ಕೋಟ್ಯಂತರ ಅಭಿಮಾನಿಗಳ ಆರಾಧ್ಯದೈವ ರಜನಿಕಾಂತ್ (Rajinikanth) ತಮ್ಮ ಖಾಸಗಿ ಜೀವನದ ಹಲವು ಸಂಗತಿಗಳನ್ನು ಬಿಚ್ಚಿಟ್ಟಿದ್ದಾರೆ. ತಾವು ಅತಿಯಾಗಿ ಮದ್ಯ (alcohol), ಮಾಂಸ ಮತ್ತು ಸಿಗರೇಟ್ (cigarettes) ಸೇದುತ್ತಿರುವ ಕುರಿತು ಅವರು ಮಾತನಾಡಿದ್ದು, ಒಂದು ರೀತಿಯಲ್ಲಿ ಅವರು ದುಶ್ಚಟಗಳಿಗೆ ದಾಸರೇ ಆಗಿದ್ದರಂತೆ. ಅಲ್ಲಿಂದ ಆಚೆ ತಂದದ್ದು ತಮ್ಮ ಪತ್ನಿ ಎಂದು ಅವರು ಹೇಳಿಕೊಂಡಿದ್ದಾರೆ. ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ರಜನಿ, ತಮ್ಮ ಬದುಕಿನಲ್ಲಿ ಪತ್ನಿಯು ಹೇಗೆ ದಾರಿ ದೀವಿಗೆ ಆದಳು ಎನ್ನುವುದನ್ನು ಹಂಚಿಕೊಂಡಿದ್ದಾರೆ.
Advertisement
‘ನಾನು ವಿಪರೀತ ಮಾಂಸ ತಿನ್ನುತ್ತಿದೆ. ದಿನಕ್ಕೆ ಎರಡು ಹೊತ್ತಾದರೂ ಮಾಂಸ ಬೇಕಿತ್ತು. ಮದ್ಯ ಸೇವಿಸುತ್ತಿದ್ದೆ. ಸಿಗರೇಟು ಸೇದುತ್ತಿದ್ದೆ. ಯಾವುದೂ ನನ್ನ ಕಂಟ್ರೋಲ್ ನಲ್ಲಿ ಇರಲಿಲ್ಲ. ಮದುವೆ ನಂತರದ ದಿನಗಳಲ್ಲಿ ಅವುಗಳನ್ನು ಕಡಿಮೆ ಮಾಡಿಸಿದ್ದು ಮತ್ತು ಸಂಪೂರ್ಣ ಬಿಡುವಂತೆ ಮಾಡಿದ್ದು ನನ್ನ ಪತ್ನಿ. ಅವರಿಂದಾಗಿಯೇ ನಾನು ಆ ಚಟಗಳಿಂದ ದೂರವಾದೆ. ಸದ್ಯ ನಾನು ಆರೋಗ್ಯವಾಗಿದ್ದೀನಿ ಎಂದರೆ ಅದಕ್ಕೆ ಕಾರಣ ಅವರೆ’ ಎಂದು ಮೆಚ್ಚಿ ಮಾತನಾಡಿದ್ದಾರೆ ರಜನಿ. ಇದನ್ನೂ ಓದಿ: ಸಿದ್ಧಾರ್ಥ್ ಮಲ್ಹೋತ್ರಾ ಜೊತೆ ರಶ್ಮಿಕಾ ಮಂದಣ್ಣ ಪಾರ್ಟಿ
Advertisement
Advertisement
ಪತ್ನಿ ಲತಾ ರಂಗಚಾರ್ಯ (Lata Rajinikanth) ಅವರನ್ನು ತಮಗೆ ಪರಿಚಯಿಸಿದ ವೈ.ಜಿ ಮಹೇಂದ್ರನ್ ಅವರಿಗೆ ಕೃತಜ್ಞತೆ ಸಲ್ಲಿಸಿದ ರಜನಿ, ‘ಇಂತಹ ಹುಡುಗಿಯನ್ನು ಅವರು ಪರಿಚಯಿಸದೇ ಇದ್ದರೆ ನನ್ನ ಬದುಕು ಯಾವ ರೀತಿಯಲ್ಲಿ ಇರುತ್ತಿತ್ತೋ ಗೊತ್ತಿಲ್ಲ. ಇವತ್ತು ನಾನು ನೆಮ್ಮದಿಯಾಗಿ ಇದ್ದೇನೆ ಎನ್ನುವುದಕ್ಕೆ ಲತಾ ಕಾರಣ. ನನ್ನ ಬದುಕನ್ನು ಬಲು ಶಿಸ್ತಿನಿಂದ ರೂಪಿಸಿದಳು. ಈ ಕಾರಣಕ್ಕಾಗಿ ನಾನು ಅವರನ್ನು ಯಾವತ್ತೂ ನೆನಪಿಸಿಕೊಳ್ಳುವೆ’ ಎಂದು ಭಾವನಾತ್ಮಕವಾಗಿ ಸಮಾರಂಭದಲ್ಲಿ ಮಾತನಾಡಿದ್ದಾರೆ ರಜನಿಕಾಂತ್.
Advertisement
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k