ರೋಮ್: ಇಟಲಿಯ ವ್ಯಕ್ತಿಯೋರ್ವನಿಗೆ ಒಂದೇ ಬಾರಿಗೆ ಮಂಕಿಪಾಕ್ಸ್, ಕೊರೊನಾ, ಎಚ್‍ಐವಿ ಸೋಂಕು ತಗುಲಿದೆ. ಅನೇಕ ಪುರುಷರೊಂದಿಗೆ ಅಸುರಕ್ಷಿತ ಲೈಂಗಿಕ ಸಂಬಂಧ ಹೊಂದಿದ್ದರಿಂದ ವ್ಯಕ್ತಿ ಸೋಂಕು ತಗುಲಿರುವುದು ದೃಢವಾಗಿದೆ.
Advertisement
ಸ್ಪೇನ್ ಪ್ರವಾಸಕ್ಕೆ ಹೋಗಿದ್ದ ವ್ಯಕ್ತಿ ನಂತರ ಹಿಂದಿರುಗಿದ ನಂತರ ಜ್ವರ, ಆಯಾಸ ಮತ್ತು ನೋಯುತ್ತಿರುವ ಗಂಟಲು ಸೇರಿದಂತೆ ಹಲವಾರು ರೋಗಲಕ್ಷಣಗಳು ಕಾಣಿಸಿಕೊಂಡಿದೆ. ಬಳಿಕ ಪರೀಕ್ಷೆಗೆ ಒಳಪಡಿಸಿದಾಗ ವ್ಯಕ್ತಿಗೆ ಮಂಕಿಪಾಕ್ಸ್, ಕೋವಿಡ್-19 ಮತ್ತು ಎಚ್‍ಐವಿ ರೋಗ ಪಾಸಿಟಿವ್ ಬಂದಿದೆ. ಇದನ್ನೂ ಓದಿ: ಉತ್ತರ ಪ್ರದೇಶ, ತ್ರಿಪುರ ಬಳಿಕ ಕರ್ನಾಟಕ ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆ?
Advertisement
Advertisement
36 ವರ್ಷದ ಈ ವ್ಯಕ್ತಿ ಜೂನ್ 16 ರಿಂದ ಜೂನ್ 20ರವರೆಗೆ ಐದು ದಿನಗಳ ಕಾಲ ಸ್ಪೇನ್‍ನಲ್ಲಿ ತಂಗಿದ್ದನು. ಈ ವೇಳೆ ಅನೇಕ ಪುರುಷರೊಂದಿಗೆ ಅಸುರಕ್ಷಿತವಾದ ಲೈಂಗಿಕ ಸಂಬಂಧವನ್ನು ಹೊಂದಿದ್ದನು. ಮನೆಗೆ ಹಿಂತಿರುಗಿದ ಕೆಲವೇ ದಿನಗಳಲ್ಲಿ ಅಂದರೆ ಜುಲೈ 2 ರಂದು ಕೋವಿಡ್ ಪರೀಕ್ಷೆಗೆ ಒಳಗಾದನು. ಅಂದೇ ಮಧ್ಯಾಹ್ನ ಆತನ ಎಡಗೈಯಲ್ಲಿ ರ‌್ಯಾಶಸ್ ಕಂಡುಬಂದಿದೆ. ಮರುದಿನ ವ್ಯಕ್ತಿಯ ತಲೆ, ಕೈ ಕಾಲುಗಳು, ಮುಖ ಮತ್ತು ಹಿಂಭಾಗದಲ್ಲಿ ಸಣ್ಣ ಸಣ್ಣ ನೋವಿನ ಗುಳ್ಳೆಗಳು ಕಾಣಿಸಿಕೊಂಡಿದೆ. ನಂತರ ಗುಳ್ಳೆಗಳಲ್ಲಿ ಕೀವು ತುಂಬಿಕೊಂಡು ಅದು ದೇಹದ ತುಂಬೆಲ್ಲ ಹರಡಲಾರಂಭಿಸಿದೆ. ಕೂಡಲೇ ವ್ಯಕ್ತಿಯನ್ನು ಇಟಲಿಯ ಕ್ಯಾಟಾನಿಯಾದ ಸ್ಯಾನ್ ಮಾರ್ಕೊ ವಿಶ್ವವಿದ್ಯಾಲಯದ ಆಸ್ಪತ್ರೆಗೆ ಕರೆದೊಯ್ದು ಸಾಂಕ್ರಾಮಿಕ ರೋಗಗಳ ಘಟಕಕ್ಕೆ ವರ್ಗಾಯಿಸಲಾಯಿತು.
