ನವದೆಹಲಿ: ಆದಾಯ ತೆರಿಗೆ ಅಧಿಕಾರಿಗಳು ತೆರಿಗೆ ವಂಚನೆ ತನಿಖೆಯ ಭಾಗವಾಗಿ ಮಂಗಳವಾರ ದೇಶದ ಹಲವೆಡೆ ಚೀನಾದ ಹುವಾವೇ ಕಂಪನಿಯ ಬ್ರ್ಯಾಚ್‌ಗಳ ಮೇಲೆ ದಾಳಿ ನಡೆಸಿವೆ.
ಚೀನಾದ ಟೆಲಿಕಾಂ ಕಂಪನಿ ಹುವಾವೇಯ ಭಾರತೀಯ ಶಾಖೆಗಳಲ್ಲಿ ಐಟಿ ದಾಳಿ ನಡೆದಿವೆ. ದೆಹಲಿ, ಗುರುಗ್ರಾಮ(ಹರ್ಯಾಣ) ಹಾಗೂ ಬೆಂಗಳೂರಿನ ಹುವಾವೇ ಕಂಪನಿ ಆವರಣಗಳಲ್ಲಿ ದಾಳಿ ನಡೆದಿದೆ ಎಂದು ಬುಧವಾರ ವರದಿಗಳು ತಿಳಿಸಿವೆ.
Advertisement
ನಮ್ಮ ಕಚೇರಿಗೆ ಆದಾಯ ತೆರಿಗೆ ತಂಡ ಭೇಟಿ ನೀಡಿರುವುದಾಗಿ ಮಾಹಿತಿ ದೊರಕಿದೆ. ಭಾರತದಲ್ಲಿ ನಮ್ಮ ಕಾರ್ಯಾಚರಣೆಗಳು ಎಲ್ಲಾ ಕಾನೂನು ಹಾಗೂ ನಿಬಂಧನೆಗಳನ್ನು ಅನುಸರಿಸುತ್ತಿವೆ ಎಂಬ ವಿಶ್ವಾಸವಿದೆ. ಹೆಚ್ಚಿನ ಮಾಹಿತಿಗಾಗಿ ನಾವು ಸರ್ಕಾರಿ ಇಲಾಖೆಗಳನ್ನು ಸಂಪರ್ಕಿಸುತ್ತೇವೆ. ನಿಯಮ ನಿಬಂಧನೆಗಳಿಗೆ ನಾವು ಸಂಪೂರ್ಣ ಸಹಕಾರ ನೀಡುತ್ತೇವೆ ಎಂದು ಕಂಪನಿ ತಿಳಿಸಿದೆ. ಇದನ್ನೂ ಓದಿ: ಫೇಸ್‌ಬುಕ್ ಉದ್ಯೋಗಿಗಳು ಇನ್ನು ಮುಂದೆ ಮೆಟಾಮೇಟ್ಸ್: ಜುಕರ್‌ಬರ್ಗ್
Advertisement
Advertisement
ಕಳೆದ ವರ್ಷ ಚೀನಾದ ಮೊಬೈಲ್ ಸಂವಹನ ಹಾಗೂ ಹ್ಯಾಂಡ್‌ಸೆಟ್ ತಯಾರಿಕಾ ಕಂಪನಿಗಳಾದ ಕ್ಸಿಯೋಮಿ, ಓಪ್ಪೋ ಹಾಗೂ ಆ ಕಂಪನಿಗೆ ಸಂಬಂಧ ಪಟ್ಟವರ ವ್ಯಕ್ತಿಗಳ ಮೇಲೆ ಐಟಿ ಇಲಾಖೆ ದಾಳಿ ನಡೆಸಿತ್ತು. ದಾಳಿಯಲ್ಲಿ 6,500 ಕೋಟಿ ರೂ. ಮೌಲ್ಯದ ದಾಖಲೆಗಳಿಲ್ಲದ ಆದಾಯವನ್ನು ಪತ್ತೆ ಹಚ್ಚಿತ್ತು. ಇದನ್ನೂ ಓದಿ: ವಾಟ್ಸಪ್‌ಗೂ ಬರಲಿದೆ ಫೇಸ್‌ಬುಕ್‌ನಂತಹ ಕವರ್ ಫೋಟೋ ಫೀಚರ್
Advertisement
ಈ ವಾರದ ಆರಂಭದಲ್ಲಿ ಮಾಹಿತಿ ಹಾಗೂ ತಂತ್ರಜ್ಞಾನ ಸಚಿವಾಲಯ ಚೀನಾ ಮೂಲದ 54 ಆಪ್ಲಿಕೇಶನ್‌ಗಳನ್ನು ನಿರ್ಬಂಧಿಸಿದೆ.