ನವದೆಹಲಿ: ಇನ್ನೇನು ಕೆಲವು ದಿನಗಳಲ್ಲಿ ಲೋಕಸಭಾ ಚುನಾವಣೆ ನಡೆಯಲಿದೆ. ಈ ಬೆನ್ನಲ್ಲೇ ಚುನಾವಣಾ ಆಯುಕ್ತ ಅರುಣ್ ಗೋಯೆಲ್ (Arun Goel) ಅವರು ದಿಢೀರ್ ರಾಜೀನಾಮೆ ನೀಡಿ ಅಚ್ಚರಿ ಮೂಡಿಸಿದರು. ಇವರ ರಾಜೀನಾಮೆಯನ್ನು ರಾಷ್ಟ್ರಪತಿಗಳು ಕೂಡ ಅಂಗೀಕರಿಸಿದ್ದಾರೆ.
ಗೋಯೆಲ್ ಅವರು ರಾಜೀನಾಮೆ ನೀಡುವುದಕ್ಕೂ ಮೊದಲು ಎಂದಿನಂತೆ ತನ್ನ ಕೆಲಸದಲ್ಲಿ ತೊಡಗಿದ್ದರು. ಮಾರ್ಚ್ 7 ರಂದು ಚುನಾವಣಾ ಆಯೋಗದ ನಿರ್ವಚನ ಸದನ್ ಕಚೇರಿಯಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಸಭೆಯೊಂದನ್ನು ಆಯೋಜಿಸಿತ್ತು. ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ನೇತೃತ್ವದ EC ಮತ್ತು ಅಂತರರಾಷ್ಟ್ರೀಯ ಮಾಧ್ಯಮದ ಸದಸ್ಯರ ನಡುವಿನ ಸಂವಾದದಲ್ಲಿ ಗೋಯೆಲ್ ಭಾಗವಹಿಸಿದ್ದರು.
Advertisement
ಇದಕ್ಕೂ ಮುನ್ನ, ಮಾರ್ಚ್ 4 ಮತ್ತು 5 ರಂದು, ಕುಮಾರ್ ಮತ್ತು ಗೋಯೆಲ್ ಅವರು ಚುನಾವಣಾ ಸಿದ್ಧತೆಯನ್ನು ನಿರ್ಣಯಿಸಲು ವಿವಿಧ ರಾಜ್ಯ/ಕೇಂದ್ರಾಡಳಿತ ಪ್ರದೇಶಗಳಿಗೆ ಚುನಾವಣಾ ಪೂರ್ವ ಚುನಾವಣಾ ಆಯೋಗದ ಸಾಂಪ್ರದಾಯಿಕ ಭೇಟಿಗಳ ಭಾಗವಾಗಿ ಪಶ್ಚಿಮ ಬಂಗಾಳಕ್ಕೆ ಭೇಟಿ ಕೊಟ್ಟಿದ್ರು. ಈ ಸಂದರ್ಭದಲ್ಲಿ ಅವರು ಆರೋಗ್ಯದಲ್ಲಿ ಸ್ವಲ್ಪ ವ್ಯತ್ಯಾಸವಾಗಿತ್ತು. ಆದರೂ ಅವರು ಮಾರ್ಚ್ 4 ರ ರಾತ್ರಿ 8 ಗಂಟೆಯವರೆಗೆ ನಡೆದ ಎಲ್ಲಾ ಸಭೆಗಳಲ್ಲಿಯೂ ಭಾಗವಹಿಸಿದ್ದರು. ಇದನ್ನೂ ಓದಿ: ಲೋಕಸಭಾ ಚುನಾವಣೆ ಮುನ್ನವೇ ಕೇಂದ್ರ ಚುನಾವಣಾ ಆಯುಕ್ತ ಅರುಣ್ ಗೋಯಲ್ ರಾಜೀನಾಮೆ
Advertisement
Advertisement
