ರೋಮ್: ದುಷ್ಕರ್ಮಿಗಳಿಂದ ಹೈಜಾಕ್ (Hijack) ಆಗಿದ್ದ ಟರ್ಕಿಶ್ ಹಡಗನ್ನು (Turkish Ship) ಇಟಾಲಿಯನ್ ವಿಶೇಷ ಸೇನಾ ಪಡೆ (Italian Forces) ನಿಯಂತ್ರಣಕ್ಕೆ ಪಡೆದಿದೆ.
ಅಕ್ರಮ ವಲಸಿಗರು ಹಡಗನ್ನು ಹೈಜಾಕ್ ಮಾಡಿದ್ದು, ಹಡಗನ್ನು ನಿಯಂತ್ರಣಕ್ಕೆ ಪಡೆಯಲಾಗಿದೆ. ಕಾರ್ಯಾಚರಣೆ ಇನ್ನೂ ನಡೆಯುತ್ತಿದೆ. ಹಡಗಿನಲ್ಲಿ 22 ಸಿಬ್ಬಂದಿಯಿದ್ದು, ಅವರ ಸುರಕ್ಷತೆಯ ವಿಚಾರವನ್ನು ಶೀಘ್ರದಲ್ಲೇ ದೃಢಪಡಿಸಲಾಗುವುದು ಎಂದು ಇಟಲಿಯ (Italy) ರಕ್ಷಣಾ ಸಚಿವ ಗೈಡೊ ಕ್ರೊಸೆಟ್ಟೊ ತಿಳಿಸಿದ್ದಾರೆ.
Advertisement
The Italian special forces free the Turkish ship hijacked in Capri by illegal immigrants armed with knives. Well done! pic.twitter.com/FoMEZhg5Sn
— RadioGenova (@RadioGenova) June 9, 2023
Advertisement
ವಾಹನಗಳನ್ನು ಸಾಗಿಸುವ ಮತ್ತು ನೌಕಾಯಾನದ ಹಡಗು ಜೂನ್ 7 ರಂದು ಟರ್ಕಿಯ (Turkey) ಟೊಪ್ಯುಲರ್‌ನಿಂದ ಹೊರಟು ದಕ್ಷಿಣ ಫ್ರಾನ್ಸ್‍ನ ಸೆಟೆಗೆ ಹೊರಟಿತ್ತು. ಅದನ್ನು ಅಕ್ರಮ ವಲಸಿಗರು ಅಪಹರಿಸಿದ್ದರು. ಶೀಘ್ರದಲ್ಲೇ ದುಷ್ಕರ್ಮಿಗಳಿಂದ ಹಡಗನ್ನು ವಶಕ್ಕೆ ಪಡೆಯಲಾಗುವುದು ಎಂದು ಅವರು ತಿಳಿಸಿದ್ದಾರೆ.
Advertisement
Advertisement
ಹಡಗನ್ನು ಮುಕ್ತಗೊಳಿಸಲು ಇಟಾಲಿಯನ್ ವಿಶೇಷ ಪಡೆಗಳು ನಡೆಸುತ್ತಿರುವ ಕಾರ್ಯಾಚರಣೆಯ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.