Advertisement
ನಂತರ ವ್ಯಕ್ತಿಗೆ ಅನೇಕ ಪರೀಕ್ಷೆಗಳನ್ನು ನಡೆಸಿದಾಗ ಮಂಕಿಪಾಕ್ಸ್ ಪಾಸಿಟಿವ್ ಬಂದಿದೆ. ಈ ವೇಳೆ ತಾನು ಸ್ಪೇನ್ ಪ್ರವಾಸದಲ್ಲಿದ್ದಾಗ ಪುರುಷರೊಂದಿಗೆ ಅಸುರಕ್ಷಿತ ಸಂಭೋಗ ನಡೆಸಿದ್ದಾಗಿ ಆತ ಬಹಿರಂಗಪಡಿಸಿದ್ದಾನೆ. ಕೂಡಲೇ ಮಂಕಿಪಾಕ್ಸ್ ಟೆಸ್ಟ್ ಮಾಡಲಾಗಿತ್ತು. ಅದರಲ್ಲಿಯೂ ಪಾಸಿಟಿವ್ ಬಂದಿತ್ತು. 20 ದಿನಗಳ ನಂತರವೂ ಮಂಕಿಪಾಕ್ಸ್ ಟೆಸ್ಟ್ ಪಾಸಿಟಿವ್ ಬರುತ್ತಲೇ ಇತ್ತು. ಚಿಕಿತ್ಸೆಯ ಬಳಿಕ ಹಲವು ದಿನಗಳವರೆಗೂ ಸೋಂಕು ಹಾಗೇ ಇರಬಹುದು ಎಂದು ವೈದ್ಯರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ವ್ಯಕ್ತಿ 2019ರಲ್ಲಿ ಸಿಫಿಲಿಸ್‍ಗೆ ಚಿಕಿತ್ಸೆ ಪಡೆದಿದ್ದ. ಬೈಪೋಲಾರ್ ಡಿಸಾರ್ಡರ್‌ನಿಂದ ಬಳಲುತ್ತಿದ್ದ. 2011ರಲ್ಲಿ ಕೋವಿಡ್-19 ಲಸಿಕೆಯ ಎರಡು ಡೋಸ್ ಪಡೆದಿದ್ದ. ಆದರೆ ಜನವರಿ 2022ರಲ್ಲಿ ಆತನಿಗೆ ಕೊರೊನಾ ಸೋಂಕು ತಗುಲಿತ್ತು. ಆಸ್ಪತ್ರೆಗೆ ದಾಖಲಾದ ನಂತರ ವೈರಲ್ ಹೆಪಟೈಟಿಸ್, ಹರ್ಷಿಸ್ ಸಿಂಪ್ಲೆಕ್ಸ್, ಗೊನೊರಿಯಾ, ಕ್ಲಮೈಡಿಯ ಮತ್ತು ಲಿಂಫೋಗ್ರಾನುಲೋಮಾ ವೆನೆರಿಯಮ್(ಎಲ್‍ಜಿವಿ)ಗಾಗಿ ನಡೆಸಲಾದ ಸೆರಾಲಜಿ ಪರೀಕ್ಷೆಗಳು ನೆಗೆಟಿವ್ ಬಂದಿದೆ. ಹೆಚ್‍ಐವಿ ಪರೀಕ್ಷೆ ಮಾತ್ರ ಪಾಸಿಟಿವ್ ಬಂದಿದೆ. ಒಂದೇ ಬಾರಿಗೆ ಮೂರು ಸೋಂಕುಗಳು ವ್ಯಕ್ತಿಯಲ್ಲಿ ಕಾಣಿಸಿಕೊಂಡಿರುವುದರಿಂದ ಇದೀಗ ಅವರನ್ನು ತೀವ್ರ ನಿಗಾದಲ್ಲಿ ಇರಿಸಲಾಗಿದೆ. ಇದನ್ನೂ ಓದಿ: ಶಿವಮೊಗ್ಗ SDPI ಕಚೇರಿ ಮೇಲೆ ಪೊಲೀಸರ ದಾಳಿ – ಮಹತ್ವದ ದಾಖಲೆ ವಶಕ್ಕೆ
ಇತ್ತೀಚೆಗೆ ಅತೀ ಬೇಗ ಹರಡುತ್ತಿರುವ ಸೋಂಕು ಮಂಕಿಪಾಕ್ಸ್ ಆಗಿದೆ. ಚರ್ಮದ ಗಾಯ, ವೈರಸ್‍ನಿಂದ ಕಲುಷಿತಗೊಂಡ ವಸ್ತುಗಳು, ಸೆಮಿನಲ್ ದ್ರವಗಳು ಮತ್ತು ಗಂಟಲಿನ ಸ್ರವಿಸುವಿಕೆ, ಸಾಂಗ್ರಾಮಿಕ ವಸ್ತುಗಳೊಂದಿಗೆ ನಿಕಟ ಸಂಪರ್ಕದಿಂದ ಮಂಕಿಪಾಕ್ಸ್ ಹರಡುತ್ತದೆ. ಅದರಲ್ಲಿಯೂ ಸಂಭೋಗ ನಡೆಸುವುದರಿಂದ ಮಂಕಿಪಾಕ್ಸ್ ಅತೀ ವೇಗವಾಗಿ ಹರಡುವ ಸಾಧ್ಯತೆ ಇದೆ.