ನವದೆಹಲಿ: ಇಂಡೋ-ಟಿಬೆಟ್ ಗಡಿ ಪೊಲೀಸ್(ಐಟಿಬಿಪಿ) ಪೇದೆಯೊಬ್ಬರು 73ನೇ ಸ್ವಾತಂತ್ರ್ಯ ದಿನದ ಪ್ರಯುಕ್ತ ತಮ್ಮ ಸಹೋದ್ಯೋಗಿಗಳಿಗೆ ‘ಸಂದೇಸೆ ಆತೇ ಹೈ’ ಹಾಡನ್ನು ಹೇಳಿ ಶುಭಕೋರಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.
ಇಂದು 73ನೇ ಸ್ವಾತಂತ್ರ್ಯ ದಿನವನ್ನು ದೇಶಾದಂತ ಸಡಗರ, ಸಂಭ್ರಮದಿಂದ ಆಚರಿಸಲಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಸಂಭ್ರಮಾಚರಣೆಯ ಸಂದೇಶಗಳು, ಚಿತ್ರಗಳು, ವಿಡಿಯೋಗಳೇ ರಾರಾಜಿಸುತ್ತಿದೆ. ಅವುಗಳ ಪೈಕಿ, ಇಂಡೋ-ಟಿಬೆಟ್ ಐಟಿಬಿಪಿ ಪೇದೆ ಲವ್ಲಿ ಸಿಂಗ್ ತಮ್ಮ ಮಧುರ ಕಂಠದಿಂದ ಹಾಡೊಂದನ್ನು ಹೇಳಿ ಸಹೋದ್ಯೋಗಿಗಳಿಗೆ ಸಮರ್ಪಿಸಿದ್ದಾರೆ. ಅವರ ಜೊತೆ ಇತರೆ ಸೈನಿಕರು ಕೂಡ ಹಾಡಿ ಸಾಥ್ ನೀಡಿದ್ದಾರೆ. ಈ ಹಾಡಿನ ವಿಡಿಯೋ ನೋಡಿದವರು ಪೇದೆಯ ಕಂಠಸಿರಿಗೆ ಫಿದಾ ಆಗಿಬಿಟ್ಟಿದ್ದಾರೆ.
Advertisement
'ए गुजरने वाली हवा बता
मेरा इतना काम करेगी क्या'
Constable Lovely Singh of ITBP dedicates song to colleagues on 73rd Independence Day.#IndependenceDay pic.twitter.com/FO1mnSQU5V
— ITBP (@ITBP_official) August 14, 2019
Advertisement
1997ರಲ್ಲಿ ತೆರೆಕಂಡ ಬಾಲಿವುಡ್‍ನ ಬ್ಲಾಕ್ ಬಸ್ಟರ್ ಚಿತ್ರ ‘ಬಾರ್ಡರ್’ನ ಹಿಟ್ ಹಾಡು ‘ಸಂದೇಸೆ ಆತೇ ಹೈ’ ಹಾಡನ್ನು ಐಟಿಬಿಪಿ ಪೇದೆ ಗುನುಗುತ್ತಿರುವ ವಿಡಿಯೋ ವೈರಲ್ ಆಗಿದ್ದು, ನೆಟ್ಟಿಗರ ಮನಗೆಲ್ಲುತ್ತಿದೆ.
Advertisement
ಈ ಹಾಡಿನ ವಿಡಿಯೋವನ್ನು ಐಟಿಬಿಪಿ ಅಧಿಕೃತ ಟ್ವಿಟರ್ ಪೇಜ್‍ನಲ್ಲಿ ಶೇರ್ ಮಾಡಲಾಗಿದೆ. ಈ ವಿಡಿಯೋ ನೋಡಿದವರು ಪೇದೆಯ ಮಧುರ ಸ್ವರಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
Advertisement
ಈ ಹಿಂದೆ ಬಿಎಸ್‍ಎಫ್ ಯೋಧ ಸುರಿಂದರ್ ಸಿಂಗ್ ಅವರು ಇದೇ ಹಾಡನ್ನು ಹಾಡಿದ್ದರು. ಸುರಿಂದರ್ ಸಿಂಗ್ ಅವರ ಹಾಡು ವೈರಲ್ ಆಗಿತ್ತು.
https://twitter.com/anita_chauhan80/status/1083575725234495490