ಬೆಂಗಳೂರು: ಮಾಜಿ ಸಚಿವ ಡಿ.ಕೆ ಶಿವಕುಮಾರ್ ಭವಿಷ್ಯ ಇಂದು ನಿರ್ಧಾರವಾಗಲಿದೆ.
ದೆಹಲಿಯ ನಿವಾಸಗಳ ಮೇಲಿನ ಐಟಿ ದಾಳಿ ಪ್ರಕರಣ ಸಂಬಂಧ ಇಡಿ(ಜಾರಿ ನಿರ್ದೇಶನಾಲಯ) ಸಮನ್ಸ್ ರದ್ದು ಕೋರಿ ಡಿಕೆಶಿ ಸಲ್ಲಿಸಿದ್ದ ಅರ್ಜಿ ಸಂಬಂಧ ಈಗಾಗಲೇ ವಾದ ಪ್ರತಿವಾದ ಮುಕ್ತಾಯವಾಗಿದೆ. ಇಂದು ಈ ಬಗ್ಗೆ ತೀರ್ಪು ಪ್ರಕಟಗೊಳ್ಳಲಿದೆ.
Advertisement
Advertisement
ಹೀಗಾಗಿ ಡಿಕೆಶಿ ಫುಲ್ ಟೆನ್ಶನ್ ಆಗಿದ್ದಾರೆ. ದೆಹಲಿಯ ಡಿಕೆಶಿ ಹಾಗೂ ಆಪ್ತರ ನಿವಾಸಗಳ ಮೇಲೆ ಐಟಿ ದಾಳಿ ವೇಳೆ ಐಟಿ ಅಧಿಕಾರಿಗಳು 8.59 ಕೋಟಿ ಹಣ ಜಪ್ತಿ ಮಾಡಿದ್ದರು. ಹಣ ಮೂಲದ ಬಗ್ಗೆ ವಿವರಣೆ ನೀಡುವಂತೆ ಡಿಕೆಶಿ ಮತ್ತು ಆಪ್ತರಿಗೆ ಇಡಿ ಸಮನ್ಸ್ ನೀಡಿತ್ತು. ಇಡಿ ನೋಟಿಸ್ ಪ್ರಶ್ನಿಸಿ ಡಿಕೆಶಿ ಹಾಗೂ ಅವರ ತಂಡ ಹೈಕೋರ್ಟ್ ಮೇಟ್ಟಿಲೇರಿತ್ತು.
Advertisement
ದೆಹಲಿಯ 4 ಫ್ಲಾಟ್‍ಗಳ ಮೇಲೆ ಐಟಿ ಇಲಾಖೆ ದಾಳಿ ವೇಳೆ ಫ್ಲಾಟ್‍ಗಳಲ್ಲಿ 8.59 ಕೋಟಿ ರೂ. ಹಣ ಪತ್ತೆಯಾಗಿದ್ದ ಸಂದರ್ಭದಲ್ಲಿ ಸಿಕ್ಕ 41 ಲಕ್ಷ ರೂ. ನನ್ನದೆಂದು ಡಿಕೆಶಿ ಒಪ್ಪಿಕೊಂಡಿದ್ದರು. ಹೀಗಾಗಿ ಉಳಿದ 8.18 ಕೋಟಿ ರೂಪಾಯಿ ಮೂಲದ ಬಗ್ಗೆ ಐಟಿ ತನಿಖೆ ನಡೆಸುತ್ತಿತ್ತು.
Advertisement