ಬೆಂಗಳೂರು: ಇಂಧನ ಸಚಿವ ಡಿಕೆ ಶಿವಕುಮಾರ್ ಮನೆ ಮೇಲೆ ಐಟಿ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಜಾರಿ ನಿರ್ದೇಶನಾಲಯ ಕೋರ್ಟ್ ಮುಂದೆ ಡಿಕೆಶಿ ಹಾಜರಾಗಲಿದ್ದಾರೆ.
ಡಿಕೆಶಿ ಸಾಕ್ಷಿಗಳನ್ನು ನಾಶಪಡಿಸಿದ್ದಾರೆ ಅಂತ ಐಟಿ ಇಲಾಖೆ ದೂರು ದಾಖಲಿಸಿತ್ತು. ಡಿಕೆಶಿ ಮೇಲೆ ಒಟ್ಟು 3 ದೂರುಗಳನ್ನು ಐಟಿ ಇಲಾಖೆ ದಾಖಲಿಸಿದ್ದು, ವಕೀಲರ ಮೂಲಕ ಹಾಜರಾಗಿ ಬೇಲ್‍ಗೆ ಅರ್ಜಿ ಸಲ್ಲಿಸೋ ಸಾಧ್ಯತೆ ಇದೆ.
Advertisement
Advertisement
ಡಿಕೆ ಶಿವಕುಮಾರ್ ಗೆ ಜೈಲಾ, ಬೇಲಾ? ಇಂದು ನಿರ್ಧಾರವಾಗಲಿದೆ. ಇತ್ತ ಐಟಿ ಇಲಾಖೆಯಿಂದಲೂ ಪ್ರಬಲ ವಾದಕ್ಕೆ ಸಿದ್ಧತೆ ನಡೆದಿದ್ದು, ಇಂದು ಡಿಕೆಶಿಗೆ ಮಾಡು ಇಲ್ಲವೆ ಮಡಿ ಹೋರಾಟವಾಗಿದೆ. ಒಂದು ವೇಳೆ ಬೇಲ್ ಅರ್ಜಿ ತಿರಸ್ಕೃತಗೊಂಡರೆ ಡಿಕೆಶಿಗೆ ಜೈಲೇ ಗತಿ. ಈ ಹಿನ್ನಲೆಯಲ್ಲಿ ಐಟಿ ಇಲಾಖೆ ಪೋಲೀಸ್ ಬೆಂಬಲ ಕೇಳಿದೆ.
Advertisement
ಒಂದು ಕಡೆ ಡಿಕೆಶಿಗೆ ಇವತ್ತು ಇಡಿ ಕೋರ್ಟ್ ನಲ್ಲಿ ಅಗ್ನಿ ಪರೀಕ್ಷೆಯಾದ್ರೆ, ಇನ್ನೊಂದು ಕಡೆ ಐಟಿ ಇಲಾಖೆ ಡಿಕೆಶಿಗೆ ಇನ್ನೊಮ್ಮೆ ಡ್ರಿಲ್ ಮಾಡಲು ನಿರ್ಧಾರ ಮಾಡಿದೆ ಎನ್ನಲಾಗಿದೆ. ಈ ಹಿಂದೆ ಐಟಿ ಇಲಾಖೆಗೆ ನೀಡಿದ್ದ ಹೇಳಿಕೆಗಳು ಗೊಂದಲಕಾರಿಯಾಗಿರೋದ್ರಿಂದ ಡಿಕೆಶಿ ಅವರನ್ನು ಇನ್ನಷ್ಟು ಪ್ರಶ್ನೆ ಮಾಡಲು ಸಕಲ ತಯಾರಿ ನಡೆಸಿದೆ ಎಂದು ಹೇಳಲಾಗಿದೆ.