ಮಡಿಕೇರಿ: ಡಿಕೆ ಶಿವಕುಮಾರ್ (DK Shivakumar) ಅವರು ತಮ್ಮ ವಸ್ತುಗಳು ಏನೇ ಇದ್ರೂ ಅಫಿಡವಿಟ್‌ನಲ್ಲಿ ತೋರಿಸಿದ್ರೆ ಯಾವುದೇ ಸಮಸ್ಯೆ ಆಗಲ್ಲ. ಈ ಹಿಂದೆ ಸಿದ್ದರಾಮಯ್ಯ ಅವರ ವಾಚ್ ವಿಚಾರ ಬಂದಾಗ, ಯಾರೋ ಗಿಫ್ಟ್ ಆಗಿ ಕೊಟ್ಟಿದ್ರು ಅಂತ ಹೇಳಿದ್ರು, ರಾಜಕಾರಣಿಗಳಾಗಿ ಇಂತಹ ದುಬಾರಿ ಗಿಫ್ಟ್ ತಗೊಳ್ಳೋದು ತಪ್ಪು ಅಂತ ಸಂಸದ ಯದುವೀರ್ ಒಡೆಯರ್ (Yaduveer Wadiyar) ಹೇಳಿದ್ದಾರೆ.
ಮಡಿಕೇರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಡಿಸಿಎಂ ಡಿಕೆಶಿ ಕಾರ್ಟಿಯರ್ ವಾಚ್ (Cartier Watch) ವಿಚಾರಕ್ಕೆ ಪ್ರತಿಕ್ರಿಯಿಸಿದರು. ಡಿಕೆ ಶಿವಕುಮಾರ್ ಅವರು ತಮ್ಮ ವಸ್ತುಗಳು ಏನೇ ಇದ್ದರೂ, ಚುನಾವಣಾ ಸಮಯದಲ್ಲಿ ಅಫಿಡವಿಟ್‌ನಲ್ಲಿ ಡಿಕ್ಲೇರ್ ಮಾಡಬೇಕಿತ್ತು. ಹಾಗೇ ಮಾಡಿದ್ದರೆ ಸಮಸ್ಯೆ ಆಗುವುದಿಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ: ನನ್ನ ಶ್ರಮ, ನನ್ನ ಸಂಪಾದನೆ, ನನಗಿಷ್ಟವಾದ ವಾಚ್, ಶೂ ಧರಿಸ್ತೀನಿ: ಡಿಕೆಶಿ ಪಂಚ್

ಅಲ್ಲದೇ ಈ ಹಿಂದೆ ಸಿದ್ದರಾಮಯ್ಯ ಅವರ ವಾಚ್ ವಿಚಾರ ಬಂದಾಗ ಅವರು ತನಗೆ ಯಾರೋ ಗಿಫ್ಟ್ ಅಗಿ ಕೊಟ್ಟಿದ್ದು ಅಂತ ಹೇಳಿದ್ರು. ರಾಜಕಾರಣಿಗಳಾಗಿ, ಮುಖ್ಯಮಂತ್ರಿಗಳಾಗಿ ಇಂತಹ ಗಿಫ್ಟ್‌ಗಳನ್ನ ತೆಗೆದುಕೊಳ್ಳೋದು ತಪ್ಪಾಗುತ್ತದೆ. ಸಾಮಾನ್ಯವಾಗಿ ಗಿಫ್ಟ್ ಕೊಟ್ಟರೆ ಏನೋ ಕೆಲಸಕ್ಕಾಗಿಯೇ ಕೊಟ್ಟಿದ್ದಾರೆ ಅನ್ನೋ ಭಾವನೆ ಬರುತ್ತೆ. ಹೀಗಾಗಿ ನಾವು ಚುನಾಬಣೆ ಸಂದರ್ಭದಲ್ಲಿ ಎಲ್ಲಾ ವಸ್ತುಗಳ ಬಗ್ಗೆ ಡಿಕ್ಲೇರ್ ಮಾಡೋದು ಒಳ್ಳೆಯದು ಎಂದಿದ್ದಾರೆ. ಇದನ್ನೂ ಓದಿ: RCB ಫ್ಯಾನ್ಸ್‌ಗೆ ಗುಡ್‌ನ್ಯೂಸ್ ಕೊಟ್ಟ ಡಿಕೆಶಿ – 2026ರ IPL ಬೆಂಗಳೂರಿನಲ್ಲೇ ಫಿಕ್ಸ್: ಖುದ್ದು ಡಿಸಿಎಂ ಘೋಷಣೆ
ಇದೇ ವೇಳೆ ಪಿರಿಯಾಪಟ್ಟಣ-ಕುಶಾಲನಗರ ಚತುಷ್ಫತ ರಸ್ತೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಇನ್ನೋಂದು ವಾರದಲ್ಲಿ ರಸ್ತೆ ಕಾಮಗಾರಿಗೆ ಚಾಲನೆ ಸಿಗಲಿದೆ. ಈಗಾಗಲೇ 4 ಪ್ಯಾಕೇಜ್‌ಗಳಲ್ಲಿ ಮೈಸೂರು-ಕೊಡಗು ಚತುಷ್ಪಥ ರಸ್ತೆ ಕಾಮಗಾರಿ ಆರಂಭಗೊಂಡಿದೆ. ಇದೀಗ ಪಿರಿಯಾಪಟ್ಟಣದಿಂದ ಕುಶಾಲನಗರದವರೆಗೆ 22 ಕಿಮೀ ರಸ್ತೆ ಕಾಮಗಾರಿ ನಡೆಸಲು ಅನುಮತಿ ಸಿಕ್ಕಿದೆ ಎಂದು ತಿಳಿಸಿದರು. ಇದನ್ನೂ ಓದಿ: ಶಕ್ತಿ ಯೋಜನೆ ಎಫೆಕ್ಟ್ – 10 ಕೋಟಿಗೂ ಹೆಚ್ಚು ಬೀದರ್ ನಾರಿಯರ ಪ್ರವಾಸ, ಐತಿಹಾಸಿಕ ತಾಣಗಳಿಗೆ ದಾಖಲೆಯ ಭೇಟಿ

