– ಕೆಲ ಶಸ್ತ್ರಾಸ್ತ್ರಗಳು ನಾಪತ್ತೆ
ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ (Jammu And Kashmir) ಗಂಡೇರ್ಬಲ್ ಜಿಲ್ಲೆಯಲ್ಲಿ ಬೆಳ್ಳಂಬೆಳಗ್ಗೆ ಭೀಕರ ಅಪಘಾತ ಸಂಭವಿಸಿದೆ. ಐಟಿಬಿಪಿ (Indo Tibetan Border Police) ಯೋಧರನ್ನು ಕರೆದೊಯ್ಯುತ್ತಿದ್ದ ಬಸ್ ಭಾರೀ ಮಳೆಯ ನಡುವೆ ಸಿಂಧ್ ನದಿಗೆ ಉರುಳಿ ಬಿದ್ದಿದೆ.
A bus reportedly carrying ITBP Jawans fell into the Sindh river this early morning in Ganderbal. Rescue operation underway pic.twitter.com/OsMk8K5PTn
— Saurabh Sharma (@saurabhsherry) July 30, 2025
ಈಗಾಗಲೇ ಎಸ್‌ಡಿಆರ್‌ಎಫ್ (SDRF) ತಂಡ ಸ್ಥಳಕ್ಕೆ ದೌಡಾಯಿಸಿದ್ದು, ರಕ್ಷಣಾ ಕಾರ್ಯ ಪ್ರಗತಿಯಲ್ಲಿದೆ. ಸಂಬಂಧಪಟ್ಟ ಸಂಸ್ಥೆಗಳೂ ನೆರವಿಗೆ ಧಾವಿಸಿವೆ. ಭಾರೀ ಮಳೆಯ ಹಿನ್ನೆಲೆ ದುರಂತ ಸಂಭವಿಸಿದ್ದು, ಕೆಲವು ಶಸ್ತ್ರಾಸ್ತ್ರಗಳು ನಾಪತ್ತೆಯಾಗಿವೆ ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: ವಿಶ್ವದ ಅತ್ಯಂತ ದುಬಾರಿ ಕಣ್ಗಾವಲು ಉಪಗ್ರಹ ಇಂದು ನಭಕ್ಕೆ; ಭಾರತ-ಅಮೆರಿಕ ಮಹತ್ವದ ಹೆಜ್ಜೆ
VIDEO | Jammu and Kashmir: A bus belonging to the ITBP falls into Nullah Sind at Kullan, Ganderbal. SDRF teams are at the spot. More details are awaited.#JammuAndKashmir #Ganderbal
(Full video available on PTI Videos – https://t.co/n147TvrpG7) pic.twitter.com/qmohhwuQQ0
— Press Trust of India (@PTI_News) July 30, 2025
ರಕ್ಷಣಾ ತಂಡಗಳ ಹುಡುಕಾಟದ ವೇಲೆ ಈವರೆಗೆ ಮೂವರು ಶಸ್ತ್ರಾಸ್ತ್ರಗಳು ಸಿಕ್ಕಿವೆ. ಇನ್ನುಳಿದ ಶಸ್ತ್ರಾಸ್ತ್ರಗಳಿಗೆ ಹುಡುಕಾಟ ನಡೆಯುತ್ತಿದೆ. ಈವರೆಗೆ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ, ಕಾರ್ಯಾಚರಣೆ ಮುಂದುವರಿದಿದೆ. ಇದನ್ನೂ ಓದಿ: ಕಾಶ್ಮೀರದಲ್ಲಿ ಭದ್ರತಾ ಪಡೆಗಳೊಂದಿಗೆ ಗುಂಡಿನ ಚಕಮಕಿ – ಪಹಲ್ಗಾಮ್ ಪಾತಕಿ ಬೆನ್ನಲ್ಲೇ ಮತ್ತಿಬ್ಬರು ಉಗ್ರರು ಎನ್‌ಕೌಂಟರ್