ನವದೆಹಲಿ: ಏಪ್ರಿಲ್ 1 ಅಂದರೆ ಇಂದಿನಿಂದ ಆರಂಭವಾಗಿರುವ ಹೊಸ ಆರ್ಥಿಕ ವರ್ಷದಲ್ಲಿ ದಿನಬಳಕೆಯ ಅನೇಕ ವಸ್ತುಗಳು ದುಬಾರಿಯಾಗಲಿವೆ. 2017-18ನೇ ಸಾಲಿನ ಬಜೆಟ್ ಮಂಡನೆ ವೇಳೆ ಹಣಕಾಸು ಸಚಿವ ಅರುಣ್ ಜೇಟ್ಲಿ, ಕೆಲವು ವಸ್ತುಗಳ ಮೇಲಿನ ತೆರಿಗೆಯನ್ನ ಹೆಚ್ಚಿಸಿದ್ದರು ಹಾಗೇ ಇನ್ನೂ ಕೆಲವು ಉತ್ಪನ್ನಗಳ ಮೇಲಿನ ತೆರಿಗೆಯನ್ನ ಕಡಿಮೆ ಮಾಡಿದ್ದರು. ಇದಕ್ಕನುಗುಣವಾಗಿ ಕೆಲವು ವಸ್ತುಗಳು ದುಬಾರಿಯಾಗಿದ್ದರೆ ಮತ್ತೂ ಕೆಲವು ಅಗ್ಗವಾಗಿವೆ. ಅವುಗಳ ಪಟ್ಟಿ ಇಲ್ಲಿದೆ:
ಯಾವುದು ದುಬಾರಿ?:
1. ಸಿಗರೇಟ್
2. ಪಾನ್ ಮಸಾಲಾ
3. ಸಿಗರ್
4. ಬೀಡಿ
5. ತಂಬಾಕು
6. ಎಲ್‍ಇಡಿ ದೀಪದ ಘಟಕಗಳು
7. ಗೋಡಂಬಿ
8. ಅಲ್ಯೂಮಿನಿಯಂ ಅದಿರು
9. ಆಪ್ಟಿಕಲ್ ಫೈಬರ್ ತಯಾರಿಕೆಯಲ್ಲಿ ಬಳಸುವ ಪಾಲಿಮರ್ ಲೇಪನವಿರುವ ಎಂಎಸ್ ಟೇಪ್
10. ಬೆಳ್ಳಿ ನಾಣ್ಯಗಳು
Advertisement
ಇದಲ್ಲದೆ ಏಪ್ರಿಲ್ 1ರಿಂದ ಕಾರ್, ಮೋಟಾರ್‍ಸೈಕಲ್ ಹಾಗೂ ಆರೋಗ್ಯ ವಿಮೆಗಳಿಗೆ ಹೆಚ್ಚಿನ ಪ್ರೀಮಿಯಮ್ ಪಾವತಿಸಬೇಕಾಗುತ್ತದೆ
Advertisement
ಯಾವುದು ಅಗ್ಗ?:
1. ಆನ್‍ಲೈನ್ ರೈಲ್ವೆ ಟಿಕೆಟ್ ಕಾಯ್ದಿರಿಸುವುದು
2. ಫ್ಯೂಲ್ ಸೆಲ್ ಆಧರಿತ ಶಕ್ತಿ ಉತ್ಪಾದಕ ಸಾಧನಗಳು
3. ಗಾಳಿ ಚಾಲಿತ ಶಕ್ತಿ ಉತ್ಪಾದಕಗಳು
4. ಎಲ್‍ಎನ್‍ಜಿ(ಲಿಕ್ವಿಫೈಡ್ ನ್ಯಾಚುರಲ್ ಗ್ಯಾಸ್)/ ನೈಸರ್ಗಿಕ ಅನಿಲ
5 ಸೋಲಾರ್ ಪ್ಯಾನೆಲ್‍ಗಳಲ್ಲಿ ಬಳಸುವ ಸೋಲಾರ್ ಟೆಂಪರ್ಡ್ ಗ್ಲಾಸ್
6 ಲೆದರ್ ಉತ್ಪನ್ನಗಳ ತಯಾರಿಕೆಗೆ ಬಳಸುವ ವೆಜಿಟೆಬಲ್ ಟ್ಯಾನಿಂಗ್ ಎಕ್ಸ್ಟ್ರಾಕ್ಟ್ಸ್
7. ಪಿಓಎಸ್ ಮಷೀನ್ ಕಾರ್ಡ್ ಮತ್ತು ಫಿಂಗರ್‍ಪ್ರಿಂಟ್ ರೀಡರ್‍ಗಳು
8. ರಕ್ಷಣಾ ಸೇವೆಗಳಿಗೆ ಸಾಮೂಹಿಕ ಇನ್ಶೂರೆನ್ಸ್
9. ಮನೆಬಳಕೆಯ ಆರ್‍ಓ ಮೆಂಬ್ರೆನ್ಸ್ ಘಟಕಗಳು