ಬೆಂಗಳೂರು: ಬಿಬಿಎಂಪಿ ಗುತ್ತಿಗಾರರ (BBMP Contractor) ಸಂಘದ ಅಧ್ಯಕ್ಷ ಆರ್. ಅಂಬಿಕಾಪತಿ (R. Ambikapathy) ಮನೆಯಲ್ಲಿ ಆದಾಯ ತೆರಿಗೆ ಅಧಿಕಾರಿಗಳು ಇಂದು (ಶನಿವಾರ) ಕೂಡ ಪರಿಶೀಲನೆ ಮುಂದುವರಿಸಿದ್ದಾರೆ.
42 ಕೋಟಿ ಎಣಿಸುತ್ತಾ ಕುಳಿತಿರೋ ಐಟಿ ಅಧಿಕಾರಿಗಳ ಎಕ್ಸ್ ಕ್ಲೂಸೀವ್ ಫೋಟೋ ಇಂದು ಪಬ್ಲಿಕ್ ಟಿವಿಗೆ ಲಭ್ಯವಾಗಿದೆ. ಫೋಟೋದಲ್ಲಿ ವಿಚಾರಣೆ ನಡೆಸಿದ ಬಳಿಕ ಐಟಿ ಅಧಿಕಾರಿಗಳು ಹಣ ಎಣಿಸುತ್ತಾ ಕುಳಿತ್ತಿರುವುದನ್ನು ಕಾಣಬಹುದಾಗಿದೆ.
Advertisement
Advertisement
ಲಾಕರ್ ಒಡೆದಿದ್ದ ಐಟಿ: ನಿನ್ನೆಯಿಂದ ಅಧಿಕಾರಿಗಳು ಅಂಬಿಕಾಪತಿಯವರ ಮಾನ್ಯತಾ ಟೆಕ್ ಪಾರ್ಕ್ ನಿವಾಸದಲ್ಲಿ ತಲಾಶ್ ನಡೆಸುತ್ತಿದ್ದಾರೆ. ಅಂತೆಯೇ ಮನೆಯಲ್ಲಿಯೇ ಬೀಡು ಬಿಟ್ಟಿರೋ ಮೂವರು ಐಟಿ ಅಧಿಕಾರಿಗಳು (Income Tax Officers), ಕಾರ್ಪೆಂಟರ್ ಕರೆತಂದು ಲಾಕರ್ ಒಡೆದಿದ್ದರು. ಈ ವೇಳೆ ಲಾಕರ್ ನಲ್ಲಿ ಎರಡು ಸೂಟ್ ಕೇಸ್ ನಷ್ಟು ನಗದು ಹಣ, ಅಪಾರ ಮೌಲ್ಯದ ಚಿನ್ನಾಭರಣ, ಕಾಮಗಾರಿಗೆ ಸಂಬಂಧಪಟ್ಟ ದಾಖಲೆಗಳು ಹಾಗೂ ಪ್ರಾಪರ್ಟಿ ದಾಖಲೆಗಳು ಕೂಡ ಪತ್ತೆಯಾಗಿವೆ. ಇದನ್ನೂ ಓದಿ: ಒಕ್ಕಲಿಗ ಸಮುದಾಯದ ವಿರುದ್ಧ ಅವಹೇಳನಕಾರಿ ಹೇಳಿಕೆ – ಪ್ರೊ. ಭಗವಾನ್ ಮನೆಗೆ ಮುತ್ತಿಗೆಗೆ ಯತ್ನ
Advertisement
Advertisement
ನೋಟಿಸ್ ಸಾಧ್ಯತೆ: ಕೋಟಿ ಕೋಟಿ ಹಣ ಸೀಜ್ ಪ್ರಕರಣ ಸಂಬಂಧ ಸೋಮವಾರ ವಿಚಾರಣೆಗೆ ಹಾಜರಾಗಲು ಅಂಬಿಕಾಪತಿ ಕುಟುಂಬಕ್ಕೆ ನೊಟೀಸ್ ನೀಡುವ ಸಾಧ್ಯತೆ ಇದೆ. ಶುಕ್ರವಾರ ಅಪಾರ್ಟ್‍ಮೆಂಟ್ ನಲ್ಲಿ ಪತ್ತೆಯಾಗಿರುವ ಬರೋಬ್ಬರಿ 42 ಕೋಟಿ ಹಣವನ್ನು ಐಟಿ ಬ್ಯಾಂಕ್‍ಗೆ ಡಿಪಾಸಿಟ್ ಮಾಡಿದೆ. ದಾಳಿ ಮುಕ್ತಾಯದ ಬಳಿಕ ಸೋಮವಾರ ವಿಚಾರಣೆಗೆ ಹಾಜರಾಗಲು ನೋಟಿಸ್ ನೀಡುವ ಸಾಧ್ಯತೆಗಳಿವೆ. ಹಣಕ್ಕೆ ಸಂಬಂಧಿಸಿದಂತೆ ಸೂಕ್ತ ದಾಖಲೆಗಳೊಂದಿಗೆ ಹಾಜರಾಗಲು ತಿಳಿಸುವ ಸಂಭವವಿದೆ.
