ನವದೆಹಲಿ: ದೇಶದಲ್ಲಿ ಎಚ್‍ಐವಿ ಪ್ರಕರಣಗಳು ಹೆಚ್ಚಾಗಲಿದೆ ಎಂದು ಹೇಳುವ ಮೂಲಕ ಬಿಜೆಪಿ ರಾಜ್ಯಸಭಾ ಸದಸ್ಯ ಸುಬ್ರಮಣಿಯನ್ ಸ್ವಾಮಿ ಸಲಿಂಗಕಾಮ ತೀರ್ಪಿನ ಬಗ್ಗೆ ತಮ್ಮದೇ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ಸಲಿಂಗಕಾಮ ಅಪರಾಧವಲ್ಲ ಎನ್ನುವ ಸುಪ್ರೀಂ ನೀಡಿದ ಐತಿಹಾಸಿಕ ತೀರ್ಪಿಗೆ ಪ್ರತಿಕ್ರಿಯಿಸಿದ ಅವರು, ಸುಪ್ರೀಂ ನೀಡಿರುವ ತೀರ್ಪು ಅಂತಿಮವಲ್ಲ. ತೀರ್ಪನ್ನು ಪ್ರಶ್ನಿಸಿ 7 ಮಂದಿ ನ್ಯಾಯಾಧೀಶರ ಪೀಠದಲ್ಲಿ ಮೇಲ್ಮನವಿ ಸಲ್ಲಿಸಲು ಸಾರ್ವಜನಿಕರಿಗೆ ಅವಕಾಶವಿದೆ. ಆದರೆ ಈ ತೀರ್ಪಿನಿಂದ ದೇಶದಲ್ಲಿ ಲೈಂಗಿಕ ಆರೋಗ್ಯಕ್ಕೆ ಸಂಬಂಧಿಸಿದ ರೋಗಗಳ ಪ್ರಮಾಣ ಹೆಚ್ಚಳವಾಗುವ ಸಾಧ್ಯತೆ ಎಂದರು.
Advertisement
It is the American game. Soon there will be gay bars here where homosexuals can go. HIV will spread. So, after looking at the consequences I hope the next Govt will move a 7 judge bench to set aside this 5 judge bench order: Subramanian Swamy,BJP MP on #Section377 pic.twitter.com/htFxVXUlXz
— ANI (@ANI) September 6, 2018
Advertisement
ಸಲಿಂಗಕಾಮ ಎನ್ನುವುದು ಅನುವಂಶೀಯ ಅಸ್ವಸ್ಥತೆ. ಹೀಗಾಗಿ ಈ ವ್ಯಕ್ತಿತ್ವ ಹೊಂದಿರುವವರನ್ನು ಸಾಮಾನ್ಯ ಲೈಂಗಿಕ ವರ್ತನೆ ಹೊಂದಿರುವ ವ್ಯಕ್ತಿಗಳ ಜೊತೆ ಹೋಲಿಕೆ ಮಾಡಲು ಬರುವುದಿಲ್ಲ. ಈ ಕುರಿತು ವೈದ್ಯಕೀಯ ಕ್ಷೇತ್ರದಲ್ಲಿ ಹೆಚ್ಚಿನ ಸಂಶೋಧನೆ ನಡೆಯಬೇಕಿದೆ. ಅಮೆರಿಕ ದೇಶದಲ್ಲಿರುವ ಸಂಸ್ಕೃತಿ ನಮ್ಮ ದೇಶದಲ್ಲೂ ಹೆಚ್ಚಾಗುವ ಸಂಭವವಿದ್ದು ಇದರ ಹಿಂದೆ ಸಾಕಷ್ಟು ಹಣದಸ ಹರಿವು ಇದೆ. ಇನ್ನು ಮುಂದೆ ಸಲಿಂಗಕಾಮದ ಬಾರ್ ಗಳು ಆರಂಭವಾಗಬಹುದು. ಇದು ದೇಶದ ಭದ್ರತೆಗೆ ಮಾರಕವಾಗಬಹುದು ಎಂದು ಅಭಿಪ್ರಾಯಪಟ್ಟರು.
