ಬೆಂಗಳೂರು: ಚುನಾವಣಾ ಹೊತ್ತಲ್ಲಿಯೇ ಮೊದಲ ಹಂತದ ಮತದಾನ ನಡೆಯುವ ಸುಮಾರು 6 ಜಿಲ್ಲೆಗಳಲ್ಲಿ ನಡೆದ ಐಟಿ ರೇಡ್ ಅಂತ್ಯವಾಗಿದೆ.
ಹಾಸನ, ಮಂಡ್ಯ, ಶಿವಮೊಗ್ಗ, ಮೈಸೂರು, ಕನಕಪುರ, ಚಿಕ್ಕಮಗಳೂರಿನಲ್ಲಿ ತಲಾಶ್ ನಡೆದಿತ್ತು. ದಾಳಿ ನಡೆಸಿ ಹೋಗುವಾಗ ಅಧಿಕಾರಿಗಳು ‘ತಪ್ಪಾಯ್ತು’ ಎಂದು ಗುತ್ತಿಗೆದಾರರೊಬ್ಬರ ಬಳಿ ಕ್ಷಮೆಯಾಚಿಸಿದ್ದಾರೆ ಎನ್ನಲಾಗಿದೆ.
Advertisement
Advertisement
ಗುರುವಾರ ರಾತ್ರಿಯೇ ತಲಾಶ್ ಮುಗಿಸಿ ಐಟಿ ಅಧಿಕಾರಿಗಳು ಹೊರಟಿದ್ದಾರೆ. ಐಟಿ ತಂಡ ದಾಳಿ ನಡೆಸಿದ ಕಡೆಗಳಲ್ಲಿ ಬ್ಯಾಗ್‍ಗಳಲ್ಲಿ ದಾಖಲೆ ಹೊತ್ತುಕೊಂಡು ಹೋಗಿದ್ದಾರೆ. ಸಚಿವ ರೇವಣ್ಣ ಆಪ್ತ ಗುತ್ತಿಗೆದಾರ ಶಿವಮೂರ್ತಿ ಮನೆ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದರು. ಈ ವೇಳೆ ಅವರ ಮನೆಯಲ್ಲಿ 50,000 ನಗದು ಇತ್ತು. ಆಗ ಅಧಿಕಾರಿಗಳು ಆ ಹಣವನ್ನು ವಾಪಸ್ ಕೊಟ್ಟು ಹೋಗಿದ್ದಾರೆ. ದಾಳಿ ನಡೆಸಿ ಹೋಗುವಾಗ ಅಧಿಕಾರಿಗಳು ‘ತಪ್ಪಾಯ್ತು’ ಎಂದು ಗುತ್ತಿಗೆದಾರನ ಬಳಿ ಕ್ಷಮೆಯಾಚಿಸಿದ್ದಾರೆ ಎನ್ನಲಾಗಿದೆ. ಜೆಡಿಎಸ್ ಕಾರ್ಯಕರ್ತ ಎನ್ನುವ ಕಾರಣಕ್ಕೆ ನನ್ನನ್ನು ಟಾರ್ಗೆಟ್ ಮಾಡಲಾಗಿದೆ ಎಂದು ಗುತ್ತಿಗೆದಾರ ಶಿವಮೂರ್ತಿ ಆರೋಪ ಮಾಡಿದ್ದಾರೆ.
Advertisement
ದಾಳಿ ವೇಳೆ ಎಷ್ಟು ದುಡ್ಡು ಸಿಕ್ಕಿದೆ. ಎಷ್ಟು ಬಂಗಾರ ಸಿಕ್ಕಿದೆ ಎಂಬ ಬಗ್ಗೆ ಐಟಿ ಅಧಿಕಾರಿಗಳು ಇಂದು ಅಧಿಕೃತವಾಗಿ ಹೇಳಿಕೆ ನೀಡುವ ಸಾಧ್ಯತೆಯಿದೆ. ಮೂಲಕಗಳ ಪ್ರಕಾರ ಐಟಿ ಬೇಟೆಯಲ್ಲಿ ದೊಡ್ಡ ಪ್ರಮಾಣದಲ್ಲಿ ಹಣ ಸಿಕ್ಕಿಲ್ಲವೆಂದು ಹೇಳಲಾಗುತ್ತಿದೆ.