ಬೆಂಗಳೂರು: ನಟ ಪುನೀತ್ ರಾಜ್ ಕುಮಾರ್ ಮನೆ ಮೇಲೆ ಐಟಿ ದಾಳಿ ಹಿನ್ನೆಲೆಯಲ್ಲಿ ಇಂದು ಕೂಡ ರೇಡ್ ಮುಂದುವರಿದಿದ್ದು, ಸುಮಾರು 9 ಗಂಟೆಯಿಂದ ಪುನೀತ್ ಮತ್ತು ಪತ್ನಿ ಅಶ್ವಿನಿ ಅವರನ್ನು ಐಟಿ ಅಧಿಕಾರಿಗಳು ವಿಚಾರಣೆ ಮಾಡುತ್ತಿದ್ದಾರೆ.
ಪುನೀತ್ ರಾಜ್‍ಕುಮಾರ್ ಅವರು ಐಟಿ ಅಧಿಕಾರಿಗಳು ಕೇಳುತ್ತಿರುವ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದು, ನನ್ನ ವ್ಯವಹಾರದ ಬಗ್ಗೆ ನನ್ನ ಬಳಿ ದಾಖಲೆ ಇವೆ. ಆದರೆ ದಾಖಲೆ ಸಲ್ಲಿಸಲು ಸ್ವಲ್ಪ ಸಮಯ ಬೇಕು. ಸಾಕಷ್ಟು ವ್ಯವಹಾರ ಮಾಡಿರುವುದರಿಂದ ಸ್ವಲ್ಪ ಗೊಂದಲವಿದೆ. ಪ್ರತಿಯೊಂದಕ್ಕೂ ರಶೀದಿ ಇಟ್ಟಿದ್ದೀನಿ. ಹೀಗಾಗಿ ದಾಖಲೆ ಸಲ್ಲಿಸಲು ಸ್ವಲ್ಪ ಕಾಲಾವಕಾಶ ಕೊಡಿ ಎಂದು ನಟ ಪುನೀತ್ ಸಮಾಧಾನವಾಗಿಯೇ ಅಧಿಕಾರಿಗಳ ಜೊತೆ ಮಾತನಾಡುತ್ತಿದ್ದಾರೆ ಎಂಬ ಮಾಹಿತಿ ತಿಳಿದು ಬಂದಿದೆ. ಇದನ್ನೂ ಓದಿ: ಪುನೀತ್ ವಿರುದ್ಧ ತೆರಿಗೆ ವಂಚನೆ ಮಾಡಿರುವ ಆರೋಪ- ಮುಂದುವರಿದ ಐಟಿ ದಾಳಿ
Advertisement
Advertisement
ಗುರುವಾರ ಐಟಿ ಅಧಿಕಾರಿಗಳು ದಾಳಿ ಮಾಡಿದ್ದಾಗ ಚಿನ್ನಾಭರಣಗಳ ಮೌಲ್ಯ, ಕೆಲವೊಂದು ಆಸ್ತಿ ಪತ್ರಗಳ ಮೌಲ್ಯ ಮಾಡಲಾಗಿತ್ತು. ಇಂದು ಆಸ್ತಿ ಪತ್ರಗಳ ಬಗ್ಗೆ ಪ್ರಶ್ನೆಗಳನ್ನು ಕೇಳುತ್ತಿದ್ದಾರೆ. ಅಷ್ಟೇ ಅಲ್ಲದೇ ಪುನೀತ್ ರಾಜ್‍ಕುಮಾರ್ ದಂಪತಿಯ ಬ್ಯಾಂಕ್ ಅಕೌಂಟ್‍ಗಳ ಮಾಹಿತಿಯನ್ನು ಐಟಿ ಅಧಿಕಾರಿಗಳು ಪಡೆದುಕೊಂಡಿದ್ದು, ಮನೆಯಿಂದ ಬ್ಯಾಂಕ್ ಡಿಟೈಲ್ಸ್ ನೊಂದಿಗೆ ಅಕೌಂಟ್ ಡಿಟೈಲ್ಸ್ ತೆಗೆಯಲು ಅಧಿಕಾರಿಗಳು ಬ್ಯಾಂಕ್ ಗಳಿಗೆ ತೆರಳಿದ್ದಾರೆ.
Advertisement
Advertisement
ಬಿಗ್ ಬಜೆಟ್ ಸಿನಿಮಾಗಳಿಂದ ಪುನೀತ್ ರಾಜ್‍ಕುಮಾರ್ ಕೋಟ್ಯಂತರ ರೂಪಾಯಿ ಹಣ ಗಳಿಸಿದ್ದರು. ಆದರೆ ಆದಾಯ ತೆರಿಗೆ ಕಟ್ಟದೇ ವಂಚಿಸಿದರು ಎಂಬ ಆರೋಪ ಕೇಳಿಬಂದಿತ್ತು. ಹೀಗಾಗಿ ಇಂದು ಬೆಳಗ್ಗೆ ಐಟಿ ಅಧಿಕಾರಿಗಳು ಪುನೀತ್ ಅವರು ಮನೆಗೆ ಹೋಗಿದ್ದಾರೆ. ತಡರಾತ್ರಿ ಪರಿಶೀಲನೆ ಮುಗಿತು ಎಂದು ಐಟಿ ಅಧಿಕಾರಿಗಳು ತೆರಳಿದ್ದರು. ಆದರೆ ಬಳಿಕ ಮಧ್ಯರಾತ್ರಿ ಮತ್ತೆ ಪುನೀತ್ ಮನೆಗೆ ಎಂಟ್ರಿ ಕೊಟ್ಟು ಪರಿಶೀಲನೆ ನಡೆಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv