ನವದೆಹಲಿ: ಅಯ್ಯೋ ಸಾರ್ ಭಯವಾಗುತ್ತಿದೆ, ಮಾತು ಎತ್ತಿದರೆ ಇಡಿ ಅಧಿಕಾರಿಗಳು ತಿಹಾರ್ ಜೈಲು ಅಂತಾರೇ. ಈ ರಾಜಕೀಯನೂ ಬೇಡ, ಚುನಾವಣೆನೂ ಬೇಡ, ನನಗೆ ಚಿಕ್ಕ ಮಕ್ಕಳಿದ್ದಾರೆ. ಈ ಸಂಕಷ್ಟಗಳಿಂದ ಆಚೆ ಬಂದರೇ ಸಾಕು ಎಂದು ಯೂಸುಫ್ ಷರಿಫ್ ಅಲಿಯಾಸ್ ಕೆಜಿಎಫ್ ಬಾಬು ಆತಂಕ ವ್ಯಕ್ತಪಡಿಸಿದ್ದಾರೆ.
ಎರಡು ದಿನಗಳ ಇಡಿ ವಿಚಾರಣೆ ಬಳಿಕ ನವದೆಹಲಿಗೆ ಆಗಮಿಸಿದ ಅವರು, ಪ್ರಕರಣ ಸಂಬಂಧ ವಕೀಲರನ್ನು ಸಂಪರ್ಕ ಮಾಡಿದ್ದಾರೆ. ಇಡಿ ದಾಳಿ ವೇಳೆ ಜಪ್ತಿ ಮಾಡಿದ್ದ ನಾಲ್ಕು ಕೆಜಿ ಚಿನ್ನವನ್ನು ವಾಪಸ್ ಪಡೆಯಲು ಪ್ರಯತ್ನ ಮಾಡುತ್ತಿದ್ದಾರೆ. ಅಲ್ಲದೇ ಪ್ರಕರಣದ ಮುಂದಿನ ಹಂತಗಳ ಬಗ್ಗೆ ಕಾನೂನು ಸಲಹೆ ಪಡೆಯುತ್ತಿದ್ದಾರೆ. ಇದನ್ನೂ ಓದಿ: ರಾಜ್ಯಸಭಾ ಚುನಾವಣೆಯ ಬಳಿಕ MVA ಸರ್ಕಾರಕ್ಕೆ ಮತ್ತೆ ಶಾಕ್ – ಬಿಜೆಪಿಯ ಐವರು ಆಯ್ಕೆ
Advertisement
Advertisement
ವಕೀಲರ ಭೇಟಿಗೂ ಮುನ್ನ ಮಾತನಾಡಿದ ಕೆಜಿಎಫ್ ಬಾಬು, ಎಂಎಲ್‍ಸಿ ಚುನಾವಣೆ ನಿಂತಿದ್ದೆ ತಪ್ಪಾಯಿತು, ರಾಜಕೀಯವಾಗಿ ಗುರಿ ಮಾಡಲಾಗುತ್ತಿದೆ. ನನ್ನದು ಎಲ್ಲ ವೈಟ್ ಬ್ಯುಸಿನೆಸ್ 1,740 ಕೋಟಿ ಆಸ್ತಿ ಘೋಷಣೆ ಮಾಡಿದ್ದೇನೆ. ಅದಕ್ಕೆ ಸರಿಯಾಗಿ ಟ್ಯಾಕ್ಸ್ ಕಟ್ಟುತ್ತಿದ್ದೇನೆ, ಲೀಗಲ್ ವ್ಯವಹಾರ ಮಾಡಿದರೂ ಇಡಿ ಬಿಡುತ್ತಿಲ್ಲ ಎಂದಿದ್ದಾರೆ. ಇದನ್ನೂ ಓದಿ: ಅಂತರಾಷ್ಟ್ರೀಯ ಯೋಗ ದಿನ: ನಾಡಿನ ಜನತೆಗೆ ಯೋಗದ ಪ್ರಾಮುಖ್ಯತೆ ಸಾರಿದ ಗಣ್ಯರು
Advertisement
Advertisement
ಐಟಿ, ಸಿಸಿಬಿ, ಇಡಿ ಒಬ್ಬರಾದ ಮೇಲೆ ಒಬ್ಬರು ದಾಳಿ ಮಾಡುತ್ತಿದ್ದಾರೆ. ನನ್ನದು ನಾಲ್ಕು ಕೆಜಿ ಚಿನ್ನವನ್ನು ಸೀಜ್ ಮಾಡಿದ್ದಾರೆ. ಅದನ್ನು ಬಿಡಿಸಿಕೊಳ್ಳಲು ಬಂದಿದ್ದೇನೆ. ವಕೀಲರನ್ನು ಸಂಪರ್ಕಿಸಿ ನ್ಯಾಯಾಲಯದ ಮೂಲಕ ಚಿನ್ನ ವಾಪಸ್ ಪಡೆಯಲು ಪ್ರಯತ್ನ ಮಾಡುತ್ತಿದ್ದೇನೆ ಎಂದು ಹೇಳಿದ್ದಾರೆ.