It’s Too Much, ಬೆಡ್‌ ರೂಮ್‌ವರೆಗೆ ಬಂದಿದ್ದು ಸರಿಯಲ್ಲ – ಪೊಲೀಸರ ವಿರುದ್ಧ ಅಲ್ಲು ಅರ್ಜುನ್‌ ಗರಂ

Public TV
2 Min Read
Allu Arjun 3

ಹೈದರಾಬಾದ್‌: ಪುಷ್ಪ 2’ (Pushpa 2) ಪ್ರೀಮಿಯರ್ ಶೋ ವೇಳೆ ಕಾಲ್ತುಳಿತ ಸಂಭವಿಸಿ ಮಹಿಳೆ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿಂತೆ ನಟ ಅಲ್ಲು ಅರ್ಜುನ್ (Allu Arjun) ಅವರನ್ನು ಹೈದರಾಬಾದ್‌ನ ಚಿಕ್ಕಡಪಲ್ಲಿ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ. ನಟನ ಬೆಡ್‌ರೂಮ್‌ಗೆ ನುಗ್ಗಿ ಪೊಲೀಸರು ಬಂಧಿಸಿದ್ದಾರೆ ಎಂದು ಹೇಳಲಾಗಿತ್ತು. ಈ ಬೆನ್ನಲ್ಲೇ ವಿಡಿಯೋವೊಂದು ವೈರಲ್‌ ಆಗಿದೆ. ಈ ವೀಡಿಯೋನಲ್ಲಿ ಪೊಲೀಸರು ತಮ್ಮನ್ನು ಬಂಧಿಸಿದ ರೀತಿಗೆ ನಟ ಅಸಮಾಧಾನ ಹೊರಹಾಕಿದ್ದಾರೆ ಎನ್ನಲಾಗಿದೆ.

ಹೌದು. ಪೊಲೀಸರಿಗೆ ಸಹಕರಿಸಲು ಸಿದ್ಧನಿರುವಾಗ ಬೆಡ್‌ರೂಮ್‌ಗೆ ನುಗ್ಗುವ ಅವಶ್ಯಕತೆ ಏನಿತ್ತು? ನಾನು ಬೆಡ್‌ರೂಮ್‌ನಲ್ಲಿ ಬಟ್ಟೆ ಬದಲಾಯಿಸುತ್ತಿದ್ದೆ. ಹೊರಗಡೆ ಬಂದು ಕರೆದಿದ್ರೆ ಬರ್ತಿದ್ದೆ. ನೀವು ಬಂದಿದ್ದು, ಕರ್ಕೋಂಡು ಹೋಗಿದ್ದು ತಪ್ಪಲ್ಲ, ಆದ್ರೆ ಬೆಡ್ ರೂಮ್ ಹತ್ರ ಬಂದಿರೋದು ತಪ್ಪು. ದಿಸ್ ಈಸ್ ಟೂ ಮಚ್, ಇದು ಒಳ್ಳೇದು ಅಲ್ಲ ಸರ್ ಎಂದು ಅಸಮಾಧಾನ ಹೊರಹಾಕಿದ್ದಾರೆ. ಅಲ್ಲದೇ ನಟ ಕಾಫಿ ಕುಡಿದ ಬಳಿಕ ಚಿಕ್ಕಡಪಲ್ಲಿ ಪೊಲೀಸರು ತಮ್ಮ ಕಾರಿನಲ್ಲಿ ನಟನನ್ನು ಕರೆದೊಯ್ದಿದ್ದನ್ನು ವೀಡಿಯೋದಲ್ಲಿ ತೋರಿಸಲಾಗಿದೆ.

