ಬೆಂಗಳೂರು: ಏಪ್ರಿಲ್ 16ರಂದು ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ಆಟೋ ಡ್ರೈವರ್ ಮನೆ ಮೇಲೆ ದಾಳಿ ನಡೆಸಿದ್ದರು. ಸುಮಾರು 4 ತಾಸುಗಳ ಕಾಲ ದಾಳಿಯನ್ನ ಮಾಡಿದ್ದ ಬಳಿಕ ಸ್ಫೋಟಕ ಮಾಹಿತಿ ಬೆಳಕಿಗೆ ಬಂದಿದೆ.
ವೈಟ್ ಫೀಲ್ಡ್ ನಿವಾಸಿ ಸುಬ್ರಮಣಿ ಮನೆಯ ಮೇಲೆ ಐಟಿ ದಾಳಿ ನಡೆದಿತ್ತು. ಈ ವೇಳೆ ಈತ ವಿದೇಶಿ ಮೂಲದ ಮಹಿಳೆಗೆ ಬೇನಾಮಿಯಾಗಿದ್ದನು ಎಂಬುದು ಸ್ಪಷ್ಟವಾಗಿದೆ. ವಿದೇಶಿ ಮಹಿಳೆಯೊಬ್ಬರಿಗೆ ಸುಬ್ರಮಣಿ ಬೇನಾಮಿಯಾಗಿದ್ದಾರೆ ಎಂದು ಐಟಿ ಇಲಾಖೆಗೆ ದೂರು ಹೋಗಿತ್ತು. ಈ ಹಿನ್ನೆಲೆಯಲ್ಲಿ ಸುಬ್ರಮಣಿ ವಿಲ್ಲಾ ಖರೀದಿ ಕುರಿತು ಅಧಿಕಾರಿಗಳು ಐಟಿ ಕಾಯ್ದೆ 21(1) ಅಡಿ ಮಾಹಿತಿ ಕೇಳಿದ್ದರು. ಅದಕ್ಕೆ ಸುಬ್ರಮಣಿ ಸರಿಯಾದ ದಾಖಲೆ ನೀಡಿದ್ದಾರೆ ಎಂದು ಪಬ್ಲಿಕ್ ಟಿವಿಗೆ ಐಟಿ ಇಲಾಖೆಯ ಮೂಲಗಳಿಂದ ಮಾಹಿತಿ ತಿಳಿದು ಬಂದಿದೆ.
Advertisement
Advertisement
ವಿದೇಶಿ ಮಹಿಳೆ:
ಆಟೋ ಚಾಲಕ ಸುಬ್ರಮಣಿಗೆ ವಿದೇಶಿ ಮೂಲದ ಮಹಿಳೆಯ ಪರಿಚಯವಾಗಿತ್ತು. ಇತ್ತ ವಿದೇಶಿ ಮಹಿಳೆ ಭಾರತದಲ್ಲಿ ಆಸ್ತಿ ಖರೀದಿ ಮಾಡುವ ಉದ್ದೇಶವನ್ನು ಹೊಂದಿದ್ದರು. ಆಗ ಈತ ನನಗೆ ರಾಜಕೀಯ ನಾಯಕರು ಪರಿಚಯ ಇದ್ದಾರೆ. ನನ್ನ ಮೇಲೆ ಐಟಿ ಅಧಿಕಾರಿ ದಾಳಿ ಮಾಡಲ್ಲ ಎಂದು ಮಹಿಳೆಗೆ ನಂಬಿಸಿರಬಹುದು ಎಂದು ಅನುಮಾನು ವ್ಯಕ್ತವಾಗಿದೆ. ನಂತರ ಮಹಿಳೆ ಆಟೋ ಚಾಲಕನ ಹೆಸರಿನಲ್ಲಿ ಆಸ್ತಿ ಖರೀದಿ ಮಾಡಿದ್ದಾಳೆ. ವಿದೇಶದಿಂದ ಆಕೆ ಬ್ಯಾಂಕ್ ಮೂಲಕ ಹಣ ವರ್ಗಾವಣೆ ಮಾಡಿದ್ದಾಳೆ ಎಂದು ತಿಳಿದು ಬಂದಿದೆ. ಮಹಿಳೆ ಕಳುಹಿಸಿದ ಹಣದಿಂದ ಸುಬ್ರಮಣಿ ವಿಲ್ಲಾ ಖರೀದಿ ಮಾಡಿದ್ದಾನೆ ಎಂದು ತನಿಖೆಯಲ್ಲಿ ತಿಳಿದು ಬಂದಿದೆ.
Advertisement
Advertisement
ಐಟಿ ದಾಳಿ:
ಸುಬ್ರಮಣಿ ಲಕ್ಸುರಿ ವಿಲ್ಲಾ ಮೇಲೆ ರೇಡ್ ಮಾಡಿರುವ ಅಧಿಕಾರಿಗಳು ಮಹತ್ವದ ದಾಖಲೆಗಳನ್ನ ವಶಕ್ಕೆ ಪಡೆದು ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಕೋಟ್ಯಂತರ ರೂ. ಮೌಲ್ಯದ ಆಸ್ತಿ ಪತ್ರ, ದಾಖಲೆಗಳು ಲಭ್ಯವಾಗಿವೆ. ಸದ್ಯ ಈ ಆಸ್ತಿಗಳ ವಿವರ ಒಟ್ಟು 1 ಕೋಟಿ 60 ಲಕ್ಷ ಎಂದು ಅಂದಾಜಿಸಲಾಗಿದೆ. ಇನ್ನೂ ಈ ಖತರ್ನಾಕ್ ಸುಬ್ರಮಣಿ ಎಂಎಲ್‍ಎ ಅರವಿಂದ್ ಲಿಂಬಾಳಿಯ ಆಪ್ತ ಎನ್ನಲಾಗಿತ್ತು. ಅದಕ್ಕೆ ಪೂರಕ ಎಂಬಂತೆ ಈತ ಅವರ ಜೊತೆ ಇರುವ ಫೋಟೋಗಳು ಹರಿದಾಡುತ್ತಿವೆ.
ಆಟೋ ಡ್ರೈವರ್ ಗೂ ನನಗೂ ಸಂಬಂಧವಿಲ್ಲ. ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ನನ್ನ ಜೊತೆ ಫೋಟೋ ತೆಗೆಸಿಕೊಂಡಿರುವುದು ಬಿಟ್ಟರೆ ಅವರು ನಮ್ಮ ಕಾರ್ಯಕರ್ತರಲ್ಲ ಎಂದು ಬಿಜೆಪಿ ಶಾಸಕ ಅರವಿಂದ್ ಲಿಂಬಾವಳಿ ಸ್ಪಷ್ಟಪಡಿಸಿದ್ದಾರೆ.
ದಾಳಿ ಬಳಿಕ ಸುಬ್ರಮಣಿಗೆ ಐಟಿ ಅಧಿಕಾರಿಗಳು ನೋಟಿಸ್ ನೀಡಿ ವಿಚಾರಣೆಗೆ ಹಾಜರಾಗುವಂತೆ ತಿಳಿಸಿದ್ದಾರೆ. ಸಿಕ್ಕಿರುವ ದಾಖಲೆಗಳಿಗೆ ಉತ್ತರ ನೀಡುವಂತೆ ಸೂಚಿಸಿದ್ದಾರೆ.