ಇದನ್ನೂ ಓದಿ: ಕಾಮುಕರ ಹುಟ್ಟಡಗಿಸಿದ ವೀರ ಕನ್ನಡಿಗ – ಎನ್‌ಕೌಂಟರ್‌ಗೆ ವಿಶ್ವನಾಥ್ ಸಜ್ಜನರ್ ನೇತೃತ್ವ
Advertisement
Advertisement
ಸಣ್ಣದೇ ಇರಲಿ, ದೊಡ್ಡದೇ ಇರಲಿ ಸಾರ್ವಜನಿಕರಿಗೆ ನ್ಯಾಯ ಸಿಗಬೇಕು ಎಂದು ಅವರು ಯಾವಾಗಲೂ ಹೋರಾಟ ಮಾಡುತ್ತಾರೆ. ವಿಶ್ವನಾಥ್ ಅವರು ವಿದ್ಯಾರ್ಥಿ ಆಗಿದ್ದಾಗಿನಿಂದಲೂ ಹೋರಾಟ ಮಾಡುತ್ತಿದ್ದರು. ಯಾರಿಗಾದರೂ ತೊಂದರೆಯಾದಾಗ ಆರೋಪಿಗಳ ಬೆನ್ನಟ್ಟಿ ಕೆಲಸ ಮುಗಿಯುವವರೆಗೂ ಅವರು ನಿದ್ದೆ ಮಾಡುವುದಿಲ್ಲ. ಈ ಪ್ರಕರಣ ಬೆಳಕಿಗೆ ಬಂದಾಗ ನನ್ನ ಸಹೋದರ ಈ ಕೇಸನ್ನು ನೋಡಿಕೊಳ್ಳುತ್ತಾರೆ ಎಂಬ ವಿಷಯ ಗೊತ್ತಿರಲಿಲ್ಲ. ಅವರು ಕೂಡ ತಮ್ಮ ಕೆಲಸದ ಬಗ್ಗೆ ಏನೂ ಹೇಳಲ್ಲ. ಪ್ರತಿಕೆಗಳಲ್ಲಿ ನೋಡಿದಾಗ ಈ ಪ್ರಕರಣವನ್ನು ನನ್ನ ಸಹೋದರ ವಹಿಸಿಕೊಂಡಿದ್ದಾರೆ ಎಂಬುದು ತಿಳಿಯಿತು ಎಂದರು. ಇದನ್ನೂ ಓದಿ: ಪಶುವೈದ್ಯೆ ಅತ್ಯಾಚಾರ, ಕೊಲೆ ಪ್ರಕರಣ- ಅತ್ಯಾಚಾರಿಗಳನ್ನು ಎನ್‍ಕೌಂಟರ್ ಮಾಡಿದ ಪೊಲೀಸರು
Advertisement
Hyderabad: Heavy police presence at the spot where accused in the rape and murder of the woman veterinarian were killed in an encounter earlier today. #Telangana pic.twitter.com/tpIzyBgxdZ
— ANI (@ANI) December 6, 2019
Advertisement
ವಿಶ್ವನಾಥ್ ಮೊದಲು ಆಂಧ್ರ ಪ್ರದೇಶಕ್ಕೆ ಆಯ್ಕೆ ಆಗಿ ಅಲ್ಲಿಯೇ ಕೆಲಸ ಮಾಡುತ್ತಿದ್ದಾರೆ. ಈಗ ಅವರು ಹೈದರಾಬಾದ್ ಕಮಿಷನರ್ ಆಗಿ ಎರಡೂವರೆ ವರ್ಷ ಆಗಿದೆ. ಅವರಿಗೆ ಮೊದಲು ಆಂಧ್ರದಲ್ಲೇ ಕೆಲಸ ಸಿಕ್ಕ ಕಾರಣ ಅವರು ಕರ್ನಾಟಕದಲ್ಲಿ ಕೆಲಸ ಮಾಡಿಲ್ಲ. ನಮ್ಮ ಊರಿನಲ್ಲಿ ಯಾವುದೇ ಕಾರ್ಯಕ್ರಮ ಇದ್ದರೆ ಅವರು ಬರುತ್ತಾರೆ. ಅಲ್ಲದೆ ಶಿಕ್ಷಣ ಅಥವಾ ಸಮಾಜಕ್ಕೆ ಸಂಬಂಧಿಸಿದ ಕೆಲಸ ಇದ್ದರೆ ಎಷ್ಟೇ ಬ್ಯುಸಿ ಇದ್ದರೂ ಮಕ್ಕಳಿಗೆ ಕೌನ್ಸ್ ಲಿಂಗ್ ಮಾಡುತ್ತಾರೆ ಎಂದು ವೀರಣ್ಣ ತಿಳಿಸಿದರು. ಇದನ್ನೂ ಓದಿ: ಸುಡುವಾಗ ಪಶುವೈದ್ಯೆ ಜೀವಂತವಾಗಿದ್ಳು: ಸತ್ಯ ಬಾಯಿಬಿಟ್ಟ ಮೃಗೀಯ ಮನುಷ್ಯ
ಬೆಳಗ್ಗೆಯಿಂದಲೂ ಸ್ನೇಹಿತರು ಹಾಗೂ ಸಂಬಂಧಿಕರು ಕರೆ ಮಾಡಿ ಶುಭಾಶಯ ತಿಳಿಸುತ್ತಿದ್ದಾರೆ. ನಮಗೆ ತುಂಬಾ ಖುಷಿ ಹಾಗೂ ಹೆಮ್ಮೆ ಆಗುತ್ತಿದೆ. ವಿಶ್ವನಾಥ್ ಅವರ ಈ ನಿರ್ಧಾರ ಜೀವಮಾನದ ಶ್ರೇಷ್ಠ ನಿರ್ಧಾರ. ಇಡೀ ದೇಶ ಈ ನಿರ್ಧಾರಕ್ಕೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ ಎಂದು ವೀರಣ್ಣ ತಮ್ಮ ಸಂತಸವನ್ನು ಹಂಚಿಕೊಂಡರು.
#WATCH Hyderabad: 'DCP Zindabad, ACP Zindabad' slogans raised near the spot where where accused in the rape and murder of the woman veterinarian were killed in an encounter by Police earlier today. #Telangana pic.twitter.com/2alNad6iOt
— ANI (@ANI) December 6, 2019