ಮಾ.8ಕ್ಕೆ ಇಟಲಿಯಲ್ಲಿ ಒಟ್ಟು ಸಾವು 463, ಮಾ.18ರ ಒಂದೇ ದಿನ 475 ಬಲಿ

Public TV
1 Min Read
ITALY DEATH

ರೋಮ್: ಇಟಲಿಯಲ್ಲಿ ಕೊರೊನಾಗೆ ಒಂದೇ ದಿನ 475 ಮಂದಿ ಸಾವನ್ನಪ್ಪಿದ್ದು ಇಲ್ಲಿಯವರೆಗೆ 2,978 ಮೃತಪಟ್ಟಿದ್ದಾರೆ.

ಹೌದು. 10 ದಿನದ ಹಿಂದೆ ಮಾರ್ಚ್ 8 ರಂದು ಇಟಲಿಯಲ್ಲಿ ಒಟ್ಟು 463 ಮಂದಿ ಸಾವನ್ನಪ್ಪಿದ್ದರು. ಆದರೆ ಬುಧವಾರ ಒಂದೇ ದಿನ 475 ಮಂದಿ ಮೃತಪಟ್ಟಿದ್ದು ಸಾವಿನ ಸಂಖ್ಯೆ ಇಂದು ಮೂರು ಸಾವಿರದ ಗಡಿ ದಾಟುವ ಸಾಧ್ಯತೆಯಿದೆ.

ಇಟಲಿಯಲ್ಲಿ ಎಲ್ಲ ಆಸ್ಪತ್ರೆಗಳು ಭರ್ತಿಯಾಗಿವೆ. ಎಲ್ಲಿ ನೋಡಿದ್ದರಲ್ಲಿ ರೋಗಿಗಳೇ ಕಾಣುತ್ತಿದ್ದಾರೆ. ಬುಧವಾರದವರೆಗೆ ಒಟ್ಟು 35,713 ಮಂದಿಗೆ ಕೊರೊನಾ ಬಂದಿದ್ದು, 4,025 ಮಂದಿ ಕೊರೊನಾದಿಂದ ಗುಣಮುಖರಾಗಿದ್ದಾರೆ.

ಇಟಲಿಯ ಲೊಂಬಾರ್ಡಿ ಪ್ರಾಂತ್ಯದಲ್ಲಿ ಒಟ್ಟು 12 ಲಕ್ಷ ಜನ ಸಂಖ್ಯೆಯಿದ್ದು ಇಲ್ಲಿನ ಬರ್ಗಾಮೊ ಪ್ರದೇಶದಲ್ಲಿ ಅತಿಹೆಚ್ಚು ಸಾವು ಸಂಭವಿಸಿದೆ. ಒಟ್ಟು 1,640 ಮಂದಿ ಈ ಪ್ರದೇಶದಲ್ಲಿ ಮೃತಪಟ್ಟಿದ್ದಾರೆ. ಇದನ್ನೂ ಓದಿ: ಯಾವ ರಕ್ತದ ಗುಂಪಿನವರಿಗೆ ಕೊರೊನಾ ಬೇಗ ಬರುತ್ತದೆ? – ಚೀನಾ ಅಧ್ಯಯನ ವರದಿ ಬಹಿರಂಗ

https://twitter.com/WarsontheBrink/status/1240528511514873862

ದಿನೇ ದಿನೇ ಸಾವಿನ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಇಟಲಿಯಲ್ಲಿ ಶವವನ್ನು ಸಾಗಿಸಲು ಜನರೇ ಬರುತ್ತಿಲ್ಲ. ಯಾಕೆಂದರೆ ಮೃತಪಟ್ಟ ವ್ಯಕ್ತಿಗಳ ಸಂಬಂಧಿಕರು ಸಹ ಕೊರೊನಾ ಪೀಡಿತರಾಗಿದ್ದಾರೆ. ಹೀಗಾಗಿ ಮಿಲಿಟರಿ ವಾಹನದಲ್ಲಿ ಶವಗಳನ್ನು ಸಾಗಿಸಲಾಗುತ್ತಿದೆ.

ಆಸ್ಪತ್ರೆಗಳು ದಾಖಲಾಗದ ರೋಗಿಗಳು ಮನೆಯಲ್ಲೇ ಸಾವನ್ನಪ್ಪುತ್ತಿದ್ದಾರೆ. ಆದರೆ ಈ ವ್ಯಕ್ತಿಗಳ ಅಂತ್ಯಸಂಸ್ಕಾರವನ್ನು ಕೂಡಲೇ ನೆರವೇರಿಸುವಂತಿಲ್ಲ. ಇಬ್ಬರು ವೈದ್ಯರು ಶವಗಳನ್ನು ಪರೀಕ್ಷಿಸಿದ ನಂತರವಷ್ಟೇ ಅಂತ್ಯಸಂಸ್ಕಾರ ನಡೆಸಬೇಕೆಂದು ಇಟಲಿ ಸರ್ಕಾರ ಸೂಚಿಸಿದೆ. ಸಾವಿನ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಪತ್ರಿಕೆಗಳಲ್ಲಿ 10 ಪುಟ ಶ್ರದ್ಧಾಂಜಲಿಗೆ ಮೀಸಲಾಗಿವೆ.

ಒಟ್ಟು ವಿಶ್ವದಲ್ಲಿ 2,18,585 ಮಂದಿಗೆ ಕೊರೊನಾ ಪೀಡಿತರಾಗಿದ್ದು, ಈ ಪೈಕಿ 8,943 ಮಂದಿ ಮೃತಪಟ್ಟಿದ್ದರೆ 85,714 ಮಂದಿ ಗುಣಮುಖರಾಗಿದ್ದಾರೆ. ಚೀನಾದಲ್ಲಿ 80,928 ಮಂದಿ ವೈರಸ್ ಬಂದಿದೆ. ಈ ಪೈಕಿ 3,245 ಮಂದಿ ಮೃತಪಟ್ಟರೆ 70,420 ಮಂದಿ ಗುಣಮುಖರಾಗಿದ್ದಾರೆ.

ಸ್ಪೇನ್ ದೇಶದಲ್ಲಿ 14,769 ಮಂದಿಗೆ ಕೊರೊನಾ ಬಂದಿದ್ದರೆ 1,081 ಮಂದಿ ಗುಣಮುಖರಾಗಿದ್ದು, 638 ಮಂದಿ ಮೃತಪಟ್ಟಿದ್ದಾರೆ.

https://twitter.com/FarhangNamdar/status/1240574161870819328

Share This Article
Leave a Comment

Leave a Reply

Your email address will not be published. Required fields are marked *