ಬೆಳಗಾವಿ: ಮೈನಿಂಗ್ ಉದ್ಯಮಿ (Mining Entrepreneur) ಮನೆ ಹಾಗೂ ಕಚೇರಿ ಮೇಲೆ ಮಧ್ಯರಾತ್ರಿ ಐಟಿ ಅಧಿಕಾರಿಗಳು (T Raid) ದಾಳಿ ನಡೆಸಿದ ಘಟನೆ ಬೆಳಗಾವಿಯಲ್ಲಿ (Belagavi) ನಡೆದಿದೆ.
ವಿನೋದ್ ದೊಡ್ಡಣ್ಣವರ್, ಪುರುಷೋತ್ತಮ ದೊಡ್ಡಣ್ಣವರ್ ಒಡೆತನದ ಕಂಪನಿಗಳ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ದೊಡ್ಡಣ್ಣವರ್ ಬ್ರದರ್ಸ್ ಮೈನಿಂಗ್ ಮತ್ತು ಸಕ್ಕರೆ ಕಾರ್ಖಾನೆ ಉದ್ಯಮಿಗಳಾಗಿದ್ದಾರೆ. ಒಟ್ಟು ಐದು ತಂಡಗಳಿಂದ ಮೂರು ಕಡೆಗಳಲ್ಲಿ ಏಕಕಾಲಕ್ಕೆ ದಾಳಿ ನಡೆಸಲಾಗಿದೆ. ಇದನ್ನೂ ಓದಿ: ಇಂದು ಸ್ವಗ್ರಾಮಕ್ಕೆ ಬಿಗ್ ಬಾಸ್ ವಿನ್ನರ್ ಹನುಮಂತ – ಅದ್ಧೂರಿ ಸ್ವಾಗತಕ್ಕೆ ಸ್ನೇಹಿತರು, ಗ್ರಾಮಸ್ಥರ ಸಿದ್ಧತೆ
ಗೋವಾದಿಂದ ಆಗಮಿಸಿರುವ ಐಟಿ ಅಧಿಕಾರಿಗಳ ತಂಡ ಭಾಗ್ಯನಗರದ ನಿವಾಸ, ಉದ್ಯಮಭಾಗದಲ್ಲಿರುವ ಕಚೇರಿ ಮೇಲೆ ದಾಳಿ ನಡೆಸಿದ್ದು, ದಾಖಲೆ ಪರಿಶೀಲನೆ ನಡೆಸಲಾಗುತ್ತಿದೆ. ಇದನ್ನೂ ಓದಿ: ವಿವಾಹೇತರ ಸಂಬಂಧಕ್ಕೆ ಡೇಟಿಂಗ್ ಆಪ್ ಬಳಕೆ – ದೇಶದಲ್ಲೇ ಬೆಂಗಳೂರು ನಂ.1