– 20ಕ್ಕೂ ಹೆಚ್ಚು ಅಧಿಕಾರಿಗಳಿಂದ ರೇಡ್, ಪರಿಶೀಲನೆ
ಆನೇಕಲ್: ಶನಿವಾರ ಬೆಳ್ಳಂಬೆಳಗ್ಗೆ ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಬೊಮ್ಮಸಂದ್ರ ಕೈಗಾರಿಕಾ ಸಂಘದ (Industrial Association) ಅಧ್ಯಕ್ಷರ ಮನೆ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ (IT Raid) ನಡೆದಿದೆ.
20ಕ್ಕೂ ಹೆಚ್ಚು ಅಧಿಕಾರಿಗಳು ಬೊಮ್ಮಸಂದ್ರ ಪುರಸಭಾ ಸದಸ್ಯರಾಗಿರುವ ಎ. ಪ್ರಸಾದ್ ಹಾಗೂ ಸಹೋದರ ಛಲಪ್ರಸಾದ್ ಅವಳಿ ಸಹೋದರರ ಮನೆ ಮೇಲೆ ಏಕಕಾಲದಲ್ಲಿ ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಧಮ್ ಇದ್ರೆ ನನ್ ಬಗ್ಗೆ ಒಂದು ಮಾತಾಡಲಿ; ಮನೆಗೆ ನುಗ್ತೀನಿ – ಬಿಜೆಪಿ ಸಚಿವರೊಬ್ಬರ ವಿರುದ್ಧ ನಾಲಿಗೆ ಹರಿಬಿಟ್ಟ ಜಮೀರ್
ಎ. ಪ್ರಸಾದ್ ಅವರ ಬೊಮ್ಮಸಂದ್ರ ನಿವಾಸ, ಸಹೋದರ ಛಲಪ್ರಸಾದ್ ಅವರ ಆರ್ಎಸ್ ಗಾರ್ಡೇನಿಯ ನಿವಾಸ, ಬೊಮ್ಮಸಂದ್ರ ಕೈಗಾರಿಕಾ ಸಂಘದ ಕಚೇರಿ ಹಾಗೂ ಕಂಪನಿ ಮೇಲೆ ದಾಳಿ ಮಾಡಿದ್ದಾರೆ. ಇದನ್ನೂ ಓದಿ: Exclusive- ಸುದೀಪ್ ಮುಂದಿನ ಸಿನಿಮಾ ‘ಬಿಲ್ಲ ರಂಗ ಬಾಷಾ’: ಜೂನ್ 1 ರಿಂದ ಶೂಟಿಂಗ್
ಬೊಮ್ಮಸಂದ್ರದಲ್ಲಿ ಪ್ರಭಾವಿ ನಾಯಕರಾಗಿರುವ ಎ.ಪ್ರಸಾದ್ ಹಾಗೂ ಛಲಪ್ರಸಾದ್ ಬಿಜೆಪಿಯಿಂದ (BJP) ಬೊಮ್ಮಸಂದ್ರ ಪುರಸಭೆಗೆ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು.