ರೋಮ್: ಒಕ್ಕೂಟದ ಪತನದ ಹಿನ್ನೆಲೆ ಇಟಲಿ ಪಿಎಂ ಮಾರಿಯೋ ದ್ರಾಘಿ ರಾಜೀನಾಮೆ ನೀಡಲು ಮುಂದಾಗಿದ್ದಾರೆ.
ಸಂಸತ್ತಿನಲ್ಲಿ ಪ್ರಮುಖ ಮಸೂದೆಗೆ ಮತ ಚಲಾಯಿಸಲು ಜನಪ್ರಿಯ ಒಕ್ಕೂಟದ ಪಾಲುದಾರರು ನಿರಾಕರಿಸಿದ ನಂತರ ಮಾರಿಯೋ ದ್ರಾಘಿ ಅವರು ಗುರುವಾರ ರಾಜೀನಾಮೆ ನೀಡಲು ಮುಂದಾಗಿದ್ದರು. ಆದರೆ ಅಧ್ಯಕ್ಷರು ರಾಜೀನಾಮೆ ನೀಡದಂತೆ ಒತ್ತಾಯಿಸಿದ್ದಾರೆ.
Advertisement
Advertisement
ರಾಜೀನಾಮೆಯ ನಿರಾಕರಣೆಯು ದ್ರಾಘಿ ಅವರ 17-ತಿಂಗಳ ಸರ್ಕಾರದ ಭವಿಷ್ಯವನ್ನು ಅಸ್ತವ್ಯಸ್ತಗೊಳಿಸಿತು. ಒಕ್ಕೂಟದೊಳಗೆ ಹೆಚ್ಚುತ್ತಿರುವ ತೀಕ್ಷ್ಣವಾದ ಭಿನ್ನಾಭಿಪ್ರಾಯಗಳಿಂದ ಸರ್ಕಾರದ ಉಳಿವಿನ ಬಗ್ಗೆ ತೀವ್ರವಾಗಿ ಚರ್ಚೆಯಾಗುತ್ತಿದೆ. ಇದನ್ನೂ ಓದಿ: ಜೇಮ್ಸ್ ವೆಬ್ ಟೆಲಿಸ್ಕೋಪ್‍ನಲ್ಲಿ ಸೆರೆ ಸಿಕ್ಕ ಗುರು-ಚಂದ್ರನ ಬೆರಗುಗೊಳಿಸುವ ಫೋಟೋ
Advertisement
ಕಾರಣವೇನು?
ದ್ರಾಘಿ ಅವರ ವಿಶಾಲ ಸಮ್ಮಿಶ್ರ ಸರ್ಕಾರವು ಕೇಂದ್ರ ಮತ್ತು ಜನಪ್ರಿಯ 5-ಸ್ಟಾರ್ ಮೂವ್‍ಮೆಂಟ್‍ನ ಪಕ್ಷಗಳನ್ನು ಒಳಗೊಂಡಿದೆ. ಈ ರೀತಿ ಸರ್ಕಾರವನ್ನು ಇಟಲಿಯ ಜನರು ಕೊರೊನಾ ಸಾಂಕ್ರಾಮಿಕ ರೋಗದಿಂದ ಚೇತರಿಸಿಕೊಳ್ಳಲು ಸಹಾಯವಾಗಬೇಕು ಎಂದು ವಿನ್ಯಾಸಗೊಳಿಸಲಾಗಿತ್ತು.
Advertisement
ಗುರುವಾರ ದ್ರಾಘಿ ಅವರ ಸರ್ಕಾರವು ಸೆನೆಟ್‍ನಲ್ಲಿ ವಿಶ್ವಾಸ ಮತವನ್ನು ಗೆದ್ದುಕೊಂಡಿತು. 5-ಸ್ಟಾರ್ ಮೂವ್‍ಮೆಂಟ್ ಮಸೂದೆಯನ್ನು ಬೆಂಬಲಿಸಲು ನಿರಾಕರಿಸಿ 26 ಬಿಲಿಯನ್ ಯುರೋಗಳನ್ನು(20,84,89,73,56,620) ಬೇಡಿಕೆ ಇಟ್ಟಿತ್ತು. ಈ ಹಿನ್ನೆಲೆ ಡ್ರಾಘಿ ರಾಜೀನಾಮೆಯ ನಿರ್ಧಾರಕ್ಕೆ ಬಂದಿದ್ದಾರೆ.
ರಾಜೀನಾಮೆಯನ್ನು ಸಲ್ಲಿಸಲು ಕ್ವಿರಿನಾಲ್ ಅಧ್ಯಕ್ಷೀಯ ಅರಮನೆಗೆ ತೆರಳುವ ಸ್ವಲ್ಪ ಸಮಯದ ಮೊದಲು ದ್ರಾಘಿ ಅವರು, ಈ ಸರ್ಕಾರದ ರಚನೆಯನ್ನು ಉಳಿಸಿಕೊಳ್ಳಲು ರಾಷ್ಟ್ರೀಯ ಏಕತೆಯ ಬಹುಪಾಲು ಸ್ಥಾನಗಳು ಅಸ್ತಿತ್ವದಲ್ಲಿಲ್ಲ ಎಂದು ಘೋಷಿಸಿದ್ದರು.