ಲಂಡನ್: ಬಾಲಿವುಡ್ ನಟಿ ಆ್ಯಮಿ ಜಾಕ್ಸನ್ ಕುಟುಂಬಕ್ಕೆ ಹೊಸ ಸದಸ್ಯನ ಆಗಮನವಾಗಿದ್ದು, ಆ್ಯಮಿ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.
ಆ್ಯಮಿ ಗರ್ಭಿಣಿಯಾದಾಗಿನಿಂದಲೂ ಫೋಟೋಶೂಟ್ ಮಾಡಿಸಿಕೊಂಡು ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಭಾರೀ ಸುದ್ದಿಯಲ್ಲಿದ್ದರು. ಈಗ ಗೆಳೆಯ ಹಾಗೂ ಮಗುವಿನೊಂದಿಗೆ ಇರುವ ಫೋಟೋವನ್ನು ಆ್ಯಮಿ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ಇದನ್ನೂ ಓದಿ: ಇನ್ನೇನಿದ್ರೂ ಮುಂದಿನ ವರ್ಷವೇ ಮದುವೆ: ಗರ್ಭಿಣಿ ಆ್ಯಮಿ
https://www.instagram.com/p/B1iqAZIJxv1/?utm_source=ig_embed&utm_campaign=dlfix
ಮಗು ಹಾಗೂ ತಾಯಿ ಇಬ್ಬರೂ ಕ್ಷೇಮವಾಗಿದ್ದಾರೆ. ಗಂಡು ಮಗುವಾಗಿರುವುದು ಖುಷಿ ತಂದಿದೆ ಎಂದು ಆ್ಯಮಿ ಇನ್ಸ್ಟಾಗ್ರಾಮ್ ಪೋಸ್ಟ್ ನಲ್ಲಿ ಬರೆದುಕೊಂಡಿದ್ದಾರೆ. ಗರ್ಭಿಣಿಯಾಗಲಿದ್ದಾಲೇ ತಮಗೆ ಗಂಡು ಮಗು ಎಂದರೆ ತುಂಬಾ ಇಷ್ಟ ಎಂದು ಆ್ಯಮಿ ಹೇಳಿಕೊಂಡಿದ್ದರು. ಇದನ್ನೂ ಓದಿ: ಸೀಮಂತ ಕಾರ್ಯಕ್ರಮದಲ್ಲಿ ಮಿಂಚಿದ ವಿಲನ್ ಬ್ಯೂಟಿ
2018 ಜನವರಿ 1ರಂದು ಆ್ಯಮಿ ಜಾಕ್ಸನ್ ಉದ್ಯಮಿ ಜಾರ್ಜ್ ಪನಯೌಟು ಜೊತೆ ನಿಶ್ಚಿತಾರ್ಥ ಮಾಡಿಕೊಳ್ಳುವುದಾಗಿ ಘೋಷಿಸಿದ್ದರು. ಬ್ರಿಟನ್ ಮದರ್ಸ್ ಡೇಯಂದು ಆ್ಯಮಿ ಜಾಕ್ಸನ್ ಗೆಳೆಯನೊಂದಿಗೆ ಕುಳಿತ ಬೇಬಿ ಬಂಪ್ ಫೋಟೋವನ್ನು ಇನ್ಸ್ಟಾಗ್ರಾಮ್ನಲ್ಲಿ ಹಾಕಿಕೊಳ್ಳುವ ಮೂಲಕ ತಾಯಿ ಆಗುತ್ತಿರುವ ವಿಷಯವನ್ನು ತಿಳಿಸಿದ್ದರು. ಗರ್ಭಿಣಿಯಾದ ಬಳಿಕ ಗೆಳೆಯ ಜಾರ್ಜ್ ಜೊತೆ ಮೇ 5ರಂದು ನಿಶ್ಚಿತಾರ್ಥ ಸಹ ಮಾಡಿಕೊಂಡಿದ್ದರು. ತಮ್ಮ ಪ್ರೆಗ್ನೆನ್ಸಿ ಸಮಯವನ್ನು ತುಂಬಾ ಎಂಜಾಯ್ ಮಾಡಿದ್ದ ಆ್ಯಮಿ, ಫೋಟೋಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಿದ್ದರು.
https://www.instagram.com/p/B2wCaALpayw/?utm_source=ig_embed&utm_campaign=dlfix