ಅಧಿಕಾರಿಗಳಿಗೆ ಚಾಲೆಂಜ್: ನಿನ್ನೆಯಿಂದ ಅಂಬಿಕಾಪತಿ ಮನೆಯಲ್ಲಿ ಐಟಿ ಅಧಿಕಾರಿಗಳು ಶೋಧ ನಡೆಸುತ್ತಿದ್ದು, ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ. ದಾಖಲೆಗಳ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ. ಹಣದ ಬಗ್ಗೆ ಮಾಹಿತಿ ಕಲೆ ಹಾಕೋದು ಐಟಿ ಅಧಿಕಾರಿಗಳಿಗೆ ಸವಾಲಾಗಿದೆ. ಹಣದ ಬಗ್ಗೆ ಅಂಬಿಕಾಪತಿ ಯಾವುದೇ ಸ್ಪಷ್ಟವಾದ ಮಾಹಿತಿ ನೀಡದೇ ಇರೋದ್ರಿಂದ ಮೂಲ ಪತ್ತೆಯೇ ಚಾಲೆಂಜ್ ಆಗಿದೆ. ಹಣ ಎಲ್ಲಿಂದ ಬಂದಿದೆ? ಯಾರು ತಂದು ಕೊಟ್ರು ಎನ್ನುವ ಬಗ್ಗೆಯೂ ಪ್ರಶ್ನೆ ಎದ್ದಿದೆ. ಮನೆಯಲ್ಲಿ ಸಿಕ್ಕಿರುವ ಎಲ್ಲಾ ಚಿನ್ನಾಭರಣದ ಮೌಲ್ಯಮಾಪನ ಮಾಡಲಾಗುತ್ತಿದೆ. ಅಂಬಿಕಾಪತಿ ಸಂಬಂಧಿಯ ಬಗ್ಗೆಯೂ ಅಧಿಕಾರಿಗಳು ಮಾಹಿತಿ ಕಲೆ ಹಾಕುತ್ತಿದ್ದಾರೆ.
ಪಿತೃಪಕ್ಷ: ಒಂದೆಡೆ ಐಟಿ ಅಧಿಕಾರಿಗಳಿಂದ ವಿಚಾರಣೆ ನಡೆಸುತ್ತಿದ್ದರೆ, ಇನ್ನೊಂದೆಡೆ ಅಂಬಿಕಾಪತಿ ಮನೆಯಲ್ಲಿ ಪಿತೃಪಕ್ಷ ಕಾರ್ಯ ನಡೆಸಲಾಗುತ್ತಿದೆ. ಹಬ್ಬಕ್ಕೆ ಮನೆಯ ಮುಂದೆ ತೋರಣ ಕಟ್ಟಿ ಪೂಜೆಗೆ ಕುಟುಂಬಸ್ಥರು ಸಿದ್ಧತೆ ನಡೆಸುತ್ತಿದ್ದಾರೆ. ಮತ್ತೊಂದು ಕಡೆ ಅದ್ದೂರಿ ಪೂಜೆ-ಪುನಸ್ಕಾರ ನಡೆಯುತ್ತಿದೆ.
Web Stories