ರೋಮ್: ಭಾರತದಲ್ಲಿ ಜನಸಂಖ್ಯಾ ನಿಯಂತ್ರಣಕ್ಕೆ ಸರ್ಕಾರವೇ ಪ್ರಚಾರ ನಡೆಸುತ್ತಿದ್ದರೆ ಇಟಲಿ ಸರ್ಕಾರ ಮೂರನೇ ಮಗುವನ್ನು ಹೊಂದಿರುವ ದಂಪತಿಗೆ ಉಡುಗೊರೆಯನ್ನು ನೀಡಲು ಮುಂದಾಗಿದೆ.
2019 ರಿಂದ 2021 ರ ನಡುವೆ ಮೂರನೇ ಮಗುವನ್ನು ಹೊಂದಿರುವ ದಂಪತಿ 20 ವರ್ಷಗಳ ಕಾಲ ಕೃಷಿ ಮಾಡುವುದಕ್ಕಾಗಿ ಉಚಿತ ಭೂಮಿಯನ್ನು ನೀಡಲಾಗುತ್ತದೆ. ಜೊತೆಗೆ 2 ಲಕ್ಷದ ವರೆಗೆ ಬಡ್ಡಿ ಇಲ್ಲದೇ ಸಾಲವನ್ನು ಕೂಡ ನೀಡಲಾಗುತ್ತದೆ ಎಂದು ಸರ್ಕಾರ ಹೇಳಿದೆ.
ಈ ಯೋಜನೆಯು ವಿವಾಹಿತ ದಂಪತಿಗೆ ಮಾತ್ರ ಅನ್ವಯವಾಗಿದ್ದು, ಅವಿವಾಹಿತ ಪುರುಷ ಮಹಿಳೆಯರಿಗೆ ಅನ್ವಯಿಸುವುದಿಲ್ಲ. ಸಲಿಂಗ ಮದುವೆಗಳು ಇಟಲಿಯಲ್ಲಿ ಇನ್ನೂ ಕಂಡುಬಂದಿಲ್ಲ. ಹೀಗಾಗಿ ಇದು ವಿವಾಹಿತ ಪುರುಷ ಮಹಿಳೆಯರಿಗೆ ಮಾತ್ರ ಈ ಯೋಜನೆ ಪರಿಗಣಿಸಲಾಗುವುದು. ಈ ಯೋಜನೆ ಪಡೆಯಲು ಬಯಸುವ ವಿದೇಶಿ ದಂಪತಿ ಕನಿಷ್ಠ 10 ವರ್ಷಗಳ ಕಾಲ ದೇಶದಲ್ಲಿ ವಾಸಿಸಬೇಕೆಂಬ ನಿಯಮವನ್ನು ವಿಧಿಸಲಾಗಿದೆ.
ಕಳೆದ ವರ್ಷ ಇಟಲಿಯಲ್ಲಿ 4.64 ಲಕ್ಷ ಮಕ್ಕಳ ಜನನವಾಗಿತ್ತು. ಇಡಿ ಯುರೋಪ್ ನಲ್ಲಿ ಅತಿ ಕಡಿಮೆ ಸಂಖ್ಯೆಯಲ್ಲಿ ಮಕ್ಕಳ ಜನನವಾದ ಹಿನ್ನೆಲೆಯಲ್ಲಿ ಮುಂದೆ ಆಗಬಹುದಾದ ಸಮಸ್ಯೆಯನ್ನು ತಡೆಗಟ್ಟಲು ಇಟಲಿ ಸರ್ಕಾರ ದಂಪತಿಗೆ ಈ ಆಫರ್ ನೀಡಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv