LatestMain PostNational

ಕಾಂಗ್ರೆಸ್‍ನಿಂದ ‘ಕಪ್ಪ’ಕಾಣಿಕೆ: ಯಾರಿಗೆ ಎಷ್ಟು ಹಣ ಸಂದಾಯವಾಗಿದೆ? ಡೈರಿಯಲ್ಲಿ ಏನಿದೆ?

ನವದೆಹಲಿ: ಕಾಂಗ್ರೆಸ್ ಎಂಎಲ್‍ಸಿ ಕೆ.ಗೋವಿಂದರಾಜ್ ಅವರ ನಿವಾಸದ ಮೇಲೆ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳ ದಾಳಿ ವೇಳೆ ಸಿಕ್ಕಿದ್ದ ಡೈರಿಯ ಮಾಹಿತಿಗಳು ಬಹಿರಂಗವಾಗಿದೆ. ರಾಷ್ಟ್ರೀಯ ವಾಹಿನಿಯೊಂದು ಈ ಡೈರಿಯಲ್ಲಿರುವ ಸ್ಫೋಟಕ ಮಾಹಿತಿಯನ್ನು ಬಯಲು ಮಾಡಿದೆ.

ಸ್ಟೀಲ್ ಬ್ರಿಡ್ಜ್ 65 ಕೋಟಿ ರೂ. ಸಂದಾಯವಾಗಿದೆ ಎನ್ನುವ ಮಾಹಿತಿ ಡೈರಿಯಲ್ಲಿದೆ. ಆದರೆ ಈ ಡೈರಿಯಲ್ಲಿ ನಾಯಕರ ಹೆಸರು ಸ್ಪಷ್ಟವಾಗಿ ಉಲ್ಲೇಖಿಸಿಲ್ಲ. ಹೀಗಾಗಿ ಇಲ್ಲಿ ಡೈರಿಯಲ್ಲಿರುವ ಪ್ರಮುಖ ಅಂಶಗಳನ್ನು ನೀಡಲಾಗಿದೆ

ಡೈರಿ ನಂ. ಎ/ಕೆಜಿ/03 
======================
ಲೋಕಸಭಾ ಚುನಾವಣೆ – 2014 
ಸ್ವೀಕರಿಸಿದ ಹಣ

ಕೆಜೆಜಿ + ಎಂಬಿಪಿ [ ಕೆಜೆ ಜಾರ್ಜ್ + ಎಂಬಿ ಪಾಟೀಲ್..? ] – 219 ಕೋಟಿ ರೂ.
ಎಚ್‍ಸಿಎಂ [ ಎಚ್‍ಸಿ ಮಹದೇವಪ್ಪ..? ]- 47 ಕೋಟಿ ರೂ.
ಎಸ್‍ಬಿ – 23 ಕೋಟಿ ರೂ.
ಇತರೆ – 16.75 ಕೋಟಿ ರೂ.
ಕೆಜೆಜಿ + ಎಂಬಿಪಿ [ ಕೆಜೆ ಜಾರ್ಜ್ + ಎಂಬಿ ಪಾಟೀಲ್..? ] – 24 ಕೋಟಿ ರೂ.

ದೇಣಿಗೆ ಕೊಟ್ಟ ಹಣ 

ಎಂ.ವೋರಾ – 32 ಕೋಟಿ ರೂ.
ಆರ್‍ಜಿ ಕಚೇರಿ [ ರಾಹುಲ್ ಗಾಂಧಿ ಕಚೇರಿ..? ] – 6 ಕೋಟಿ
ಎಸ್‍ಜಿ ಕಚೇರಿ [ ಸೋನಿಯಾ ಗಾಂಧಿ ಕಚೇರಿ..? ]- 8 ಕೋಟಿ
ಡಿಜಿವಿಎಸ್ [ ದಿಗ್ವಿಜಯ್ ಸಿಂಗ್..?]- 3 ಕೋಟಿ + 4ಕೋಟಿ+ 8 ಕೋಟಿ ರೂ
ಎಚ್. ಕಾಂ – 3.5 ಕೋಟಿ ರೂ.
====================
ಬಿಬಿಎಂಪಿ ಎಲೆಕ್ಷನ್

