– ಸಿಆರ್‍ಪಿಎಫ್ ಭದ್ರತೆಯಲ್ಲಿ ಅಧಿಕಾರಿಗಳಿಂದ ಪರಿಶೀಲನೆ
ಬೆಂಗಳೂರು: ಆಪರೇಷನ್ ಕಮಲದ ಭೀತಿಯಿಂದ ಬಿಡದಿಯ ಈಗಲ್‍ಟನ್ ರೆಸಾರ್ಟ್‍ನಲ್ಲಿ ಬೀಡುಬಿಟ್ಟಿರುವ ಗುಜರಾತ್ ಕಾಂಗ್ರೆಸ್ ಶಾಸಕರಿಗೆ ಐಟಿ ಅಧಿಕಾರಿಗಳು ಶಾಕ್ ನೀಡಿದ್ದಾರೆ.
Advertisement
ಬೆಳ್ಳಂಬೆಳಗ್ಗೆ ರೆಸಾರ್ಟ್‍ಗೆ ಬಂದ ಅಧಿಕಾರಿಗಳು ಪ್ರತಿಯೊಬ್ಬ ಶಾಸಕರ ರೂಂಗಳಲ್ಲಿ ಪರಿಶೀಲನೆ ನಡೆಸುತ್ತಿದ್ದಾರೆ. ರೆಸಾರ್ಟ್‍ನಿಂದ ಹೊರಹೋಗುವ ಪ್ರತಿಯೊಂದು ವಾಹನಗಳನ್ನು ಪರಿಶೀಲಿಸುತ್ತಿದ್ದಾರೆ. ಸಿಆರ್‍ಪಿಎಫ್ ಭದ್ರತೆಯಲ್ಲಿ ದಾಳಿ ನಡೆಸಿದ್ದಾರೆ. 5 ಇನೋವಾ ಕಾರ್ ಗಳಲ್ಲಿ ಆಗಮಿಸಿರುವ ಸುಮಾರು 20ಕ್ಕೂ ಹೆಚ್ಚು ಅಧಿಕಾರಿಗಳು ಪರಿಶೀಲನೆಯಲ್ಲಿ ತೊಡಗಿದ್ದಾರೆ.
Advertisement
Advertisement
ಗುಜರಾತ್ ಕಾಂಗ್ರೆಸ್ ಶಾಸಕರ ಉಸ್ತುವಾರಿ ಹೊತ್ತಿರುವ ರಾಜ್ಯದ ಪವರ್ ಮಿನಿಸ್ಟರ್‍ಗೂ ಕೂಡ ಐಟಿ ಬೃಹತ್ ಶಾಕ್ ನೀಡಿದೆ. ಬೆಳ್ಳಂಬೆಳಗ್ಗೆ ಏಕಕಾಲದಲ್ಲಿ ಬೆಂಗಳೂರಿನ ಸದಾಶಿವನಗರದ ಡಿ.ಕೆ ಶಿವಕುಮಾರ್ ನಿವಾಸ, ರಾಮನಗರ, ಕನಕಪುರ ನಿವಾಸಗಳ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಡಿಕೆಶಿ ಅಷ್ಟೇ ಅಲ್ಲ ಸಹೋದರ ಡಿ.ಕೆ ಸುರೇಶ್ ಕನಕಪುರ ನಿವಾಸ, ಡಿಕೆಶಿ ಆಪ್ತ ಎಂಎಲ್‍ಸಿ ರವಿ ನಿವಾಸ ಸೇರಿದಂತೆ 10ಕ್ಕೂ ಹೆಚ್ಚು ಕಡೆಗಳಲ್ಲಿ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಬೆಳಗ್ಗೆ 7 ಗಂಟೆಯಿಂದ 20 ಕ್ಕೂ ಹೆಚ್ಚು ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.
Advertisement
ಸಚಿವ ಎಂಬಿ ಪಾಟೀಲ್, ಸಚಿವ ಕೆಜೆ ಜಾರ್ಜ್, ಸಚಿವ ಮಹದೇವಪ್ಪ ಹಾಗೂ ಎಂಎಲ್‍ಸಿ ಗೋವಿಂದರಾಜು ನಿವಾಸಗಳ ಮೇಲೂ ಐಟಿ ದಾಳಿ ನಡೆಯೋ ಸಾಧ್ಯತೆ ಇದೆ.
Income Tax Dept's raid at Karnataka energy minister DK Shivakumar's residence and Eagleton Golf Resort where Cong Gujarat MLAs are staying
— ANI (@ANI) August 2, 2017
IT raids began at 7 AM this morning; Karnataka energy Minister DK Shivakumar was in-charge of hospitality for Gujarat Cong MLAs in Bengaluru
— ANI (@ANI) August 2, 2017
IT raids underway at Karnataka energy Min DK Shivakumar's residence in Kanakapura,Sadashivanagar and Cong MLAs rooms in Eagleton Golf Resort
— ANI (@ANI) August 2, 2017
Bengaluru: I-T raids underway at Karnataka energy Minister DK Shivakumar's residence in Kanakapura, Sadashivanagar pic.twitter.com/uK4xCA9pN8
— ANI (@ANI) August 2, 2017
#Visuals from the resort: Income Tax department raids Eagleton Golf Resort in Bengaluru where Congress Gujarat MLAs are staying. pic.twitter.com/cLMzcQfkAj
— ANI (@ANI) August 2, 2017