ಸದ್ಯ ಅಲ್ಲು ಅರ್ಜುನ್‌ನನ್ನು ಬಂಧಿಸಿರುವ ಪೊಲೀಸರು ಮೆಡಿಕಲ್‌ ಟೆಸ್ಟ್‌ಗಾಗಿ ಉಸ್ಮಾನಿಯಾ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಬಳಿಕ ನಾಂಪಲ್ಲಿ ಕೋರ್ಟ್‌ಗೆ ಹಾಜರು ಪಡಿಸಲು ಪೊಲೀಸರ ತಯಾರಿ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: Allu Arjun | ಐಕಾನ್‌ ಸ್ಟಾರ್‌ ಅಲ್ಲು ಅರ್ಜುನ್‌ ಅರೆಸ್ಟ್‌

\

ಏನಿದು ಕೇಸ್‌?
ಇದೇ ತಿಂಗಳ ಡಿಸೆಂಬರ್ 4 ರಂದು ನಡೆದ ʻಪುಷ್ಪ 2: ದಿ ರೂಲ್ʼನ ಪ್ರೀಮಿಯರ್‌ ಶೋ ವೇಳೆ ಹೈದರಾಬಾದ್‌ನ ಸಂಧ್ಯಾ ಥಿಯೇಟರ್‌ನಲ್ಲಿ ಕಾಲ್ತುಳಿತ ಸಂಭವಿಸಿ ರೇವತಿ (39) ಎಂಬ ಮಹಿಳೆ ಸಾವನ್ನಪ್ಪಿದ್ದರು. ಅವರ 9 ವರ್ಷದ ಮಗ ಕಾಲ್ತುಳಿತಕ್ಕೆ ಸಿಕ್ಕಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಈ ಪ್ರಕರಣದಲ್ಲಿ ಅಲ್ಲು ಅರ್ಜುನ್‌ ಸಹ ಆರೋಪಿಯಾಗಿದ್ದರು. ಬಿಎನ್‌ಎಸ್ 105, 118, 105 ಅಡಿ ಪ್ರಕರಣ ದಾಖಲಿಸಿದ್ದ ಪೊಲೀಸರು ಇಂದು ಬಂಧಿಸಿದ್ದಾರೆ.

ಈ ಪ್ರಕರಣ ವಜಾಗೊಳಿಸುವಂತೆ ನಟ ಈಗಾಗಲೇ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಈನಡುವೆ ಚಿಕ್ಕಡಪಲ್ಲಿ ಪೊಲೀಸರು ಏಕಾಏಕಿ ಬಂಧಿಸಿದ್ದಾರೆ. ಇದು ಪುಷ್ಪಾ-2 ಸಕ್ಸಸ್‌ ಸಂಭ್ರಮದಲ್ಲಿರುವ ಚಿತ್ರತಂಡಕ್ಕೆ ಹಾಗೂ ಅಲ್ಲು ಅರ್ಜುನ್‌ ಅಭಿಮಾನಿಗಳಿಗೆ ಶಾಕ್‌ ಕೊಟ್ಟಂತಾಗಿದೆ.

25 ಲಕ್ಷ ಪರಿಹಾರ ಘೋಷಿಸಿದ್ದ ನಟ:
ಇತ್ತೀಚೆಗೆ ನಟ ಅಲ್ಲು ಅರ್ಜುನ್‌ ಸಂಧ್ಯಾ ಥಿಯೇಟರ್‌ನಲ್ಲಿ ಸಂಭವಿಸಿದ ದುರಂತ ನೆನೆದು ಸಂತಾಪ ಸೂಚಿಸಿದ್ದರು. ಅಲ್ಲದೇ ಮೃಥ ರೇವತಿ ಕುಟುಂಬಕ್ಕೆ 25 ಲಕ್ಷ ರೂ. ಪರಿಹಾರ ಘೋಷಣೆ ಮಾಡಿದ್ದರು. ಇದನ್ನೂ ಓದಿ: ಚಿಕ್ಕಬಳ್ಳಾಪುರ | ರಾಜ್ಯಕ್ಕೂ ತಟ್ಟಿದ ಸೈಕ್ಲೋನ್ ಎಫೆಕ್ಟ್ – ಚುಮುಚುಮು ಚಳಿಯೊಂದಿಗೆ ತುಂತುರು ಮಳೆ!

Share This Article