ಸ್ವೀಕರಿಸಿದ ಹಣ

ಕೆಜೆಜಿ + ಎಂಬಿಪಿ – 32 ಕೋಟಿ ರೂ.
ಎಚ್‍ಸಿಎಂ – 10 ಕೋಟಿ ರೂ.
ಡಿಕೆಎಸ್ [ ಡಿಕೆ ಶಿವಕುಮಾರ್..? ] – 3 ಕೋಟಿ ರೂ.
ಆರ್‍ಎಲ್‍ಆರ್ [ ರಾಮಲಿಂಗರೆಡ್ಡಿ..? ]- 5 ಕೋಟಿ ರೂ.
ಆರ್‍ವಿಡಿ [ ಆರ್‍ವಿ ದೇಶಪಾಂಡೆ..? ] – 5 ಕೋಟಿ ರೂ.
ಕೆಂಪ್ [ ಕೆಂಪಯ್ಯ..? ]- 3 ಕೋಟಿ ರೂ
ರಘು – 6 ಕೋಟಿ ರೂ
ಎಸ್‍ಬಿ – 4 ಕೋಟಿ ರೂ.
ದೇಣಿಗೆ ಕೊಟ್ಟ ಹಣ

198*25 ಎಲ್ – 49.5 ಕೋಟಿ ರೂ. [ ಬಿಬಿಎಂಪಿಯ 25 ಕ್ಷೇತ್ರ ]
ಮಾಧ್ಯಮ – 7 ಕೋಟಿ ರೂ.
=====================
ಎಐಸಿಸಿ ದೇಣಿಗೆ

ಎಂ.ವೋರಾ – 15 ಕೋಟಿ ರೂ. – ಸೆಪ್ಟೆಂಬರ್
ಎಂ.ವೋರಾ – 10 ಕೋಟಿ ರೂ. – ಅಕ್ಟೋಬರ್
ಎಂ.ವೋರಾ – 25 ಕೋಟಿ ರೂ. – ಅಕ್ಟೋಬರ್
ಎಪಿ – 3 ಕೋಟಿ ರೂ. – ಜನವರಿ
=====================
ಸ್ವೀಕರಿಸಿದ ಹಣ

ಕೆಜೆಜಿ – 15 ಕೋಟಿ ರೂ. – ಸೆಪ್ಟೆಂಬರ್
ಕೆಜೆಜಿ – 20 ಕೋಟಿ ರೂ.
=====================
ಜಿಲ್ಲಾ ಪಂಚಾಯತ್ ಚುನಾವಣೆ

ಸ್ವೀಕರಿಸಿದ ಹಣ

ಸ್ಟೀಲ್ ಬ್ರಿಡ್ಜ್ – 65 ಕೋಟಿ ರೂ.
ಎಚ್‍ಬಿಪಿ – 15 ಕೋಟಿ ರೂ.
ಎಚ್‍ಸಿಎಂ – 13 ಕೋಟಿ ರೂ.
ಕೆಜೆಜಿ – 30 ಕೋಟಿ ರೂ.
ಡಿಕೆಎಸ್ – 12 ಕೋಟಿ ರೂ.

ದೇಣಿಗೆ ನೀಡಿದ್ದು

ಪ್ರತಿ ಜಿಲ್ಲಾಪಂಚಾಯತ್‍ಗೆ – ತಲಾ 5 ಲಕ್ಷ ರೂ.
ಪ್ರತೀ ತಾಲೂಕು ಪಂಚಾಯತ್ – ತಲಾ 1 ಲಕ್ಷ ರೂ
ಟಿ – 130 ಕೋಟಿ ರೂ.
ಎಐಸಿಸಿ, ಎಂ.ವೋರಾ – 15 + 8 = 23 ಕೋಟಿ ರೂ.

Leave a Reply

Your email address will not be published. Required fields are marked *

Back to top button