ಬಾಗಲಕೋಟೆ: ಮತದಾನಕ್ಕೆ ಇರೋದು ಕೇವಲ ನಾಲ್ಕು ದಿನ ಮಾತ್ರ. ಈ ಹಂತದಲ್ಲಿ ಕಾಂಗ್ರೆಸ್‍ಗೆ ಮತ್ತೊಮ್ಮೆ ಬಿಗ್ ಶಾಕ್ ನೀಡಿದೆ ಐಟಿ ಇಲಾಖೆ.
ಹೈವೋಲ್ಟೇಜ್ ಕಣ ಬದಾಮಿಯಲ್ಲಿ ಕಾಂಗ್ರೆಸ್ ನಾಯಕರು ಉಳಿದುಕೊಂಡಿದ್ದ ರೆಸಾರ್ಟ್ ಮೇಲೆ ರಾತ್ರೋರಾತ್ರಿ ಐಟಿ ಅಧಿಕಾರಿಗಳು ದಾಳಿ ಮಾಡಿದ್ದಾರೆ.
Advertisement
Advertisement
ಬದಾಮಿ ಹೊರವಲಯದಲ್ಲಿರುವ ಶಾಸಕ ಆನಂದ್‍ಸಿಂಗ್‍ಗೆ ಸೇರಿದ ಕೃಷ್ಣ ಹೆರಿಟೇಜ್ ರೆಸಾರ್ಟ್ ಮೇಲೆ ರಾತ್ರಿ 11ರ ಸುಮಾರಿಗೆ 10ಕ್ಕೂ ಹೆಚ್ಚು ಐಟಿ ಅಧಿಕಾರಿಗಳ ತಂಡ ಲಗ್ಗೆ ಹಾಕಿದೆ. ದಾಖಲೆಗಳ ಪರಿಶೀಲನೆ ನಡೆಸಿದೆ. ದಾಳಿ ವೇಳೆ ಸಿಎಂ ಸಿದ್ದರಾಮಯ್ಯ ಆಪ್ತ ಸಿಎಂ ಇಬ್ರಾಹಿಂ ಕೂಡ ಇದ್ರು. ಆದ್ರೆ ನಸುಕಿನಜಾವ 2 ಗಂಟೆಗೆ ಸಿಎಂ ಇಬ್ರಾಹಿಂ ರೆಸಾರ್ಟ್‍ನಿಂದ ಹೊರಬಂದ್ದಿದ್ದರು.
Advertisement
Advertisement
ಬಳಿಕ ಮಾತನಾಡಿದ ಅವರು, `ಈ ರೆಸಾರ್ಟ್‍ನಲ್ಲಿ ನಾನು ವಾಸ್ತವ್ಯ ಹೂಡಿರಲಿಲ್ಲ. ಊಟಕ್ಕೆಂದು ಈ ರೆಸಾರ್ಟ್‍ಗೆ ಬಂದಿದ್ದೆ. ನಾನು ಎಸ್.ಆರ್ ಪಾಟೀಲ್ ಇಬ್ಬರು ಊಟಕ್ಕೆಂದು ಬಂದಿದ್ವಿ ಅಷ್ಟೇ. ಐಟಿ ಅಧಿಕಾರಿಗಳು ತಪಾಸಣೆ ನಡೆಸುತ್ತಿದ್ದಾರೆ. ಆದ್ರೆ ನನ್ನನ್ನು ಏನೂ ಪ್ರಶ್ನೆ ಮಾಡಲಿಲ್ಲ. ಒಳಗಡೆ ಏನ್ ಸಿಗುತ್ತೆ ಅಲ್ಲಿ. ಏನೂ ಇಲ್ಲ. ಐಟಿ ಅಧಿಕಾರಿಗಳು ಸುಮ್ಮನೆ ಕೂತಿದ್ದಾರೆ’ ಅಂದ್ರು.
ಸದ್ಯ ರೆಸಾರ್ಟ್‍ನಲ್ಲಿ ಶೋಧ ಕಾರ್ಯ ಮುಂದುವರೆದಿದೆ. ರೆಸಾರ್ಟ್‍ಗೆ ಸಿಆರ್‍ಪಿಎಫ್ ಹಾಗೂ ಬದಾಮಿ ಪೊಲೀಸರು ಭದ್ರತೆ ಒದಗಿಸಿದ್ದಾರೆ. ಈ ಬೆಳವಣಿಗೆಯಿಂದಾಗಿ ಬದಾಮಿ ಕಾಂಗ್ರೆಸ್‍ನಲ್ಲಿ ತಳಮಳ ಉಂಟಾಗಿದೆ.