ಮೂಲಗಳ ಪ್ರಕಾರ, ಮಾರ್ಚ್ 5 ರ ಬೆಳಗ್ಗೆ ಚುನಾವಣಾ ಆಯೋಗದ ಸದಸ್ಯರು ತಂಗಿದ್ದ ಕೋಲ್ಕತ್ತಾದ ಒಬೆರಾಯ್ ಗ್ರ್ಯಾಂಡ್ ಹೋಟೆಲ್‌ನಲ್ಲಿ ವೈದ್ಯರನ್ನು ಭೇಟಿ ಮಾಡಿಸಲಾಯಿತು. ಕೂಡಲೇ ಅವರಿಗೆ ಚಿಕಿತ್ಸೆಯನ್ನು ಆರಂಭಿಸಲಾಯಿತು. ಆದರೆ ಅವರ ಆರೋಗ್ಯದಲ್ಲಿ ಸುಧಾರಣೆ ಕಂಡುಬರದಿದ್ದರಿಂದ ಮಾರ್ಚ್ 5 ರಂದು ಮಧ್ಯಾಹ್ನ 12 ಗಂಟೆಗೆ ಕೋಲ್ಕತ್ತಾದಲ್ಲಿ ನಡೆದ ಪತ್ರಿಕಾಗೋಷ್ಠಿಗೆ ಗೈರಾಗಿದ್ದರು. ಸುದ್ದಿಗೋಷ್ಠಿಯೊಂದಿಗೆ ಬಂಗಾಳ ಭೇಟಿಯನ್ನು ಮುಕ್ತಾಯಗೊಳಿಸಿದ ನಂತರ ಗೋಯೆಲ್ ಅದೇ ವಿಮಾನದಲ್ಲಿ ಅಧಿಕಾರಿಗಳೊಂದಿಗೆ ದೆಹಲಿಗೆ ಹಿಂದಿರುಗಿದರು. ಮಾರ್ಚ್ 5 ರಂದು 3.25 ಕ್ಕೆ ವಿಸ್ತಾರಾ ವಿಮಾನ ಕೋಲ್ಕತ್ತಾದಿಂದ ಹೊರಟಿತು. ಮಾರ್ಚ್ 6 ರಂದು ಗೋಯೆಲ್ ನಿರ್ವಚನ ಸದನ್‌ನಲ್ಲಿ ಕಚೇರಿಗೆ ಹಾಜರಾಗಿದ್ದರು.
Advertisement
ಮಾರ್ಚ್ 7 ರಂದು ಸಿಇಸಿ ಕುಮಾರ್ ಜೊತೆಗೆ ಗೋಯೆಲ್ ಅವರು ವಿದೇಶಿ ಮಾಧ್ಯಮಗಳೊಂದಿಗೆ ಚುನಾವಣಾ ಆಯೋಗದ ಸಂವಾದದ ಭಾಗವಾಗಿದ್ದರು. ರಾಯಿಟರ್ಸ್, ದಿ ನ್ಯೂಯಾರ್ಕ್ ಟೈಮ್ಸ್, ಅಸೋಸಿಯೇಟೆಡ್ ಪ್ರೆಸ್, ಬ್ಲೂಮ್‌ಬರ್ಗ್ ನ್ಯೂಸ್, ಬಿಬಿಸಿ, ನಿಕ್ಕಿ, ಡಾಯ್ಚ್ ವೆಲ್ಲೆ, ಫ್ರಾನ್ಸ್ 24 ಮತ್ತು ಆಸ್ಟ್ರೇಲಿಯನ್ ಬ್ರಾಡ್‌ಕಾಸ್ಟಿಂಗ್ ಕಾರ್ಪೊರೇಷನ್ ಮುಂತಾದ ಅಂತರರಾಷ್ಟ್ರೀಯ ಮಾಧ್ಯಮ ಸಂಸ್ಥೆಗಳನ್ನು ಪ್ರತಿನಿಧಿಸುವ ಸುಮಾರು 27 ಪತ್ರಕರ್ತರು ಮತದಾನಕ್ಕೆ ಸಂಬಂಧಿಸಿದ ವಿಷಯಗಳ ಕುರಿತು ಪ್ರಶ್ನೆಗಳನ್ನು ಕೇಳಿದರು.
ಮಾರ್ಚ್ 8 ರಂದು ಕಚೇರಿಯಿಂದ ದೂರ ಉಳಿದ ಗೋಯೆಲ್ ಅವರು ತಮ್ಮ ರಾಜೀನಾಮೆಯನ್ನು ರಾಷ್ಟ್ರಪತಿಗೆ ಕಳುಹಿಸಿದರು. ರಾಜೀನಾಮೆ ಪತ್ರದ ಪ್ರತಿಯನ್ನು ಸಿಇಸಿ ಹಂಚಿಕೊಂಡಿಲ್ಲ. ಮಾರ್ಚ್ 9 ರಂದು ರಾಷ್ಟ್ರಪತಿಯವರು ಗೋಯೆಲ್ ಅವರ ರಾಜೀನಾಮೆಯನ್ನು ಅಂಗೀಕರಿಸಿದರು.