Advertisement
#Section377 in Supreme Court: LGBT Community has same rights as of any ordinary citizen. Respect for each others rights, and others are supreme humanity. Criminalising gay sex is irrational and indefensible, observes CJI Dipak Misra. https://t.co/05ADSuh5cv
— ANI (@ANI) September 6, 2018
Advertisement
ಪೊಲೀಸರಿಗೆ ಬೆಡ್ ರೂಂ ಪ್ರವೇಶಿಸಲು ಯಾವುದೇ ಹಕ್ಕು ಇಲ್ಲ. ನನಗೆ ಗೊತ್ತಿದೆ ಹಲವರು ನ್ಯಾಯಾಧೀಶರು ಸಲಿಂಗಕಾಮಿಗಳಾಗಿದ್ದಾರೆ. ಅಷ್ಟೇ ಅಲ್ಲದೇ ಭವಿಷ್ಯದಲ್ಲಿ ಶಿಶುಕಾಮಿಗಳ ಸಂಖ್ಯೆ ಹೆಚ್ಚಾಗಬಹುದು ಎಂದು ಆತಂಕ ವ್ಯಕ್ತಪಡಿಸಿದರು.
ತೀರ್ಪಿಗೂ ಮುನ್ನ ಪ್ರತಿಕ್ರಿಯೆ ನೀಡಿದ್ದ ಆರ್ ಎಸ್‍ಎಸ್ ವಕ್ತಾರೊಬ್ಬರು, ಸಂಲಿಗಕಾಮ ನೈಸಗಿಕವಾಗಿದ್ದರೂ ಅಥವಾ ನಿಸರ್ಗಕ್ಕೆ ವಿರೋಧವಾಗಿದ್ದರೂ ಇಂತಹ ಬೆಳವಣಿಗೆಗೆ ನಾವು ಬೆಂಬಲ ನೀಡುವುದಿಲ್ಲ. ಆದರೆ ಇದನ್ನು ಅಪರಾಧ ಎಂದು ಪರಿಗಣಿಸುವುದಿಲ್ಲ. ಇಂತಹ ಪದ್ಧತಿಗಳಿಗೆ ಭಾರತ ಸಂಸ್ಕೃತಿಯಲ್ಲಿ ಅವಕಾಶವಿಲ್ಲ ಎಂದು ತಿಳಿಸಿದ್ದರು.
ಕಾಂಗ್ರೆಸ್ ಸಂಸದ ಶಶಿ ತರೂರ್ ಪ್ರತಿಕ್ರಿಯೆ ನೀಡಿ, ಸರ್ಕಾರಕ್ಕೆ ಮಲಗುವ ಕೋಣೆಗಳಲ್ಲಿ ಅವಕಾಶವಿಲ್ಲ. ಸುಪ್ರೀಂ ತೀರ್ಪು `ಸ್ವಾತಂತ್ರ್ಯ ಮುಂಜಾನೆ’ ಎಂದು ತಿಳಿಸಿದ್ದಾರೆ. ಇದನ್ನು ಓದಿ: ಭಾರತದಲ್ಲಿ ಸಲಿಂಗಕಾಮ ಅಪರಾಧವಲ್ಲ: 156 ವರ್ಷದ ಬ್ರಿಟಿಷ್ ಕಾನೂನು ರದ್ದು
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
Celebrations in Lucknow after Supreme Court legalised homosexuality. #Section377 pic.twitter.com/RZc51sM9Rl
— ANI UP/Uttarakhand (@ANINewsUP) September 6, 2018
#WATCH People in Mumbai celebrate after Supreme Court decriminalises #Section377 and legalises homosexuality pic.twitter.com/ztI67QwfsT
— ANI (@ANI) September 6, 2018