ಮೈಕಲ್‌ನಿಂದ ಮದುವೆ ಪ್ರಪೋಸಲ್- ಇಶಾನಿ ತಂದೆ ಹೇಳಿದ್ದೇನು?

Public TV
1 Min Read
eshani

ಬಿಗ್ ಬಾಸ್ ಮನೆಯಲ್ಲಿ (Bigg Boss Kannada) ಇಶಾನಿ- ಮೈಕಲ್, ಜೋಡಿಯಾಗಿ ಹೈಲೆಟ್ ಆಗ್ತಿದ್ದಾರೆ. ಇಬ್ಬರ ನಡುವೆ ಸಮ್‌ಥಿಂಗ್ ಸಮ್‌ಥಿಂಗ್ ಶುರುವಾಗಿದೆ. ಇದರ ಬಗ್ಗೆ ಇಶಾನಿ (Eshani) ತಂದೆ ಕೂಡ ಪ್ರತಿಕ್ರಿಯೆ ನೀಡಿದ್ದಾರೆ. ಮೈಕಲ್ ಕಡೆಯಿಂದ ಮದುವೆ ಪ್ರಪೋಸಲ್ ಬಂದರೆ ಇಶಾನಿ ತಂದೆ ಶೇಖರ್ (Shekar) ಏನ್ಮಾಡ್ತಾರೆ ಎಂಬುದಕ್ಕೆ ಉತ್ತರಿಸಿದ್ದಾರೆ.

eshani 1

ಬಿಗ್ ಬಾಸ್ ಶೋ ನಂತರ ಮೈಕಲ್ (Michael) ಮನೆಯಿಂದ ಪ್ರಪೋಸಲ್ ಬಂದರೆ, ನಾನು ನನ್ನ ಮಗಳಿಗೆ ಬುದ್ಧಿ ಹೇಳ್ತೀನಿ ಎಂದಿದ್ದಾರೆ. ಮೈಕಲ್‌ನ ಒಪ್ಪಿಕೊಳ್ಳೋಕೆ ಕಷ್ಟ ಆಗುತ್ತೆ. ನನ್ನ ಮಗಳಿಗೆ ನಾನು ಏನು ಹೇಳಬೇಕೋ ಅದನ್ನ ನಾನು ಹೇಳೇ ಹೇಳ್ತೀನಿ. ಮದುವೆ ಅಂದರೆ ಇವತ್ತು ಇದ್ದು, ನಾಳೆ ಬಿಡೋದಲ್ಲ. ಸ್ಟ್ರಾಂಗ್ ರಿಲೇಷನ್‌ಶಿಪ್ ಅದು. ಹಾಗಾಗಿ ಮೈಕಲ್ ವಿಚಾರವಾಗಿ ಮಗಳಿಗೆ ಬುದ್ಧಿ ಹೇಳ್ತೀನಿ ಎಂದಿದ್ದಾರೆ. ಈ ಮೂಲಕ ಮೈಕಲ್‌ ಕಡೆಯಿಂದ ಮದುವೆ ಪ್ರಪೋಸಲ್‌ ಬಂದರೆ, ತಮ್ಮ ಕಡೆಯಿಂದ ನೋ ಎಂಬ ಉತ್ತರವಿರುತ್ತದೆ ಎಂದು ಹೇಳಿದ್ದಾರೆ.

ನನ್ನ ಮಗಳಿಗೆ ಗಂಡ ಆಗುವ ಹುಡುಗ, ಒಳ್ಳೆಯ ಮನುಷ್ಯನಾಗಿರಬೇಕು. ಲುಕ್ಸ್‌ನಲ್ಲೂ ಚೆನ್ನಾಗಿರಬೇಕು. ಲವ್ವಿಂಗ್ & ಕೇರಿಂಗ್ ವ್ಯಕ್ತಿಯಾಗಿರಬೇಕು ಎಂದು ಮನೆಗೆ ಅಳಿಯನಾಗುವರ ಬಗ್ಗೆ ಇಶಾನಿ ತಂದೆ ಮಾತನಾಡಿದ್ದಾರೆ. ಇದನ್ನೂ ಓದಿ:‘ಜಿಗರ್’ ಚಿತ್ರದಲ್ಲಿ ಪ್ರವೀಣ್ ತೇಜ್ ಮಾಸ್: ಟೀಸರ್ ರಿಲೀಸ್‌

ಇಶಾನಿ ದೊಡ್ಮನೆಗೆ ಎಂಟ್ರಿ ಕೊಟ್ಟಾಗ ಮೊದಲು ಸ್ನೇಹಿತ್‌ ಜೊತೆ ಲವ್‌ ಕಹಾನಿ ಶುರುವಾಗಿತ್ತು. ಈಗ ಮೈಕಲ್‌ ಜೊತೆ ಲವ್ವಿ-ಡವ್ವಿ ಶುರುವಾಗಿದೆ. ಬಿಗ್‌ ಬಾಸ್‌ ಆಟ ಮುಗಿಯೋದರೊಳಗೆ ಇಬ್ಬರ ಕಹಾನಿಗೆ ಕ್ಲ್ಯಾರಿಟಿ ಸಿಗುತ್ತಾ? ಕಾದುನೋಡಬೇಕಿದೆ.

[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

Share This Article