ರೋಮ್: ಈ ಪುರುಷ ಪ್ರಧಾನ ವ್ಯವಸ್ಥೆಯಲ್ಲಿ ಹೆಣ್ಣಿನ ಮೇಲೆ ಒಂದಿಲ್ಲೊಂದು ದೌರ್ಜನ್ಯಗಳಾಗುತ್ತಿರುತ್ತವೆ. ಹೆಣ್ಣಿನ ಮೇಲೆ ಪುರುಷ ತಮ್ಮ ಪ್ರಾಬಲ್ಯ ಸಾಧಿಸುತ್ತಿದ್ದಾನೆ. ಮನೆಯಲ್ಲೂ ಸಹ ಆಕೆಯನ್ನು ಹೆದರಿಸಿ, ಬೆದರಿಸಿ ಹದ್ದುಬಸ್ತಿನಲ್ಲಿಟ್ಟಿರುತ್ತಾನೆ. ತಾನು ಹಾಕಿದ ಗೆರೆ ದಾಟುವಂತಿಲ್ಲ ಎಂಬ ಷರತ್ತುಗಳನ್ನೂ ವಿಧಿಸುತ್ತಾನೆ ಎಂಬುದು ವಾಡಿಕೆ. ಆದರೆ ಇದಕ್ಕೆ ಅಪವಾದವೆಂಬಂತೆ ಇಟಲಿಯಲ್ಲಿ ಒಂದು ಅಚ್ಚರಿ ಘಟನೆ ನಡೆದಿದೆ.
Advertisement
ಡ್ರಗ್ಸ್ ಸಂಬಂಧಿಸಿದ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಇಟಲಿಯ ವ್ಯಕ್ತಿಯೊಬ್ಬ ಈಗ ತಾನು ಮನೆಗೆ ಹೋಗಲು ನಿರಾಕರಿಸಿದ್ದಾನೆ. “ನನ್ನನ್ನು ಜೈಲಿನಲ್ಲೇ ಬಂಧಿಸಿ, ಮನೆಗೆ ಕಳುಹಿಸಬೇಡಿ” ಎಂದು ಪೊಲೀಸರಿಗೆ ದುಂಬಾಲು ಬಿದ್ದಿದ್ದಾನೆ. ಪೊಲೀಸರು ಹಲವು ಬಾರಿ ಮನವರಿಕೆ ಮಾಡಿದರೂ ಪ್ರಯೋಜನವಾಗಿಲ್ಲ. ಇದನ್ನೂ ಓದಿ: ನಟಿಯರಿಗೆ ಸಂಕಷ್ಟ: ಎಫ್‌ಎಸ್‌ಎಲ್ ವರದಿಯಲ್ಲಿ ಡ್ರಗ್ಸ್ ಸೇವನೆ ಸಾಬೀತು
Advertisement
ನನ್ನ ಪತ್ನಿಯೊಂದಿಗೆ ಮನೆಯಲ್ಲಿ ಇರಲು ಇಷ್ಟ ಇಲ್ಲ. ನಾನು ಜೈಲಿನಲ್ಲೇ ಇರುತ್ತೇನೆ ಎಂದು ವ್ಯಕ್ತಿ ಹಠ ಹಿಡಿದಿದ್ದಾನೆ. ಆತನ ಮನವಿ ಪೊಲೀಸರಲ್ಲಿ ಅಚ್ಚರಿ ಮೂಡಿಸಿದೆ.
Advertisement
ಗೈಡೋನಿಯಾ ಮಾಂಟೆಸೆಲಿಯೊದಲ್ಲಿ ವಾಸವಾಗಿರುವ 30 ವರ್ಷದ ಅಲ್ಬೇನಿಯನ್ ಎಂಬ ವ್ಯಕ್ತಿ ಇದೇ ಶನಿವಾರ (ಅ.23) ರಂದು ಪೊಲೀಸ್ ಠಾಣೆಗೆ ಆಗಮಿಸಿ, “ಇನ್ನು ಮುಂದೆ ನನ್ನ ಹೆಂಡತಿಯೊಂದಿಗೆ ಗೃಹ ಬಂಧನದಲ್ಲಿ ಇರುವುದಿಲ್ಲ. ಹೆಂಡತಿಯೊಂದಿಗೆ ಬಲವಂತದ ಜೀವನ ನಡೆಸಲು ಸಾಧ್ಯವಿಲ್ಲ” ಎಂದು ಮನವಿ ಮಾಡಿದ್ದಾನೆ ಎಂದು ಕ್ಯಾರಾಬಿನಿಯೇರಿ ಪೊಲೀಸರು ತಿಳಿಸಿದ್ದಾರೆ.
Advertisement
“ಈ ವ್ಯಕ್ತಿ ಮಾದಕ ವಸ್ತುಗಳಿಗೆ ಸಂಬಂಧಿಸಿದ ಅಪರಾಧ ಪ್ರಕರಣಗಳಲ್ಲಿ ಗೃಹಬಂಧನದಲ್ಲಿದ್ದನು. ಅವನ ಶಿಕ್ಷೆಯ ಅವಧಿ ಇನ್ನೂ ಮುಗಿದಿಲ್ಲ” ಎಂದು ಟಿವೊಲಿ ಕ್ಯಾರಾಬಿನಿಯೇರಿಯ ಕ್ಯಾಪ್ಟನ್ ಫ್ರಾನ್ಸಿಸ್ಕೊ ಜಿಯಾಕೊಮೊ ಫೆರಾಂಟೆ ಹೇಳಿದ್ದಾರೆ. ಇದನ್ನೂ ಓದಿ: ಪೆಗಾಸಸ್ ಮೂಲಕ ಗೂಢಚರ್ಯೆ ಆರೋಪ – ತನಿಖೆಗೆ ಸಮಿತಿ ರಚಿಸಿದ ಸುಪ್ರೀಂಕೋರ್ಟ್
“ನನ್ನ ಮನೆ ಜೀವನ ನರಕವಾಗಿದೆ. ನಾನು ಅಲ್ಲಿಗೆ ಹೋಗಲು ಬಯಸುವುದಿಲ್ಲ. ನಾನು ಜೈಲಿಗೆ ಹೋಗುತ್ತೇನೆ” ಎಂದು ಪೊಲೀಸರಲ್ಲಿ ಆ ವ್ಯಕ್ತಿ ಮನವಿ ಮಾಡಿದ್ದಾನೆ.
ಮನೆಗೆ ಹೋಗುವುದನ್ನು ನಿರಾಕರಿಸಿ ಗೃಹಬಂಧನದ ನಿಯಮಗಳನ್ನು ಉಲ್ಲಂಘಿಸಿದ್ದರಿಂದ, ಆ ವ್ಯಕ್ತಿಯ ಮನವಿ ಕಾರ್ಯಗತವಾಯಿತು. ಮಾದಕ ವಸ್ತು ಅಪರಾಧಿಯನ್ನು ಜೈಲಿಗೆ ವರ್ಗಾಯಿಸುವಂತೆ ಸ್ಥಳೀಯ ಪೊಲೀಸರಿಗೆ ನ್ಯಾಯಾಲಯ ಆದೇಶ ಹೊರಡಿಸಿದೆ ಎಂದು ರಾಷ್ಟ್ರೀಯ ಪತ್ರಿಕೆಯೊಂದು ವರದಿ ಮಾಡಿದೆ.